ತೈಪೆ: ತೈವಾನ್ ನಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ನೆಲಕ್ಕೆ ದೊಡ್ಡ ಕಟ್ಟಡ ಉರುಳಿ ಬಿದ್ದಿದೆ. ಅಲ್ಲದೇ, ಬರೋಬ್ಬರಿ 80ಕ್ಕೂ ಅಧಿಕ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ.

ತೈವಾನ್ ನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ 80ಕ್ಕೂ ಅಧಿಕ ಸಲ ಭೂಮಿ ಕಂಪಿಸ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ತೈವಾನ್ ನಲ್ಲಿ ಮಧ್ಯರಾತ್ರಿ 2:230ರ ಸಮಯದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಆ ವೇಳೆ ಹುವಾಲಿಯನ್‌ನ ಪೂರ್ವ ಕೌಂಟಿಯಲ್ಲಿ ಭೂಮಿಯಿಂದ 5.5 ಕಿಲೋ ಮೀಟರ್ ಗಳಷ್ಟು ಆಳದಲ್ಲಿ ಭೂಕಂಪನ ಸಂಭವಿಸಿದೆ.

ಭೂಕಂಪನದಿಂದಾಗಿ ಹುವಾಲಿಯನ್ ಪ್ರದೇಶದಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಒಂದು ಕಟ್ಟಡ ಕುಸಿದು ಬಿದ್ದಿದೆ. ಮತ್ತೊಂದು ಕಟ್ಟಡ ರಸ್ತೆಗೆ ವಾಲಿದೆ. ತೈವಾನ್ ಅಲ್ಲದೇ, ಜಪಾನ್, ಚೀನಾ ಹಾಗೂ ಫಿಲಿಪೈನ್ಸ್ ನಲ್ಲಿ ಕೂಡ ಲಘು ಭೂಕಂಪನ ಸಂಭವಿಸಿದೆ. ಆದರೆ, ಇದುವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿದ ಕುರಿತು ವರದಿಯಾಗಿಲ್ಲ. 1999 ರಲ್ಲಿ ತೈವಾನ್‌ನಲ್ಲಿ 2,400ಕ್ಕೂ ಅಧಿಕ ಜನರು ಭೂಕಂಪನಕ್ಕೆ ಬಲಿಯಾಗಿದ್ದರು.