ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ದೇಶದ ಪ್ರತಿಷ್ಟಿತ ಉದ್ಯಮ ಟಾಟಾ ಸಮೂಹದ ಪಾಲಾಗಿದೆ. ಏರ್ ಇಂಡಿಯಾದ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸಮೂಹ ಅತಿ ಹೆಚ್ಚು ಬಿಡ್ ಮಾಡಿ ವಿಮಾನಯಾನ ಸಂಸ್ಥೆಯನ್ನು ಖರೀದಿ ಮಾಡಿದೆ. ಶುಕ್ರವಾರ ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ಬಿಡ್ ನಡೆದಿದ್ದು,ಈ ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಸಂಸ್ಥೆ ಖರೀದಿಸುವಲ್ಲಿ ಸಫಲವಾಗಿದೆ. ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್ ನದ್ದೇ ಕಂಪನಿಯಾಗಿತ್ತು. ಈ ಕಂಪನಿಯನ್ನು ಜೆಆರ್ ಡಿ ಟಾಟಾ 1932 ರಲ್ಲಿ ಸ್ಥಾಪಿಸಿದ್ದರು. ಸ್ವಾತಂತ್ರ್ಯಾನಂತರ, ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು. ಸರ್ಕಾರವು ಟಾಟಾ ಏರ್ ಲೈನ್ಸ್ ಷೇರುಗಳಲ್ಲಿ ಶೇಕಡಾ 49 ರಷ್ಟನ್ನು ಖರೀದಿಸಿತು. ನಂತರ ಕಂಪನಿಯು ಸಾರ್ವಜನಿಕ ಸೀಮಿತ ಕಂಪನಿಯಾಗಿ ...
Read moreDetails