Tag: Jammu & Kashmir

ನಕಲಿ ಎನ್‌ ಕೌಂಟರ್‌ ; ಜೆಕೆ ಪೋಲೀಸ್‌ ಅಧಿಕಾರಿಗೆ ವರ್ಷ ನಂತರ ಜಾಮೀನು

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 2006ರಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಎನ್‌ಕೌಂಟರ್‌ನಲ್ಲಿ ಉಗ್ರಗಾಮಿ ಎಂದು ಸುಳ್ಳು ಆರೋಪ ಹೊರಿಸಿದ್ದ ಮಾಜಿ ಪೊಲೀಸ್ ಅಧಿಕಾರಿಗೆ ಜಮ್ಮು ಮತ್ತು ಕಾಶ್ಮೀರ ಮತ್ತು ...

Read moreDetails

ಅಂಕಣ | ಕಾಶ್ಮೀರ ವಿಭಜನೆಯ ಮೋದಿ-ಶಾ ನಿರ್ಧಾರ: ಒಂದು ವಿಫಲ ಯತ್ನವೆಂದು ರುಜುವಾತು..!?

~ ಡಾ. ಜೆ ಎಸ್ ಪಾಟೀಲ. ಮುಂದಿನ ವರ್ಷದ ಪೂರ್ವಾರ್ಧದಲ್ಲಿ ಅಂದರೆ ೨೦೨೪ ರಲ್ಲಿ ದೇಶದ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ೨೦೧೯ ರ ಮಹಾ ಚುನಾವಣೆಗೆ ...

Read moreDetails

ಗಡಿ ಒಳ ನುಸುಳುತ್ತಿದ್ದ ಪಾಕ್ ಉಗ್ರನ ಹತ್ಯೆ : ಮತ್ತಿಬ್ಬರಿಗಾಗಿ ಹುಡುಕಾಟ

ಜಮ್ಮು-ಕಾಶ್ಮೀರ : ಏ.೦೯: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುತ್ತಿದ್ದ ಪಾಕಿಸ್ತಾನದ ಶಂಕಿತ ಉಗ್ರನನ್ನು ಸೇನಾ ಪಡೆಗಳು ಎನ್‌ ಕೌಂಟರ್‌ ಮಾಡಿದ್ದಾರೆ. ...

Read moreDetails

ಬಿಜೆಪಿ ಪಾಲಿಗೆ ವೋಟ್ ಬ್ಯಾಂಕ್ ಆಗಿ ಉಳಿದ ಕಾಶ್ಮೀರಿ ಪಂಡಿತರು: ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಟೀಕೆ

ಭಾರತೀಯ ಜನತಾ ಪಕ್ಷವು ಕಾಶ್ಮೀರಿ ಪಂಡಿತರನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಂಡಿದೆ ಹೊರತು ಅವರಿಗೆ ಏನೂ ಮಾಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ...

Read moreDetails

ನಾಗರಿಕರ ಮೇಲೆ ಭಯೋತ್ಪಾದಕರ ದಾಳಿ: ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತ

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಲವು ದಾಳಿಗಳ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯನ್ನು ನಿವಾರಿಸಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಾಳಿದೆ. ಕಳೆದ 15 ದಿನಗಳ ಅವಧಿಯಲ್ಲಿ ಸುಮಾರು 9 ಜನ ನಾಗರಿಕರು ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದರು, ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ.  ಶ್ರೀನಗರ ಜಿಲ್ಲೆಯ ಆಂಚಾರ್, ಈದ್ಗಾ, ಕಮರ್ ವಾರಿ, ಸೌರಾ, ಮಹಾರಾಜ್ ಗಂಜ್, ನೌಹಟ್ಟಾ, ಸಫಾ ಕಡಲ್ ಹಾಗೂ ಬಾಗ್ಯಾಸ್ ಪ್ರದೇಶದಲ್ಲಿ ಅಂತರ್ಜಾಲ ಸೇವೆ ಬಂದ್ ಆಗಿದೆ. ಕುಲ್ಗಾಂ ಜಿಲ್ಲೆಯ ವಾಂಪೋಹ್, ಕೈಮೋಹ್ ಮತ್ತು ಪುಲ್ವಾಮದ ಲಿಟ್ಟರ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆ ತಡೆಹಿಡಿಯಲಾಗಿದೆ.  ಅಕ್ಟೋಬರ್ 12ರಂದು, ಈದ್ಗಾ ಪ್ರದೇಶದಲ್ಲಿ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಸ್ಥ ವಿರೇಂದರ್ ಪಾಸ್ವಾನ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದರು. ಅದೇ ದಿನ, ಕಾಶ್ಮೀರಿ ಪಂಡಿತ ಹಾಗು ರಾಜ್ಯದ ಹೆಸರಾಂತ ಉದ್ಯಮಿ ಎಂ ಎಲ್ ಬಿಂದ್ರೂ ಮತ್ತು ಓರ್ವ ಟ್ಯಾಕ್ಸಿ ಚಾಲಕನ ಹತ್ಯೆಯೂ ಆಗಿತ್ತು. ಅಕ್ಟೋಬರ್ 14ರಂದು ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕ ಗುಂಡಿನ ದಾಳಿಯಲ್ಲಿ ಮೃತರಾಗಿದ್ದರು. ಕಳೆದ ಶನಿವಾರ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಹಾಗೂ ಉತ್ತರ ಪ್ರದೇಶ ಮೂಲದ ಬಡಗಿಯೊಬ್ಬನ ಸಾವಾಗಿತ್ತು. ಭಾನುವಾರದಂದು ಕುಲ್ಗಾಂ ಜಿಲ್ಲೆಯಲ್ಲಿ ಮತ್ತೆ ಬಿಹಾರ ಮೂಲದ ಇಬ್ಬರು ದಿನಗೂಲಿ ಕಾರ್ಮಿಕರು ಹತ್ಯೆಗೀಡಾಗಿದ್ದರು.  ಈ ಘಟನೆಗಳ ಬಳಿಕ ಕನಿವೆ ರಾಜ್ಯದಲ್ಲಿ ಆತಂಕ ಹಾಗೂ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಈ ಕಾರಣಕ್ಕಾಗಿ ಜಮ್ಮು ಆಡಳಿತವು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಾಳಿದೆ. ಈ ರೀತಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ, ನೂರಾರು ಬಾರಿ ಅಂತರ್ಜಾಲ ಸೇವೆ ಬಂದ್ ಮಾಡಲಾಗಿದೆ. 2021ರಲ್ಲಿಯೇ ಹಲವಾರ ಬಾರಿ ಈ ರೀತಿಯ ಘಟನೆಗಳು ಮರುಕಳಿಸಿವೆ.  ಜನವರಿ 26ರಂದು ಗಣರಾಜ್ಯೊತ್ಸವ ಆಚರಣೆ ಸುಗಮವಾಗಿ ಸಾಗಲು ಅಂತರ್ಜಾಲ ಸೇವೆಗೆ ಕತ್ತರಿ ಹಾಕಲಾಗಿತ್ತು. ಈ ಪದ್ದತಿ 2005ರಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ಬಾಂಬ್ ದಾಳಿ ನಡೆದ ಕಾರಣ, ಅಂದಿನಿಂದ ಇಂದಿನವರೆಗೂ ಗಣರಾಜ್ಯೊತ್ಸವ ಹಾಗು ಸ್ವಾತಂತ್ರ್ಯ ದಿನಾಚರಣೆಯಂದು ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.  ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಸಾವನ್ನಪ್ಪಿದ ಕಾರಣ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿತ್ತು. 91 ವರ್ಷ ವಯಸ್ಸಿನ ಗಿಲಾನಿ, ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಜಾಗೃತಗೊಂಡ ಸರ್ಕಾರ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿತ್ತು. ಸುಮಾರು ಒಂದು ವಾರಗಳ ಕಾಲ ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಲು ಬಾಧಿಸಲ್ಪಟ್ಟಿದ್ದವು.  ಸೆಪ್ಟೆಂಬರ್ 24ರಂದು ಗಡಿ ಜಿಲ್ಲೆ ಬಾರಾಮುಲ್ಲಾದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯ ಉರಿ ಪ್ರದೇಶದಲ್ಲಿ ಅಕ್ರಮ ಒಳನುಸುಳುವಿಕೆಯ ಮುನ್ಸೂಚನೆ ಸಿಕ್ಕ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.  ಇಷ್ಟು ಮಾತ್ರವಲ್ಲದೇ, 2019 ಮತ್ತು 2020ರಲ್ಲಿಯೂ ಐವತ್ತಕ್ಕೂ ಹೆಚ್ಚು ಬಾರಿ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Read moreDetails

ಜೂನ್ 24ರಂದು ಎಐಸಿಸಿ ಮತ್ತು ರಾಜ್ಯ ಉಸ್ತುವಾರಿಗಳ ಸಭೆ ಕರೆದ ಸೋನಿಯಾ ಗಾಂಧಿ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೂನ್ 24 ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಭೆ ಕರೆದಿದ್ದಾರೆ. ಎಲ್ಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ...

Read moreDetails

ಜಮ್ಮು ಕಾಶ್ಮೀರದಲ್ಲಿ ಅಧಿಕಾರ ಕೇಂದ್ರೀಕರಣಕ್ಕೆ ಮುಂದಾಯಿತೆ ಕೇಂದ್ರ ಸರ್ಕಾರ?

ಸಂವಿಧಾನದ 370 ನೇ ವಿಧಿ ರದ್ದು ಪಡಿಸಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಸಿದು, ಜಮ್ಮು ಕಾಶ್ಮೀರವನ್ನು ಮೂರು ಭಾಗಗಳನ್ನಾಗಿ

Read moreDetails

ಕಾಶ್ಮೀರದಲ್ಲಿ ಸದ್ದು ಮಾಡುತ್ತಿರುವ ʼಗುಪ್ಕಾರ್‌ ಡಿಕ್ಲರೇಷನ್‌ʼ: ಏನಿದರ ಮಹತ್ವ?

ಸುಮಾರು ಒಂದು ವರ್ಷಗಳ ಕಾಲ ಯಾವುದೇ ಪ್ರಮುಖ ರಾಜಕೀಯ ಕಾರ್ಯತಂತ್ರಗಳಿಲ್ಲದೇ ಇದ್ದ ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬದಲಾಗುತ್ತಿದೆ.

Read moreDetails

ಜಮ್ಮು ಕಾಶ್ಮೀರದಲ್ಲಿ 15 ಸಾವಿರ ಎಂಜಿನಿಯರ್ ಗಳ ಉದ್ಯೋಗ ಕಸಿದುಕೊಂಡ ಸರ್ಕಾರ

ಎಂಜಿನಿರ್‌ಗಳು ಈಗ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಆಂದೋಲನವನ್ನು

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!