• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

25 ನೇ ದಿನಕ್ಕೆ ಕಾಲಿಟ್ಟ ನಾಗಮಂಗಲ ರೈತರ ಹೋರಾಟ

by
December 3, 2020
in ಕರ್ನಾಟಕ
0
25 ನೇ ದಿನಕ್ಕೆ ಕಾಲಿಟ್ಟ ನಾಗಮಂಗಲ ರೈತರ ಹೋರಾಟ
Share on WhatsAppShare on FacebookShare on Telegram

ಇಡೀ ದೇಶ ದೆಹಲಿ ಚಲೋದಲ್ಲಿ ಭಾಗಿಯಾದ ರೈತರ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗುತ್ತಿರುವಾಗ, ಕರ್ನಾಟಕದ ನಾಗಮಂಗಲ ರೈತರು ಕಳೆದ 25 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

1,277 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಲು ಕೈಗೊಂಡ ಕ್ರಮವನ್ನು ವಿರೋಧಿಸಿ ನಾಗಮಂಗಲದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ನೂರಾರು ರೈತರು “ನಮ್ಮ ಭೂಮಿಯನ್ನು ನಮಗೆ ಹಿಂತಿರುಗಿಸಿ” ಎಂದು ಬೇಡಿಕೆಯನ್ನಿಟ್ಟು ಧರಣಿ ನಡೆಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧೀಸುತ್ತಿರುವ ರೈತರು, ಕಳೆದ 25 ದಿನಗಳಿಂದ ಸತತ ಧರಣಿಯಲ್ಲಿ ತೊಡಗಿದ್ದರೂ, ರೈತರ ಅಹವಾಲು ಸರ್ಕಾರದ ಕಿವಿಗೆ ಬೀಳದಿರುವುದು ವಿಪರ್ಯಾಸ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಧರಣಿ ನಿರತ ಮಹಿಳೆಯೋರ್ವರು, “ಇದು ನೀರಾವರಿ ಭೂಮಿ, ಭತ್ತ, ರಾಗಿ, ತೆಂಗು, ಕಡಲೆಕಾಯಿ ಮತ್ತು ತರಕಾರಿಗಳು ಹೀಗೆ ನಾವು ಇಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತೇವೆ. ನಾವು ಕೆಐಎಡಿಬಿ ನೋಟಿಸ್‌ಗೆ ಸ್ಪಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಮತ್ತು ನಮ್ಮ ಭೂಮಿಯನ್ನು ನೀಡಲು ನಿರಾಕರಿಸಿದ್ದೇವೆ. ಆದರೂ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

“ನಾವು ಸಣ್ಣ ಪ್ರಮಾಣದ ರೈತರು. ಈ ವರ್ಷ ನಾನು ನನ್ನ ಬೆಳೆ ಕಳೆದುಕೊಳ್ಳಬಹುದು, ಆದರೆ ಇದು ನನ್ನ ಭೂಮಿ ಮತ್ತು ಜೀವನದ ಪ್ರಶ್ನೆ. ಇದು ನಮಗೆ ಜೀವನೋಪಾಯದ ಏಕೈಕ ಮೂಲವಾಗಿದೆ ಮತ್ತು ಅದನ್ನು ಕಳೆದುಕೊಳ್ಳಲು ನನಗೆ ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.

ಆಗಸ್ಟ್ 2020 ರಲ್ಲಿ ರಾಜ್ಯ ಸರ್ಕಾರವು ಚನ್ನಪುರ, ಹಟ್ನಾ, ಬಿಲಗುಂಡ ಮತ್ತು ಬೀಚನಹಳ್ಳಿ ಎಂಬ ನಾಲ್ಕು ಗ್ರಾಮಗಳಲ್ಲಿನ 1,277 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವೆಂದು ಸೂಚಿಸಿ ಗ್ರಾಮಸ್ಥರಿಗೆ ನೋಟಿಸ್ ನೀಡಿತು. ಆಘಾತಕ್ಕೊಳಗಾದ ಗ್ರಾಮಸ್ಥರು ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಆಕ್ಷೇಪವನ್ನು ಸಲ್ಲಿಸಿ, ಸಾಮೂಹಿಕ ಪ್ರತಿಭಟನೆ ನಡೆಸಿದರು, ರಾಷ್ಟ್ರೀಯ ಹೆದ್ದಾರಿ 75 ಅನ್ನು ಸಾಂಕೇತಿಕವಾಗಿ ನಿರ್ಬಂಧಿಸಿದರು. ಬಳಿಕ ಈ ವಿಷಯದಲ್ಲಿ ಯಾವುದೇ ಆತುರದ ಕ್ರಮಗಳಿಲ್ಲ ಎಂದು ಸರ್ಕಾರ ಶೀಘ್ರದಲ್ಲೇ ಘೋಷಿಸಿತ್ತು.

ಅದಾಗ್ಯೂ, KIADB ಅಧಿಕಾರಿಗಳು ಹಳ್ಳಿಗಳಲ್ಲಿ ಸರ್ವೇ ಶುರು ಮಾಡಿದ್ದಾರೆಂದು ಪ್ರತಿಭಟನಾ ನಿರತ ರೈತರೊಬ್ಬರು ದೂರಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ರೈತರು ಪಣತೊಟ್ಟಿದ್ದಾರೆ.

Tags: FarmersFarmers protestland acquisition
Previous Post

ಬೆಂಗಳೂರಿನಲ್ಲಿ ಆರಂಭವಾಗಿದೆ ʼಮೊಳೆ ಮುಕ್ತ ಮರʼ ಅಭಿಯಾನ

Next Post

ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆಕೊಟ್ಟಿದ್ದು ಸಂತೋಷದಾಯಕ – HD ಕುಮಾರಸ್ವಾಮಿ

Related Posts

Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ
Top Story

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

by ಪ್ರತಿಧ್ವನಿ
June 13, 2026
0

ಬೆಂಗಳೂರು: ರಾಜ್ಯದ ಟಿಯರ್-2 ಹಾಗೂ ಟಿಯರ್-3 ನಗರಗಳು ಮತ್ತು ಪಟ್ಟಣಗಳ ಯುವಕರಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರವೇಶವನ್ನು ವಿಸ್ತರಿಸುವ ಹಾಗೂ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು...

Read moreDetails
ಜೈವಿಕ ತಂತ್ರಜ್ಞಾನ, ಕೈಗಾರಿಕೆ – ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ 27 ಕೋಟಿಗೂ ಅಧಿಕ ಅನುದಾನ : ಪ್ರಿಯಾಂಕ್‌ ಖರ್ಗೆ

ಜೈವಿಕ ತಂತ್ರಜ್ಞಾನ, ಕೈಗಾರಿಕೆ – ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ 27 ಕೋಟಿಗೂ ಅಧಿಕ ಅನುದಾನ : ಪ್ರಿಯಾಂಕ್‌ ಖರ್ಗೆ

June 13, 2026
Actor Doddanna: ಸಾವು ವದಂತಿ ಬೆನ್ನಲ್ಲೇ ದೇವಾಲಯ ಸುತ್ತಿದ ನಟ ದೊಡ್ಡಣ್ಣ

Actor Doddanna: ಸಾವು ವದಂತಿ ಬೆನ್ನಲ್ಲೇ ದೇವಾಲಯ ಸುತ್ತಿದ ನಟ ದೊಡ್ಡಣ್ಣ

June 13, 2026
ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

ಇದು ಸಾಮಾನ್ಯ ಮನುಷ್ಯನ ಬಜೆಟ್ ಉಳಿವಿನ ಹೋರಾಟ: ಬಿಜೆಪಿ ವಿರುದ್ಧ ಸುರ್ಜೆವಾಲ ಕಿಡಿ

June 13, 2026
ಭಾಷಾ ಸೌಜನ್ಯ-ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ..!

ಭಾಷಾ ಸೌಜನ್ಯ-ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ..!

June 13, 2026
Next Post
ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆಕೊಟ್ಟಿದ್ದು ಸಂತೋಷದಾಯಕ – HD ಕುಮಾರಸ್ವಾಮಿ

ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆಕೊಟ್ಟಿದ್ದು ಸಂತೋಷದಾಯಕ – HD ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada