Tag: PM Cares fund

ಲಸಿಕೆ ಖರೀದಿಸಲು ಸಾಲಕ್ಕೆ ಬೇಡಿಕೆಯಿಟ್ಟ ಕೇಂದ್ರ ; PM-CARES ನಿಧಿ ಎಲ್ಲಿ ಹೋಯಿತು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಖರ್ಚು ನಿಭಾಯಿಸಲು ಅಂತರರಾಷ್ಟ್ರೀಯ ಬ್ಯಾಂಕುಗಳಿಮದ ಸಾಲ ಪಡೆಯಲು ಮುಂದಾಗಿದೆ. ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ‘ಸುರಕ್ಷಿತ ಹಾಗೂ ಪರಿಣಾಮಕಾರಿ ಕೋವಿಡ್ ಲಸಿಕೆ’ ಪಡೆಯಲು 500 ಮಿಲಿಯನ್ ಡಾಲರ್ ಮೊತ್ತದ ಸಾಲ ಕೇಳಿದೆ! ಇದಲ್ಲದೇ, ಏಷಿಯಾ ಪೆಸಿಫಿಕ್ ವ್ಯಾಕ್ಸಿನ್ ಆ್ಯಕ್ಸೆಸ್ ಫೆಸಿಲಿಟಿ ಪ್ರೋಗ್ರಾಂ (Asia Pacific Vaccine Access Facility programme) ಅಡಿಯಲ್ಲಿ ಕೂಡಾ ನಾಲ್ಕು ಮಿಲಿಯನ್ ಡಾಲರ್  ಸಾಲವನ್ನು ಭಾರತ ಪಡೆಯಲಿದೆ. ಈ ಸಾಲವನ್ನು ತಾಂತ್ರಿಕ ವಿಭಾಗಗಳಾದ ಲಸಿಕಾ ಕೇಂದ್ರಗಳ ಅಭಿವೃದ್ದಿ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಬಳಸಲಾಗುವುದು.  ಅಂದಹಾಗೆ ಲಸಿಕೆಗಳಿಗಾಗಿ ಭಾರತ ಮಾಡಿರುವುದು ಕೇವಲ ಇಷ್ಟು ಮಾತ್ರ ಸಾವಲ್ಲ. ಇದಕ್ಕು ಮೊದಲು ಏಷಿಯನ್ ಡೆವೆಲಪ್ಮೆಂಟ್ ಬ್ಯಾಂಕಿನಿಂದ ಲಸಿಕೆ ಖರೀದಿಗಾಗಿ 1.5 ಬಿಲಿಯನ್  ಡಾಲರ್ ಮೊತ್ತದ ಹಣ, ಸಾಲದ ರೂಪದಲ್ಲಿ ಭಾರತಕ್ಕೆ ಸಿಗಲಿದೆ. 670  ಮಿಲಿಯನ್ ಡೋಸ್ ಲಸಿಕೆ ಖರೀದಿಸಲು ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ಸಾಲ  ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ.  ಈವರೆಗೆ ಲಸಿಕಾ ಅಭಿಯಾನಕ್ಕೆ ಸರ್ಕಾರ ಎಷ್ಟು ಮೊತ್ತವನ್ನು ವ್ಯಯಿಸಿದೆ ಎಂಬ ಕುರಿತು ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ, ಸರ್ಕಾರವು ಒಂದು ಬಿಲಿಯನ್ ಡೋಸ್ ಲಸಿಕೆಗೆ ಅಂದಾಜು ರೂ.19,000 ಖರ್ಚು ಮಾಡಿದೆ. ಸುಪ್ರೀಂ ಕೋರ್ಟ್’ಗೆ ಸರ್ಕಾರ ನೀಡಿರುವ ಅಫಿಡವಿಟ್ ಹಾಗೂ ಪಾರ್ಲಿಮೆಂಟ್’ನಲ್ಲಿ ಸಚಿವರು ನೀಡಿರುವ ಉತ್ತರದ ಆಧಾರದ ಮೇಲೆ ಈ ಅಂದಾಜು ಲೆಕ್ಕ ಹಾಕಲಾಗಿದೆ.  ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಗೆ ಇತ್ತೀಚಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸರ್ಕಾರವೂ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಖುಶಿಪಟ್ಟಿತ್ತು. ಆದರೆ, ಲಸಿಕೆ ಪಡೆಯಲು ಭಾರತ ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಅಗತ್ಯವಿತ್ತೇ?  ಎಲ್ಲಿ ಹೋಯಿತು PM CARES ನಿಧಿ? 2020ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಪಿಎಂ ಕೇರ್ಸ್ ನಿಧಿ ತೆರೆದಿರುವ ಘೋಷಣೆ ಮಾಡಿದರು. ಸಿಎಸ್ಆರ್ ನಿಧಿಯ ಹಣವನ್ನು ಪಿಎಂ ಕೇರ್ಸ್’ಗೆ ನೀಡಿದ್ದಲ್ಲಿ ಅಂತಹ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ಆದರೆ, ಇದೊಂದು ಖಾಸಗಿ ಟ್ರಸ್ಟ್, ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿ ನಿಧಿಯ ಪಾರದರ್ಶಕತೆಗೆ ಪರದೆ ಮುಚ್ಚಿದ್ರು.  ಹಲವು ಸಂಸ್ಥೆಗಳು ನೀಡಿರುವ ವರದಿಯ ಪ್ರಕಾರ ಕೇವಲ 52 ದಿನಗಳಲ್ಲಿ ಈ ನಿಧಿಗೆ ಬರೋಬ್ಬರಿ 1.27 ಬಿಲಿಯನ್ ಡಾಲರ್ ಹಣ ಹರಿದು ಬಂದಿತ್ತು. ಇದು ಕೇವಲ ಬೃಹತ್ ಕಾರ್ಪೊರೇಟ್ ಕಂಪನಿ ಹಾಗೂ ಕೇಂದ್ರ ಸರ್ಕಾರದ ನೌಕರರ ಒಂದು ದಿನದ ಸಂಬಳದ ದೇಣಿಗೆಯ ಅಂದಾಜು ಲೆಕ್ಕಾಚಾರವಷ್ಟೇ. ವೈಯಕ್ತಿಕವಾಗಿ ನೀಡಿರುವ ದೇಣಿಗೆ ಮತ್ತು ಸಣ್ಣ ಪುಟ್ಟ ಸಂಸ್ಥೆಗಳ ದೇಣಿಗೆ ಇದರಲ್ಲಿ ಸೇರಿಲ್ಲ.  ಪ್ರಧಾನ ಮಂತ್ರಿ ಪರಿಹಾರ ನಿಧಿ ಎಂಬ ಖಾತೆ ನೇರವಾಗಿ ಪ್ರಧಾನಿ ಕಚೇರಿಯಡಿ ಕಾರ್ಯನಿರ್ವಹಿಸುತ್ತಿದ್ದರೂ, ಅದನ್ನು ಪರಿಗಣಿಸಲಾಗಿಲ್ಲ. ...

Read moreDetails

PM-CARES FUND ಭಾರತ ಸರ್ಕಾರದ ನಿಧಿಯಲ್ಲ: ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಅಫಿಡವಿಟ್

ಪಿಎಂ ಕೇರ್ಸ್ ಫಂಡ್ ಕೇಂದ್ರ ಸರ್ಕಾರದ ನಿಧಿಯಲ್ಲ . ಈ ನಿಧಿಯಡಿ ಸಂಗ್ರಹವಾಗುವ ಮೊತ್ತ ಕನ್ಸಾಲಿಡೇಟೆಡ್  ಫಂಡ್ ಆಫ್ ಇಂಡಿಯಾಕ್ಕೆ ಸಂದಾಯವಾಗುವುದಿಲ್ಲ ’ ಎಂದು ಪ್ರಧಾನಮಂತ್ರಿ ಕಚೇರಿ ...

Read moreDetails

ಪ್ರಧಾನಿ ಕಾಳಜಿ ಬೆತ್ತಲಾಗಿಸಿತೆ ‘ಪಿಎಂ ಕೇರ್ಸ್ ವೆಂಟಿಲೇಟರ್’ ಖರೀದಿ ವ್ಯವಹಾರ?

ಒಟ್ಟಾರೆ ಇಡೀ ಪಿಎಂ ಕೇರ್ಸ್ ನಿಧಿ ಬಳಕೆ ಮತ್ತು ಅದರ ನಿರ್ವಹಣೆಯ ವಿಷಯದಲ್ಲಿ ಸಾರ್ವಜನಿಕ ವಲಯದಲ್ಲಿ ಈವರೆಗೆ ಎದ್ದಿರುವ ಅನುಮಾನಗಳನ್ನು

Read moreDetails

PM-CARES Fundಗೆ ಚೀನಾ ಮೂಲದ ಕಂಪೆನಿಗಳಿಂದ ಏಕೆ ದೇಣಿಗೆ ಪಡೆದಿರಿ? – ಕಾಂಗ್ರೆಸ್ ಪ್ರಶ್ನೆ

ರಾಜೀವ್ ಗಾಂಧಿ ಫೌಂಡೇಷನ್‌ಗೆ ಚೀನಾ ಮೂಲದ ಸಂಸ್ಥೆಗಳಿಂದ ದೇಣಿಗೆ ನೀಡಲಾಗಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ಅನ್ನು ಮುಜುಗರಕ

Read moreDetails

ಪ್ರತಿಹಂತದಲ್ಲೂ ಗೊಂದಲ ಸೃಷ್ಟಿಸಿ ಪಲಾಯನ ಮಾಡುತ್ತಿರುವ ಮೋದಿ ಸರ್ಕಾರ

2,923 ವೆಂಟಿಲೇಟರ್ ತಯಾರಿಸಿದ್ದು 1,340 ವೆಂಟಿಲೇಟರ್ ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ. ಇಲ್ಲೂ ದಕ್ಷಿಣ

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!