ಮಹಿಳಾ ಆಕ್ರೋಶಕ್ಕೆ ಗುರಿಯಾಯ್ತು ಹೆಬ್ಬಾಳ್ಕರ್ ಕುರಿತ ಸಂಜಯ್ ಪಾಟೀಲ್ ಹೇಳಿಕೆ!
ಯಾವುದೇ ಸಭ್ಯ ಸಮಾಜ ತಲೆತಗ್ಗಿಸುವಂತೆ, ಮಹಿಳೆಯರ ಕುರಿತ ರಾಜಕೀಯ ನಾಯಕರ ಹೇಳಿಕೆ ಮತ್ತು ನಡವಳಿಕೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಅದರಲ್ಲೂ ಭಾರತೀಯ ಸಂಸ್ಕೃತಿಯ ವಾರಸುದಾರರು ತಾವು ಮಾತ್ರ ಎಂದು ಹೇಳಿಕೊಳ್ಳುವ ಸ್ವಘೋಷಿತ ಸಾಂಸ್ಕೃತಿಕ ವಕ್ತಾರರಾದ ಭಾರತೀಯ ಜನತಾ ಪಕ್ಷದ ಮುಖಂಡರ ಕೀಳು ಮನಸ್ಥಿತಿಯ ಧೋರಣೆಗಳು ಮತ್ತೆ ಮತ್ತೆ ವಿವಾದಕ್ಕೀಡಾಗುತ್ತಲೇ ಇವೆ. ಇದೀಗ ಗಡಿ ಜಿಲ್ಲೆ ಬೆಳಗಾವಿಯ ಗ್ರಾಮೀಣ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ, ಅಲ್ಲಿನ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ನೀಡಿರುವ ನಾಚಿಕೆಗೇಡಿನ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. “ರಾತ್ರಿ ರಾಜಕೀಯದ ಸಂಸ್ಕೃತಿ ಗೊತ್ತಿದ್ದರಿಂದಲೇ ಹೆಬ್ಬಾಳಕರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲದಿದ್ದರೆ ಅವರು ಶಾಸಕಿ ಆಗುವುದಕ್ಕೆ ಸಾಧ್ಯವಿರಲಿಲ್ಲ” ಎಂದು ಹೇಳುವ ಮೂಲಕ ಜನಪ್ರತಿನಿಧಿಯೊಬ್ಬರ ಬಗ್ಗೆ, ಮಹಿಳಾ ನಾಯಕಿಯೊಬ್ಬರ ಬಗ್ಗೆ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನೀಡಿರುವ ಹೇಳಿಕೆ, ಮಾಜಿ ಶಾಸಕರೂ ಆದ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಮಾತ್ರವಲ್ಲದೆ, ಸದಾ ಮಹಿಳೆಯರು ಮತ್ತು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ, ದೇಶದ ಘನತೆ-ಗೌರವ ಎತ್ತಿಹಿಡಿಯುವ ಮಾತನಾಡುವ ಭಾರತೀಯ ಜನತಾ ಪಕ್ಷ, ವಾಸ್ತವವಾಗಿ ಮಹಿಳೆಯರಿಗೆ ಯಾವ ಮಟ್ಟಿನ ಗೌರವ ನೀಡುತ್ತದೆ ಎಂಬುದಕ್ಕೂ ಸಾಕ್ಷಿಯಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. https://youtu.be/3tNSbDq93MY ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳ ದುಃಸ್ಥಿತಿ ಕುರಿತು ಕಳೆದ ಕೆಲವು ದಿನಗಳಿಂದ ಮಾಜಿ ಶಾಸಕರು ಮತ್ತು ಹಾಲಿ ಶಾಸಕಿ ನಡುವೆ ವಾಕ್ಸಮರ ನಡೆಯುತ್ತಿತ್ತು. ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಅಭಿಮಾನಿಗಳು ಬೆಂಬಲಿಗರ ನಡುವೆ ಪರಸ್ಪರ ಪೋಸ್ಟರ್ ವಾರ್ ಗೂ ಇದು ಕಾರಣವಾಗಿತ್ತು. ಪೋಸ್ಟರ್ ವಿಷಯದಲ್ಲಿ ...
Read moreDetails