• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

PM-CARES Fundಗೆ ಚೀನಾ ಮೂಲದ ಕಂಪೆನಿಗಳಿಂದ ಏಕೆ ದೇಣಿಗೆ ಪಡೆದಿರಿ? – ಕಾಂಗ್ರೆಸ್ ಪ್ರಶ್ನೆ

by
June 29, 2020
in ದೇಶ
0
PM-CARES Fundಗೆ ಚೀನಾ ಮೂಲದ ಕಂಪೆನಿಗಳಿಂದ ಏಕೆ ದೇಣಿಗೆ ಪಡೆದಿರಿ? – ಕಾಂಗ್ರೆಸ್ ಪ್ರಶ್ನೆ
Share on WhatsAppShare on FacebookShare on Telegram

ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಚೀನಾ ಮೂಲದ ಸಂಸ್ಥೆಗಳಿಂದ ದೇಣಿಗೆ ನೀಡಲಾಗಿದೆ ಎಂದು ಬಿಜೆಪಿ ಮಾಡಿರುವ ಆರೋಪಗಳಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ಭಾರತ-ಚೀನಾ ಗಡಿಯಲ್ಲಿ ಆತಂಕದ ವಾತಾವರಣವಿದ್ದರೂ PM-CARES Fund ಗೆ ಚೀನಾ ಮೂಲದ ಕಂಪೆನಿಗಳಿಂದ ಬಂದಿರುವ ದೇಣಿಗೆಯನ್ನು ಯಾಕೆ ಸ್ವೀಕರಿಸಿದಿರಿ ಎಂದು ಕಾಂಗ್ರೆಸ್‌ ಮರುಪ್ರಶ್ನೆ ಹಾಕಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ 18 ಭೇಟಿಗಳ ಕುರಿತು ಪ್ರಸ್ತಾಪ ಎತ್ತಿರುವ ಕಾಂಗ್ರೆಸ್‌ನ ವಕ್ತಾರ ಅಭಿಷೇಕ್‌ ಸಿಂಘ್ವಿ ಚೀನಾ ಭಾರತದ ಮೇಲೆ ಮೊದಲು ದಾಳಿ ಮಾಡಿತು ಎಂಬ ವಿಚಾರವನ್ನು ಪ್ರಧಾನಿ ಮೋದಿ ಏಕೆ ಹೇಳಲಿಲ್ಲ ಎಂದು ಪ್ರಶ್ನೆ ಹಾಕಿದ್ದಾರೆ.

“ಪ್ರಧಾನಿಯವರು ತಮ್ಮ ಸ್ವಂತ ಖಾತೆಯಂತೆ ನಿಭಾಯಿಸುತ್ತಿರುವ PM-CARES Fundಗೆ ಚೀನಾ ಮೂಲದ ಕಂಪೆನಿಗಳಿಂದ ಬಂದಿರುವ ದೇಣಿಗೆ, ಭಾರತದ ಸುರಕ್ಷತೆಗೆ ಧಕ್ಕೆ ತರುವಂತಹ ವಿಚಾರ. ಚೀನಾ ಭಾರತದ ಮೇಲೆ ಮೊದಲು ದಾಳಿ ಮಾಡಿತು ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಹೇಳಬೇಕು,” ಎಂದು ಅವರು ಆಗ್ರಹಿಸಿದರು.

PM-CARES Fundನಂತಹ ವಿವಾದಿತ ಅಂಶಗಳಿಗೆ ಪ್ರಧಾನಿ ಮೋದಿಯವರು ನೂರಾರು ಕೋಟಿಗಳ ದೇಣಿಯನ್ನು ಸ್ವೀಕರಿಸಿದರೆ ಚೀನಾ ಕುರಿತ ಅವರ ನಿಲುವು ಮಹತ್ವವನ್ನು ಕಳೆದುಕೊಳ್ಳುತ್ತದೆ. ಪರಿಸ್ಥಿತಿ ಹೀಗಿರುವಾಗ ಅವರು ಚೀನಾದ ತಪ್ಪುಗಳನ್ನು ಹೇಗೆ ಎತ್ತಿ ಹಿಡಿಯುತ್ತಾರೆ? ಪ್ರಧಾನಿ ನರೇಂದ್ರ ಮೋದಿ ಈ ಪ್ರಶ್ನೆಗಳಿಗೆ ಉತ್ತರಿಸಲೇಬೇಕು, ಎಂದು ಅವರು ಹೇಳಿದ್ದಾರೆ.

ಇನ್ನು, ಅಧಿಕಾರಕ್ಕೆ ಬರುವ ಮುಂಚೆಯೇ ಚೀನಾದ ಕಮ್ಯುನಿಸ್ಟ್‌ ಪಾರ್ಟಿಯೊಂದಿಗೆ ಬಿಜೆಪಿ ಒಳ್ಳೆಯ ಸಂಬಂಧವನ್ನು ಹೊಂದಿತ್ತು ಎಂಬ ಗಂಭೀರ ಆರೋಪವನ್ನು ಮಾಡಿರುವ ಅಭಿಷೇಕ್‌, 2007ರಿಂದ ಬಿಜೆಪಿಯ ಅಧ್ಯಕ್ಷರುಗಳಾದ ರಾಝನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಮತ್ತು ಅಮಿತ್‌ ಶಾ ಚೀನಾದ ನಾಯಕರನ್ನು ಭೇಟಿಯಾಗಿದ್ದಾರೆ. “ಭಾರತದ ಇತಿಹಾಸದಲ್ಲೇ ಯಾವುದೇ ರಾಜಕೀಯ ಪಕ್ಷ, ಚೀನಾದ ಕಮ್ಯನಿಸ್ಟ್‌ ಪಕ್ಷದೊಂದಿಗೆ ಸಂಬಂಧವನ್ನು ಹೋಂದಿರಲಿಲ್ಲ,” ಎಂದು ಹೇಳಿದ್ದಾರೆ.

ರಾಜನಾಥ್‌ ಸಿಂಗ್‌ ಅವರು ಜನವರಿ 2007 ಮತ್ತು ಅಕ್ಟೋಬರ್‌ 2008ರಲ್ಲಿ, ಗಡ್ಕರಿ ಅವರು ಜನವರಿ 2011ರಲ್ಲಿ ಮತ್ತು 2014ರಲ್ಲಿ ಅಮಿತ್‌ ಶಾ ಅವರು ಚೀನಾ ಕಮ್ಯುನಿಸ್ಟ್‌ ಪಾರ್ಟಿಯ ನಾಯಕರನ್ನು ಭೇಟಿ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

“ಚೀನಾದ ಸೈನಿಕರು ಭಾರತದ ಗಡಿಯೊಳಗೆ ಪ್ರವೇಶ ಮಾಡಿದ್ದಾರೆ. ಪ್ರಧಾನ ಮಂತ್ರಿಯವರು ಚೀನಾ ದೇಶದ ಕಂಪೆನಿಗಳಿಂದ ಹಣವನ್ನು ಪಡೆದಿದ್ದಾರೆ. 2013ರಲ್ಲಿ ಚೀನಾ ಗಡಿ ಅತಿಕ್ರಮಣ ಮಾಡಿದ ಹೊರತಾಗಿಯೂ ಚೀನಾದ ಕಂಪೆನಿಗಳಿಂದ ದೇಣಿಗೆಯನ್ನು ಏಕೆ ಪಡೆದರು ಎಂಬ ಕುರಿತು ಪ್ರಧಾನಿ ಮಾತನಾಡುವರೋ? ಹುವಾವೈ ಕಂಪೆನಿ 7 ಕೋಟಿ, ಟಿಕ್‌ಟಾಕ್‌ 30 ಕೋಟಿ, ಪೇಟಿಎಂ 100 ಕೋಟಿ, ಶಯೋಮಿ 15 ಕೋಟಿ ಮತ್ತು ಒಪ್ಪೊ 1 ಕೋಟಿ ರೂಪಾಯಿಗಳಷ್ಟು ದೇಣಿಗೆಯನ್ನು ನೀಡಿದೆ,” ಎಂಬ ಅಂಶವನ್ನು ಅವರು ಬಹಿರಂಗಪಡಿಸಿದರು.

ಆರ್‌ಟಿಐ ಅಡಿಯಲ್ಲೂ PM-CARES Fund ಅನ್ನು ತಂದಿಲ್ಲ. ಇದು ಒಂದು ಅಪಾರದರ್ಶಕವಾಗಿ ಮತ್ತು ಗುಪ್ತವಾಗಿ ನಡೆಸುತ್ತಿರುವ ನಿಧಿಯಾಗಿದೆ, ಎಂದು ಪ್ರಧಾನಿ ವಿರುದ್ದ ಗರ್ಜಿಸಿದರು.

Tags: PM Cares fundRajiv Gandhi Foundationಕಾಂಗ್ರೆಸ್ಚೀನಾ ಮೂಲದ ಕಂಪೆನಿರಾಜೀವ್ ಗಾಂಧಿ ಫೌಂಡೇಷನ್‌
Previous Post

ಆನ್ಲೈನ್ ಶಿಕ್ಷಣಕ್ಕೆ ಸರ್ಕಾರದ ಅಸ್ತು

Next Post

ಉಳಿಸಿಕೊಳ್ಳಲು ಸಾಧ್ಯವಿಲ್ಲ.. ಸುಡುವುದಕ್ಕೆ ಸರ್ಕಾರದ ಸಿದ್ಧತೆ..!

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
Next Post
ಉಳಿಸಿಕೊಳ್ಳಲು ಸಾಧ್ಯವಿಲ್ಲ.. ಸುಡುವುದಕ್ಕೆ ಸರ್ಕಾರದ ಸಿದ್ಧತೆ..!

ಉಳಿಸಿಕೊಳ್ಳಲು ಸಾಧ್ಯವಿಲ್ಲ.. ಸುಡುವುದಕ್ಕೆ ಸರ್ಕಾರದ ಸಿದ್ಧತೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada