ಫ್ರಾನ್ಸ್ ನಲ್ಲಿ ಐದನೇ ಅಲೆ ಕೊರೋನಾ: ಲಸಿಕೆ ಪಡೆಯದಿದ್ದರೆ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ !
ಭಾರತದಲ್ಲಿ ಸದ್ಯ ಕೊರೊನಾ ಸೋಂಕು ಕಡಿಮೆಯಾಗಿದ್ದು, ಹೊಸ ಕೇಸ್ಗಳು ತಹಬದಿಗೆ ಬರುತ್ತಿವೆ. ಆದರೂ, ಕೋವಿಡ್ 19 ಮೂರನೇ ಅಲೆ ಯಾವಾಗ ಆರಂಭವಾಗುತ್ತೆ ಎಂಬ ಆತಂಕ ಇದ್ದೇ ಇದೆ. ಒಂದು ವೇಳೆ ಮತ್ತೊಂದು ಅಲೆ ಬಂದರೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ..? ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆಯೇ..? ಎಂಬ ಚರ್ಚೆಗಳೂ ನಡೆಯುತ್ತಲೇ ಇದೆ. ಆದರೆ, ಫ್ರಾನ್ಸ್‌ನಲ್ಲಿ ಈಗಾಗಲೇ ಕೊರೊನಾ ಐದನೇ ಅಲೆ ಆರಂಭವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೌದು, ಫ್ರಾನ್ಸ್‌ನಲ್ಲಿ ಐದನೇ ತರಂಗದ ಕೊರೊನಾ ವೈರಸ್ ಸೋಂಕುಗಳು ಅಪಾಯಕಾರಿ ಮಟ್ಟದಲ್ಲಿ ಏರುತ್ತಿವೆ ಎಂದು ಸರ್ಕಾರ ವರದಿ ಮಾಡಿದೆ. ಕಳೆದ ವಾರದಿಂದ ಹೊಸ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿವೆ ಎಂದೂ ತಿಳಿದುಬಂದಿದೆ.ಫ್ರಾನ್ಸ್ನಲ್ಲಿ ದೈನಂದಿನ ಪ್ರಕರಣಗಳೆಷ್ಟು..? 7 ದಿನಗಳ ಸರಾಸರಿ ಹೊಸ ಪ್ರಕರಣಗಳು 17,153ಕ್ಕೆ ತಲುಪಿದ್ದು, ಇದು ವಾರದ ಹಿಂದಿನ 9,458ಕ್ಕಿಂತ ಹೆಚ್ಚಾಗಿದ್ದು,81 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಫ್ರಾನ್ಸ್ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಐದನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ" ಎಂದೂ ಅಲ್ಲಿನ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದುಪ್ಪಟ್ಟಾದ ಕೋವಿಡ್ ಕೇಸ್.!!ಇತ್ತೀಚಿನ 7 ದಿನಗಳ ಹೆಚ್ಚಳವು ಹಿಂದಿನ 3 ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ 3 ಪಟ್ಟು ಹೆಚ್ಚಾಗಿದೆ, ಇದು ಸೋಂಕು ಹರಡುತ್ತಿರುವ ವೇಗವನ್ನು ಸೂಚಿಸುತ್ತದೆ ...
Read moreDetails