ಉತ್ಕೃಷ್ಟತೆಯ ಕೊರತೆಯಲ್ಲಿ ವಿಶ್ವವಿದ್ಯಾಲಯಗಳು..
ಮೂಲ : ಪುಲಾಪ್ರೆ ಬಾಲಕೃಷ್ಣನ್ Falling Short of Excellence – ಇಂಡಿಯನ್ ಎಕ್ಸ್‌ಪ್ರೆಸ್ 26-04-2023 ಅನುವಾದ : ನಾ ದಿವಾಕರ ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಉನ್ನತ ...
Read moreDetailsಮೂಲ : ಪುಲಾಪ್ರೆ ಬಾಲಕೃಷ್ಣನ್ Falling Short of Excellence – ಇಂಡಿಯನ್ ಎಕ್ಸ್‌ಪ್ರೆಸ್ 26-04-2023 ಅನುವಾದ : ನಾ ದಿವಾಕರ ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಉನ್ನತ ...
Read moreDetailsದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು University Grants Commission (UGC) ಘೋಷಿಸಿದೆ. ಇದರೊಂದಿಗೆ ಎರಡು ಇತರ ವಿಶ್ವವಿದ್ಯಾಲಯಗಳು ಯುಜಿಸಿಯ ನಿಮಯಗಳನ್ನು ಮೀರಿ ಕಾರ್ಯಚರಿಸುತ್ತಿವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಧರ್ಮೇಂದ್ರ ಪ್ರಧಾನ್ ಅವರು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮೂಲಕ ಬಂದಿರುವ ದೂರುಗಳನ್ನು ಯುಜಿಸಿ ಪರಿಗಣಿಸಿತ್ತು. ಆ ನಂತರ 24 ವಿವಿಗಳನ್ನು ನಕಲಿ ಎಂದು ಘೋಷಿಸಿದೆ, ಎಂದಿದ್ದಾರೆ. “ಇನ್ನೆರಡು ವಿಶ್ವವಿದ್ಯಾಲಯಗಳು, ಉತ್ತರ ಪ್ರದೇಶದ ಲಕ್ನೋದಲ್ಲಿ ಇರುವಂತಹ ಭಾರತೀಯ ಶಿಕ್ಷಾ ಪರಿಷದ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್, ನವದೆಹಲಿ 1956ರ ಯುಜಿಸಿ ಕಾಯ್ದೆಗೆ ವಿರುದ್ದವಾಗಿ ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ. ಇವೆರಡೂ ವಿವಿಗಳ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ,” ಎಂದು ಹೇಳಿದ್ದಾರೆ. ನಕಲಿ ವಿವಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ವಾರಣಾಸೇಯ ಸಂಸ್ಕೃತ ವಿವಿ, ವಾರಣಾಸಿ; ಮಹಿಳಾ ಗ್ರಾಮ್ ವಿದ್ಯಾಪೀಠ್, ಅಲಹಾಬಾದ್; ಗಾಂಧಿ ಹಿಂದಿ ವಿದ್ಯಾಪೀಠ್, ಅಲಹಾಬಾದ್; ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಕಾನ್ಪುರ್; ನೀತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿವಿ, ಆಲಿಗಢ್; ಉತ್ತರಪ್ರದೇಶ ವಿವಿ, ಮಥುರಾ; ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿವಿ, ಪ್ರತಾಪಗಢ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ ಇವು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದಂತಹ ಎಂಟು ನಕಲಿ ವಿವಿಗಳು. ದೆಹಲಿಯಲ್ಲಿ ಏಳು ನಕಲಿ ವಿವಿಗಳು ಪತ್ತೆಯಾಗಿವೆ. ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಚನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಡಿಆರ್ ಸೆಂಟ್ರಿಕ್ ಜ್ಯೂರಿಡೀಷಿಯಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಮುಕ್ತ ವಿವಿ ಮತ್ತು ಆಧ್ಯಾತ್ಮಿಕ ವಿವಿ ಎಂಬ ವಿವಿಗಳು ನಕಲಿಯಾಗಿವೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ನಕಲಿ ವಿವಿಗಳು ಪತ್ತೆಯಾಗಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್, ಕೊಲ್ಕತ್ತಾ ಹಾಗೂ ಅಲ್ಟರ್ನೇಟಿವ್ ಮೆಡಿಸಿನ್ ಆ್ಯಂಡ್ ರೀಸರ್ಚ್, ಕೊಲ್ಕತ್ತಾ ಇವು ಪಶ್ಚಿಮ ಬಂಗಾಳದಲ್ಲಿ ಇರುವ ನಕಲಿ ವಿವಿಗಳು. ಇನ್ನು ಒಡಿಶಾದಲ್ಲಿ ನಬಭಾರತ್ ಶಿಕ್ಷಾ ಪರಿಷದ್, ರೌರ್ಕೇಲಾ ಹಾಗೂ ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿ ಎಂಬ ಎರಡು ನಕಲಿ ವಿವಿಗಳು ಕಾರ್ಯಾಚರಿಸುತ್ತಿವೆ. ಉಳಿದಂತೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೆರಿಯಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಒಂದು ನಕಲಿ ವಿವಿಗಳಿವೆ. ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಪುದುಚೆರಿ; ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಆಂಧ್ರ ಪ್ರದೇಶ; ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್; ಸೈಂಟ್ ಜಾನ್ಸ್ ಯೂನಿವರ್ಸಿಟಿ, ಕೇರಳ ಹಾಗೂ ಬಡಗಾನ್ವಿ ಸರ್ಕಾರ್ ವಿಶ್ವ ಮುಕ್ತ ವಿವಿ, ಕರ್ನಾಟಕದಲ್ಲಿರುವ ನಕಲಿ ವಿವಿಗಳು. ಈ ನಕಲಿ ವಿವಿಗಳ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರಣಕ್ಕೆ ಪತ್ರಿಕೆಗಳಲ್ಲಿ ಯುಜಿಸಿ ಪರವಾಗಿ ಜಾಹಿರಾತು ನೀಡಲಾಗುವುದು. ಇಷ್ಟು ಮಾತ್ರವಲ್ಲದೇ, ಆಯಾ ರಾಜ್ಯಗಳ ರಾಜ್ಯ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಕಾರ್ಯದರ್ಶಿಗಳಿಗೆ ಮತ್ತು ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
Read moreDetailsಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ ಎಂಟು ನಕಲಿ ವಿಶ್ವವಿದ್ಯಾಲಯಗಳಿವೆ. ಆ ನಂತರದ ಸ್ಥಾನದಲ್ಲಿ ದೆಹಲಿ ಇದ್ದರೆ, ಕರ್ನಾಟಕದ ಒಂದು ವಿಶ
Read moreDetailsವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆಗಳು ಅತ್ಯಗತ್ಯ, ಪರೀಕ್ಷೆಗಳಿಲ್ಲದೆ ಪದವಿಯನ್ನು ನೀಡಲಾಗುವುದಿಲ್ಲ-UGC
Read moreDetails© 2024 www.pratidhvani.com - Analytical News, Opinions, Investigative Stories and Videos in Kannada