Tag: Farmers

ಟಿಕಾಯತ್‌ ಒಬ್ಬ ಡಕಾಯಿತ – ಬಿಜೆಪಿ ಸಂಸದ

ಮಧ್ಯಪ್ರದೇಶದ  ಲೋಕಸಭಾ ಕ್ಷೇತ್ರ ಕ್ಷೇತ್ರ  ಬಾಹ್ರೈಚ್ ಸಂಸದ ಅಕ್ಷಯಬರ್ ಲಾಲ್ ಗೋಂಡ್ ಅವರು ರೈತ ನಾಯಕ ಟಿಕಾಯತ್ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ರಾಕೇಶ್ ಟಿಕಾಯತ್ ಒಬ್ಬ ಡಕಾಯಿತ ಎಂದು ಹೇಳಿರುವ ಅವರು, ರೈತ ಆಂದೋಲನವನ್ನು ‘ಸಿಖ್ಖಿಸ್ತಾನ್’ಗಾಗಿ ನಡೆಯುತ್ತಿರುವ ಪ್ರತಿಭಟನೆ ಎಂದು ಆರೋಪಿಸಿದ್ದಾರೆ.  ಸೆಪ್ಟೆಂಬರ್ 2020ರಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಜಾರಿಯಾಗಿತ್ತು. ಇದರ ವಿರುದ್ದನಡೆಯುತ್ತಿರುವ ಪ್ರತಿಭಟನೆ ರೈತರ ಪ್ರತಿಭಟನೆಯಲ್ಲ. ಇವರು ರಾಜಕೀಯ ಪಕ್ಷಗಳ ಬೆಂಬಲಿತರು. ಇವರಿಗೆ ಸಿಖ್ಖಿಸ್ತಾನ್ ಹಾಗು ಪಾಕಿಸ್ತಾನದಿಂದ ಪ್ರಚೋದಿಸಲಾಗುತ್ತಿದೆ, ಎಂದು ಅಕ್ಷಯವರ್ ಹೇಳಿದ್ದಾರೆ. “ಟಿಕಾಯತ್ ಒಬ್ಬ ಡಕಾಯಿತ. ಇದು ನಿಜವಾದ ರೈತರ ಪ್ರತಿಭಟನೆಯಾಗಿದಿದ್ದರೆ, ದೇಶದಲ್ಲಿ ಹಾಲು, ತರಕಾರಿ, ಆಹಾರ ಧಾನ್ಯ ಹಾಗೂ ಹಣ್ಣುಗಳ ಕೊರತೆ ಎದುರಾಗುತ್ತಿತ್ತು. ಇವರು ನಿಜವಾದ ರೈತರಲ್ಲ. ಇವರಿಗೆ ವಿದೇಶಿ ಮೂಲಗಳಿಂದ ಹಣ ಸಂದಾಯವಾಗುತ್ತಿದೆ. ಪ್ರಮುಖವಾಗಿ ಕೆನಡಾದಿಂದ ಹಣ ಬರುತ್ತಿದೆ. ಆತಂಕವಾದಿಗಳಿಂದ ಹಣ ಹರಿದು ಬರುತ್ತಿದೆ. ಇದರ ಕುರಿತಾಗಿ ತನಿಖೆ ನಡೆಯುತ್ತಿದೆ,” ಎಂದು ಆರೋಪಿಸಿದ್ದಾರೆ.  ಕಳೆದ ವರ್ಷ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದ ಬಳಿಕ ಬಹುತೇಕ ಉತ್ತರ ಭಾರತದ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಬಟನೆಗೆ ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆಯಿಂದ ಬೆಂಬಲ ಲಭಿಸಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ಎಂ ಎಸ್ ಪಿಗೆ ಕಾನೂನಿನ ಮಾನ್ಯತೆ ನೀಡುವಂತೆ ಪ್ರತಿಭಟನಾನಿರತರು ಬೇಡಿಕೆಯಿಟ್ಟಿದ್ದಾರೆ.  ರೈತ ಪ್ರತಿಭಟನೆಯ ಕುರಿತು ಕರ್ನಾಟಕದ ವಿಧಾನಸಭೆ ಅಧಿವೇಶನದಲ್ಲಿಯೂ ತೀವ್ರವಾದ ಚರ್ಚೆ ನಡೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೊಂದು ಕಾಂಗ್ರೆಸ್ ಪ್ರಾಯೋಜಿತ ಹೊರಾಟ. ವಿದೇಶಿ ಏಜೆಂಟರ ಮೂಲಕ ನಡೆಸಲಾಗುತ್ತಿರುವ ಆಂದೋಲನ ಎಂದು ಹೇಳಿದ್ದಾರೆ.  ಇದಕ್ಕೆ ಉತ್ತರ ನೀಡಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, ಸರ್ಕಾರದ ಆರೋಪಕ್ಕೆ ಪೂರಕವಾದ ಸಾಕ್ಷ್ಯಾಧಾರಗಳಿದ್ದರೆ ಕೂಡಲೇ ಇದಕ್ಕೆ ಸಂಬಂಧಿಸಿದವರನ್ನು ಬಂಧಿಸಬೇಕು. ಇಲ್ಲದಿದ್ದರೆ, ಇದು ರೈತರಿಗೆ ಮಾಡುತ್ತಿರುವ ಅಪಮಾನ ಎಂದು ಹೇಳಿದ್ದಾರೆ.  ಸಿಎಂ ಸದನದಲ್ಲಿ ನೀಡಿರುವ ಹೇಳಿಕೆಯಿಂದ ಕುಪಿತರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ನೀಡಿರುವ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು ಎಂದು ಜರೆದಿದ್ದಾರೆ. 

Read moreDetails

ಪ್ರಧಾನಿ ಮೋದಿ ಭರವಸೆಗಳ ವಾಸ್ತವ ಅನಾವರಣ ಮಾಡಿದ NSS ಸಮೀಕ್ಷೆ.!

ನಾವು ನಮ್ಮ ‘ನಸಲ್ ಮತ್ತು ಫಸಲ್’ (ಮುಂದಿನ ಪೀಳಿಗೆ ಮತ್ತು ಬೆಳೆ) ಗಾಗಿ ಹೋರಾಡುತ್ತಿದ್ದೇವೆ ಎಂಬುದು ಪ್ರಸ್ತುತ ರೈತ ಚಳುವಳಿಯ ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ. ರೈತರ ಕುರಿತು ...

Read moreDetails

ಓವೈಸಿ ಮತ್ತು ಬಿಜೆಪಿ ಒಂದೇ ತಂಡ: ರೈತ ನಾಯಕ ರಾಕೇಶ್ ಟಿಕಾಯತ್ ಆರೋಪ

ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಓವೈಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೇಹದುಲ್ ಮುಸ್ಲಿಮೀನ್ (AIMIM) ನಾಯಕ ಅಸಾದುದ್ದೀನ್ ...

Read moreDetails

ಕೃಷಿ ಕಾನೂನು ವಿರೋಧಿಸುವ ರೈತರಿಗೆ ಅನುಭೂತಿ ತೋರಿಸುತ್ತಲೇ ಅದೇ ಕಾನೂನನ್ನು ಜಾರಿಗೊಳಿಸಿದ AAP

ಕೇಂದ್ರದ ಮೂರು ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬಾಹ್ಯ ಅನುಭೂತಿ ಮತ್ತು ಸಹಾಯವನ್ನು ನೀಡುತ್ತಲೇ ಅರವಿಂದ್‌ ಕೇಜ್ರಿವಾಲ್‌ ನೇತ್ರತ್ವದ ಆಪ್‌ ಸರ್ಕಾರವು, ರೈತರು ವಿರೋಧಿಸುತ್ತಿರುವ ...

Read moreDetails

ಕೈಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ; ಇದು ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು

ಅನ್ನದಾತನ ಆರ್ತನಾದ ಆಕಾಶಕ್ಕೂ ಕೇಳಿಸುತ್ತಿರುವಾಗ ಮೋದಿ ಡಿಜೆ ಸೌಂಡಿಗೆ ತಾಳ ಹಾಕುತ್ತಾ ಸುಂದರ ಸಂಜೆಯನ್ನು ಸವಿಯುವಷ್ಟು ಸಂವೇದನಾರ

Read moreDetails

ನನ್ನ ಬೆಳೆ ನನ್ನ ಹಕ್ಕು- ಸಿಎಂ BSY

ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಯಾದ ಬಳಿಕ ಇದೀಗ ರಾಜ್ಯದಲ್ಲೂ ಕೂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೆಲವೊಂದು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಮೆಕ್ಕೆಜೋಳ ಬೆಳೆದ ರೈತರಿಗೆ ...

Read moreDetails
Page 5 of 5 1 4 5

Welcome Back!

Login to your account below

Retrieve your password

Please enter your username or email address to reset your password.

error: Content is protected !!