ನೆರೆಯ ರಾಷ್ಟ್ರಗಳೊಂದಿಗೆ ಯಾವುದಾದರೂ ಒಂದು ವಿಚಾರಕ್ಕೆ ಒಂದಲ್ಲ ಒಂದು ದೇಶ ಖ್ಯಾತೆ ತೆಗೆಯುತ್ತಲೇ ಇರುತ್ತವೆ. ಪಾಕಿಸ್ತಾನ, ಭಾರತ ಮತ್ತು ಚೀನಾ ನಡುವೆಯೂ ಆಗಾಗ ಭಿನ್ನ ವಿಚಾರಗಳಿಗೆ ವಾಕ್ಸಮರ ನಡೆಯುತ್ತಲೇ ಇವೆ. ಈ ನಡುವೆ ಚೀನಾ ಮತ್ತು ತೈವಾನ್ ನಡುವೆ ಸಮರ ಶುರುವಾಗಿದೆ. ತೈವಾನ್ ಮೇಲೆ ಹಿಡಿತ ಸಾಧಿಸಲು ಚೀನಾ ಬರೊಬ್ಬರಿ 56 ಯುದ್ಧ ವಿಮಾನಗಳನ್ನು ಕಳುಹಿಸಿದೆ.
ಚೀನಾ ತೈವಾನ್‌ನತ್ತ ಯುದ್ಧ ವಿಮಾನಗಳನ್ನು ಕಳುಹಿಸಿದೆ. ಚೀನಾದ ಬರೊಬ್ಬರಿ 56 ಯುದ್ಧ ವಿಮಾನಗಳು ತೈವಾನ್‌ನ ಆಗಸದಲ್ಲಿ ಹಾರಾಟ ನಡೆಸಿವೆ. ಈ ಮೂಲಕ ವಿನಾಕಾರಣ ತೈವಾನ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುತ್ತದೆ. ಹೀಗಾಗಿಯೇ ಪರಮಾಣು ಅಸ್ತ್ರಗಳ ಸಹಿತ ವಿಮಾನಗಳು ಹಾರಾಡಿವೆ. ಇದರಿಂದಾಗಿ ದಕ್ಷಿಣ ತೀನಾ ಸಮುದ್ರ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಿದೆ.
ಇನ್ನು ಚೀನಾದ ಹೀಗೆ ಟಾರ್ಗೆಟ್ ಮಾಡುತ್ತಿದ್ದಂತೆಯೇ ತೈವಾನ್ ಕೂಡಾ ಎಚ್ಚರಿಕೆ ನೀಡಿದೆ. ತನ್ನ ವಾಯು ವಲಯದಲ್ಲಿ ಚೀನಾದ ವಿಮಾನಗಳು ಹಾರಾಟ ನಡೆಸಿ ಆಕ್ರಮಣಕಾರಿ ಮತ್ತು ಬೇಜವಾಬ್ದಾರಿಯುತ ನಡೆ ಪ್ರದರ್ಶಿಸಿದೆ ಎಂದು ತೈವಾನ್ ಟೀಕಿಸಿದೆ. ಈ ಮೂಲಕ ಅನಗತ್ಯವಾಗಿ ಪ್ರಚೋದನೆಗಿಳಿದಿದೆ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಡಳಿತ ವ್ಯವಸ್ಥಿತವಾಗಿ ಯುದ್ಧ ಸನ್ನಿವೇಶ ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ.
ತೈವಾನ್ ರಕ್ಷಣಾ ವಲಯಕ್ಕೆ 36 ಫೈಟರ್ ಜೆಟ್‌ಗಳನ್ನು ಚೀನಾ ಕಳುಹಿಸಿದೆ. ಅಲ್ಲದೆ 12 ಎಚ್ -6 ಪರಮಾಣು ಸಾಮರ್ಥ್ಯದ ಬಾಂಬರ್‌ಗಳು, ನಾಲ್ಕು ಜೆಟ್‌ಗಳು ಸೇರಿ ಒಟ್ಟು 56 ಯುದ್ಧ ವಿಮಾನಗಳು ತೈವಾನ್ ರಕ್ಷಣಾ ವಲಯ ಪ್ರವೇಶಿಸಿವೆ. ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾದಂತೆ ಚೀನಾ ಅಧಿಪತ್ಯಕ್ಕೆ ಮುಂದಾಗಿದೆ. ಈ ಘಟನೆಯ ಬಗ್ಗೆ ಅಮೇರಿಕಾ ಸೇರಿದಂತೆ ಮಿತ್ರ ದೇಶಗಳು ಕಳವಳ ವ್ಯಕ್ತಪಡಿಸಿದೆ.
ಚೀನಾ ಮತ್ತು ತೈವಾನ್ ನಡುವೆ ಉದ್ವಿಗ್ನತೆ ಏರ್ಪಡುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಈ ಬಾರಿ ಒಂದು ಹೆಜ್ಜೆ ಹೆಚ್ಚೇ ಮುಂದಿಟ್ಟಿರುವ ಚೀನಾ ಆಕ್ರಮಣಕಾರಿ ನಡೆಯನ್ನ ಪ್ರದರ್ಶಿಸಿದೆ. ಇದು ದಕ್ಷಿಣ ಚೀನಾ ಸಮುದ್ರದ ರಾಷ್ಟ್ರಗಳಲ್ಲೂ ಕಳವಳ ಮೂಡಿಸಿದೆ.