• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನಾಗರಿಕರ ಮೇಲೆ ಭಯೋತ್ಪಾದಕರ ದಾಳಿ: ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತ

Shivakumar A by Shivakumar A
October 19, 2021
in ದೇಶ
0
ನಾಗರಿಕರ ಮೇಲೆ ಭಯೋತ್ಪಾದಕರ ದಾಳಿ: ಕಾಶ್ಮೀರದಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತ
Share on WhatsAppShare on FacebookShare on Telegram

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಲವು ದಾಳಿಗಳ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯನ್ನು ನಿವಾರಿಸಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಾಳಿದೆ. ಕಳೆದ 15 ದಿನಗಳ ಅವಧಿಯಲ್ಲಿ ಸುಮಾರು 9 ಜನ ನಾಗರಿಕರು ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟಿದ್ದರು, ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. 

ADVERTISEMENT

ಶ್ರೀನಗರ ಜಿಲ್ಲೆಯ ಆಂಚಾರ್, ಈದ್ಗಾ, ಕಮರ್ ವಾರಿ, ಸೌರಾ, ಮಹಾರಾಜ್ ಗಂಜ್, ನೌಹಟ್ಟಾ, ಸಫಾ ಕಡಲ್ ಹಾಗೂ ಬಾಗ್ಯಾಸ್ ಪ್ರದೇಶದಲ್ಲಿ ಅಂತರ್ಜಾಲ ಸೇವೆ ಬಂದ್ ಆಗಿದೆ. ಕುಲ್ಗಾಂ ಜಿಲ್ಲೆಯ ವಾಂಪೋಹ್, ಕೈಮೋಹ್ ಮತ್ತು ಪುಲ್ವಾಮದ ಲಿಟ್ಟರ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆ ತಡೆಹಿಡಿಯಲಾಗಿದೆ. 

ಅಕ್ಟೋಬರ್ 12ರಂದು, ಈದ್ಗಾ ಪ್ರದೇಶದಲ್ಲಿ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಸ್ಥ ವಿರೇಂದರ್ ಪಾಸ್ವಾನ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದರು. ಅದೇ ದಿನ, ಕಾಶ್ಮೀರಿ ಪಂಡಿತ ಹಾಗು ರಾಜ್ಯದ ಹೆಸರಾಂತ ಉದ್ಯಮಿ ಎಂ ಎಲ್ ಬಿಂದ್ರೂ ಮತ್ತು ಓರ್ವ ಟ್ಯಾಕ್ಸಿ ಚಾಲಕನ ಹತ್ಯೆಯೂ ಆಗಿತ್ತು. ಅಕ್ಟೋಬರ್ 14ರಂದು ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕ ಗುಂಡಿನ ದಾಳಿಯಲ್ಲಿ ಮೃತರಾಗಿದ್ದರು. ಕಳೆದ ಶನಿವಾರ ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಹಾಗೂ ಉತ್ತರ ಪ್ರದೇಶ ಮೂಲದ ಬಡಗಿಯೊಬ್ಬನ ಸಾವಾಗಿತ್ತು. ಭಾನುವಾರದಂದು ಕುಲ್ಗಾಂ ಜಿಲ್ಲೆಯಲ್ಲಿ ಮತ್ತೆ ಬಿಹಾರ ಮೂಲದ ಇಬ್ಬರು ದಿನಗೂಲಿ ಕಾರ್ಮಿಕರು ಹತ್ಯೆಗೀಡಾಗಿದ್ದರು. 

ಈ ಘಟನೆಗಳ ಬಳಿಕ ಕನಿವೆ ರಾಜ್ಯದಲ್ಲಿ ಆತಂಕ ಹಾಗೂ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಈ ಕಾರಣಕ್ಕಾಗಿ ಜಮ್ಮು ಆಡಳಿತವು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಾಳಿದೆ. ಈ ರೀತಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ, ನೂರಾರು ಬಾರಿ ಅಂತರ್ಜಾಲ ಸೇವೆ ಬಂದ್ ಮಾಡಲಾಗಿದೆ. 2021ರಲ್ಲಿಯೇ ಹಲವಾರ ಬಾರಿ ಈ ರೀತಿಯ ಘಟನೆಗಳು ಮರುಕಳಿಸಿವೆ. 

ಜನವರಿ 26ರಂದು ಗಣರಾಜ್ಯೊತ್ಸವ ಆಚರಣೆ ಸುಗಮವಾಗಿ ಸಾಗಲು ಅಂತರ್ಜಾಲ ಸೇವೆಗೆ ಕತ್ತರಿ ಹಾಕಲಾಗಿತ್ತು. ಈ ಪದ್ದತಿ 2005ರಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ಬಾಂಬ್ ದಾಳಿ ನಡೆದ ಕಾರಣ, ಅಂದಿನಿಂದ ಇಂದಿನವರೆಗೂ ಗಣರಾಜ್ಯೊತ್ಸವ ಹಾಗು ಸ್ವಾತಂತ್ರ್ಯ ದಿನಾಚರಣೆಯಂದು ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. 

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಸಾವನ್ನಪ್ಪಿದ ಕಾರಣ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿತ್ತು. 91 ವರ್ಷ ವಯಸ್ಸಿನ ಗಿಲಾನಿ, ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಜಾಗೃತಗೊಂಡ ಸರ್ಕಾರ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿತ್ತು. ಸುಮಾರು ಒಂದು ವಾರಗಳ ಕಾಲ ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಲು ಬಾಧಿಸಲ್ಪಟ್ಟಿದ್ದವು. 

ಸೆಪ್ಟೆಂಬರ್ 24ರಂದು ಗಡಿ ಜಿಲ್ಲೆ ಬಾರಾಮುಲ್ಲಾದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯ ಉರಿ ಪ್ರದೇಶದಲ್ಲಿ ಅಕ್ರಮ ಒಳನುಸುಳುವಿಕೆಯ ಮುನ್ಸೂಚನೆ ಸಿಕ್ಕ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. 

ಇಷ್ಟು ಮಾತ್ರವಲ್ಲದೇ, 2019 ಮತ್ತು 2020ರಲ್ಲಿಯೂ ಐವತ್ತಕ್ಕೂ ಹೆಚ್ಚು ಬಾರಿ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Tags: BJPCongress PartyCovid 19InternetInternet BanInternet ShutdownJammu & Kashmirಕರೋನಾಕೋವಿಡ್-19ಬಿಜೆಪಿ
Previous Post

ಮಳೆಯ ಅಬ್ಬರಕ್ಕೆ ಕಣ್ಣೀರಾದ ದೇವರ ನಾಡು

Next Post

ನಿಮ್ಮ ಪ್ರೀತಿ, ಅಭಿಮಾನ ನೋಡಿದರೆ ಕಾಂಗ್ರೆಸ್ ಗೆಲುವು ಶತಸಿದ್ಧ’ – ಸಿಂಧಗಿ ಉಪಚುನಾವಣಾ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಮಾತು‌

Related Posts

Significant surge in women's travel due to free bus services: Statistics from 4 states, including Karnataka, revealed
Top Story

ಉಚಿತ ಬಸ್ ನಿಂದ ಮಹಿಳೆಯರ ಪ್ರಯಾಣದಲ್ಲಿ ಭಾರೀ ಏರಿಕೆ :  ಕರ್ನಾಟಕ ಸೇರಿ 4 ರಾಜ್ಯಗಳ ಅಂಕಿಅಂಶಗಳು ಬಹಿರಂಗ

by ಪ್ರತಿಧ್ವನಿ
October 26, 2026
0

ನವದೆಹಲಿ : ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣ  ಕಲ್ಪಿಸಿರುವ ರಾಜ್ಯಗಳಲ್ಲಿ ಮಹಿಳೆಯರ ಓಡಾಟ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯ...

Read moreDetails
Why was Vijay asked to get married 100 times? Rashmika gives a sharp reply to trolls!

100 ಬಾರಿ ಮದುವೆಯಾಗುವಂತೆ ವಿಜಯ್‌ಗೆ ಕೇಳಿದ್ದೇಕೆ? ಟ್ರೋಲಿಗರಿಗೆ ರಶ್ಮಿಕಾ ಖಡಕ್ ಉತ್ತರ!

October 26, 2026
Gang turns to counterfeit ₹500 note racket after watching 'Farzi' web series; 6 arrested

‘ಫರ್ಜಿ’ ವೆಬ್ ಸೀರೀಸ್ ನೋಡಿ 500 ರೂ. ನಕಲಿ ನೋಟು ದಂಧೆಗೆ ಇಳಿದ ಗ್ಯಾಂಗ್ : 6 ಜನರ ಬಂಧನ

October 26, 2026
Attention customers: Here is the list of bank holidays for the month of November

ಗ್ರಾಹಕರ ಗಮನಕ್ಕೆ : ಇಲ್ಲಿದೆ ನವೆಂಬರ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ

October 26, 2026
Protests and violence in Europe: What did Union Minister Piyush Goyal say about Indians?

ಯುರೋಪ್‌ನಲ್ಲಿ ಪ್ರತಿಭಟನೆ, ಹಿಂಸಾಚಾರ: ಭಾರತೀಯರ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?

October 26, 2026
Next Post
ನಿಮ್ಮ ಪ್ರೀತಿ, ಅಭಿಮಾನ ನೋಡಿದರೆ ಕಾಂಗ್ರೆಸ್ ಗೆಲುವು ಶತಸಿದ್ಧ’ – ಸಿಂಧಗಿ ಉಪಚುನಾವಣಾ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಮಾತು‌

ನಿಮ್ಮ ಪ್ರೀತಿ, ಅಭಿಮಾನ ನೋಡಿದರೆ ಕಾಂಗ್ರೆಸ್ ಗೆಲುವು ಶತಸಿದ್ಧ' - ಸಿಂಧಗಿ ಉಪಚುನಾವಣಾ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಮಾತು‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada