Tag: ಮುಜರಾಯಿ ಇಲಾಖೆ

ಬಸವನಗುಡಿ ಕಡಲೆಕಾಯಿ ಪರಿಷೆ : ಕಡಲೆಕಾಯಿ ಬೀಜ ಮುಜರಾಯಿ ಇಲಾಖೆಗೆ, ಸಿಪ್ಪೆ ಬಿಬಿಎಂಪಿಗೆ!

ಇಷ್ಟು ದಿನ ಬಿಬಿಎಂಪಿ ಅಧಿಕಾರಿಗಳು ಎಲ್ಲರಿಗೂ ಉಂಡೆ ನಾಮ ಹಾಕುತ್ತಿದ್ರು. ಆದರೀಗ  ಬಿಬಿಎಂಪಿಗೇ ಉಂಡೆನಾಮ  ಹಾಕಿ ಲಕ್ಷಗಟ್ಲೆ ಹಣ ಜೇಬಿಗೆ ಇಳಿಸುತ್ತಿದೆ ಮುಜರಾಯಿ ಇಲಾಖೆ. ಹೌದು, ಬಸವನಗುಡಿ ಕಡಲೆಕಾಯಿ ಪರಿಷೆ ಹೆಸರಲ್ಲಿಇದೀಗ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಕಡಲೆಕಾಯಿ ಬೀಜ ಮುಜರಾಯಿ ಇಲಾಖೆಗೆ.. ಸಿಪ್ಪೆ ಬಿಬಿಎಂಪಿಗೆ .!! ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧಿ ದೊಡ್ಡಗಣೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಡಲೆಕಾಯಿ ಪರಿಷೆ ಜಾತ್ರೆ ಮಾಹೋತ್ಸವ ಕಾರ್ತಿಕ ಮಾಸದ ಕೊನೆಯ ಸೋಮವಾರ ಜರುಗಲಿದೆ. ಈ ಪ್ರಸಿದ್ಧ ಪರಿಷೆಗೆ ರಾಜ್ಯದ ನಾನ ಭಾಗಗಳಿಂದ ಲಕ್ಷಂತರ ಭಕ್ತರು ಪರಿಷೆಯಲ್ಲಿ ಭಾಗಿಯಾಗಿ ದೊಡ್ಡ ಗಣಪನ ದರ್ಶನ ಪಡೆಯುತ್ತಾರೆ. ಆದರೆ, ವಿಷಯ ಇದಲ್ಲ, ಪರಿಷೆ ಹೆಸರಲ್ಲಿ ಈಗ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ನಡುವೆ ಕಿತ್ತಾಟ ಶುರುವಾಗಿದೆ. ಹೌದು, ಇತಿಹಾಸ ಪ್ರಸಿದ್ಧ ನೂರಾರೂ ವರ್ಷಗಳ ಇತಿಹಾಸ ಇರುವ ನಾಡ ಪ್ರಭು ಕೆಂಪೇಗೌಡ ನಿರ್ಮಾಣದ ದೊಡ್ಡ ಗಣಪತಿ ದೇವಸ್ಥಾನ ತನ್ನದೆ ಅದ ವಿಶಿಷ್ಟತೆ ಹೊಂದಿದೆ. ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತೆ. ಪರಿಷೆಯಲ್ಲಿ 5 ಸಾವಿರಕ್ಕೂ ಅಧಿಕ ತಾತ್ಕಲಿಕ ಅಂಗಡಿಗಳು ನಿರ್ಮಾಣ ಮಾಡಿ  ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತೆ. ಪಾಲಿಕೆ, ಜಾಗ ಸೇರಿದಂತೆ ರಸ್ತೆಗಳನ್ನೂ ಬಂದ್ ಮಾಡಿ, ದೇವಸ್ಥಾನದ ಸುತ್ತಮುತ್ತ ಸುಮಾರು 2 km ಮೀಟರ್ ರಸ್ತೆಯಲ್ಲಿ ಅಂಗಡಿ ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತೆ. ರಾಜ್ಯ ಸೇರಿದಂತೆ ತಮಿಳುನಾಡಿನಿಂದ ವ್ಯಾಪಾರಸ್ಥರು ಕಡೆಲೆಕಾಯಿ, ಕಡ್ಲೆಪುರಿ, ವಿವಿಧ ಬಗ್ಗೆಯ ಅಟೀಕೆ ವಸ್ತುಗಳನ್ನು ಇಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜಾತ್ರೆಯಲ್ಲಿ ರಾಜ್ಯದ ನಾನ ಭಾಗಗಳಿಂದ ಲಕ್ಷಕ್ಖು ಅಧಿಕ ಮಂದಿ ಭಕ್ತರು ಭಾಗವಹಿಸ್ತಾರೆ. ಮೂರು ದಿನಗಳ ಈ ಪರಿಷೆಯಾಲ್ಲಿ ಸುಮಾರು ಐದು ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ಪ್ರತಿವರ್ಷ  ನಡೆಯುತ್ತೆ. ಆದರೆ ಈ ವ್ಯಾಪಾರಕ್ಕೆ ಅಂತ ನಿರ್ಮಾಸಿದ ತಾತ್ಕಲಿಕ ಅಂಗಡಿಗಳ ತೆರಿಗೆ ಮಾತ್ರ ಮುಜರಾಯಿ ಇಲಾಖೆ ವಸೂಲಿ ಮಾಡಿಕೊಂಡು ಬಿಬಿಎಂಪಿಗೆ ಪಾಂಗನಾಮ ಹಾಕುತ್ತಿದೆ. ಈ ಬಗ್ಗೆ ಶಾಸಕರನ್ನೂ ಕೇಳಿದರೆ, ಈ ಬಾರಿ ಅಧಿವೇಶನದಲ್ಲಿ ಸಿಎಂ ಗಮನಕ್ಕೆ ತರ್ತಿನಿ, ಮುಂದಿನ ವರ್ಷ ಈ ರೀತಿ ಅಗದಂತೆ ಕ್ರಮ ಕೈಗೋಳ್ತಿವಿ ಅಂತ ಹೇಳ್ತಿದ್ದಾರೆ. ಪಾಲಿಕೆ ಜಾಗದಲ್ಲಿ ಅಂಗಡಿ.. ಮುಜರಾಯಿ ಜೇಬಿಗೆ ಕಂದಾಯ.!! ಇನ್ನೂ ಜಾತ್ರ ಅಂದ್ರೆ  ರಾಜ್ಯದ ವಿವಿಧ ಭಾಗಗಳಿಂದ  ರೈತರು ಬೆಳೆದಿದ್ದ ವಿವಿಧ ಬಗ್ಗೆಯ ಕಡ್ಲೆಕಾಯಿ , ಹಾಗೂ ಕಡ್ಲೆಪುರಿ ಅಂಗಡಿಗಳು ಸೇರಿದಂತೆ ಇತರೆ ಮಕ್ಕಳ ಅಟೀಕೆ ಸಾಮನುಗಳು, ಮನೆಯ ವಸ್ತುಗಳು ವ್ಯಾಪಾರ ಮಾಡಲಾಗುತ್ತೆ. ಆದರೆ ಇಲ್ಲಿ ಕಡಲೆ ಬೀಜ ಮುಜರಾಯಿ ಇಲಾಖೆಗೆ ಹಾಗೂ ಅದರ ಸಿಪ್ಪೆ ಮಾತ್ರ ಬಿಬಿಎಂಪಿಗೆ ಎನ್ನುವಂತಾಗಿದೆ. ಇಡೀ ಪರಿಷೆಯ ಜವಾಬ್ದಾರಿ ಹಾಗೂ ನಿರ್ವಹಣೆ ಜವಾಬ್ದಾರಿ ಪಾಲಿಕೆ ನಿರ್ವಹಿಸಿಕೊಂಡು, ಇದರಿಂದ ಬರುವ ಹಣ ಮಾತ್ರ ರಾಜ್ಯ ಮುಜರಾಯಿ ಇಲಾಖೆ ಪಡೆಯುತ್ತಿದೆ. ಇದಿರಂದ ಕಳೆದ ಸುಮಾರು ವರ್ಷಗಳಿಂದ ಬಿಬಿಎಂಪಿಗೆ ಕಸಿವಿಸಿ ಉಂಟಾಗಿದೆ. ಕಾನೂನಿನ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಜಾಗಕ್ಕೆ ಬಿಬಿಎಂಪಿಯೇ ತೆರಿಗೆ ವಸೂಲಿ ಮಾಡಬೇಕು. ಅದರೆ ಇಲ್ಲಿ ಮುಜರಾಯಿ ಇಲಾಖೆ ಪಾಲಿಕೆ ಜಾಗದ ತೆರಿಗೆ ವಸೂಲಿ ಮಾಡ್ತಿರೋದು ಕಾನೂನು ವಿರುದ್ಧ ಎನ್ನುವು ಗಮನಾರ್ಹ ವಿಚಾರ. ಒಟ್ನಲ್ಲಿ ತೆರಿಗೆಯನ್ನೇ ನಂಬಿಕೊಂಡು ಅಡಳಿತ ಮಾಡುತ್ತಿರುವ ಪಾಲಿಕೆಯ ತೆರಿಗೆ ಹಣವನ್ನೂ ಕಂಡೋರು ಪಡೆದ್ರೆ ಅಧಿಕಾರ ನಡೆಸಲು ಪಾಲಿಕೆ ಪರದಾಡುವಂತಾಗಬೇಕಷ್ಟೆ. ಆದರೆ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಸೊಲ್ಲೆತ್ತದೆ ಸುಮ್ಮನೆ ಇರುವುದು ವಿಪರ್ಯಾಸದ ಜೊತೆಗೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!