Tag: ಮಾಧುಸ್ವಾಮಿ

ಒಳೇಟಿನ ಭೀತಿ ತಪ್ಪಿಸಿಕೊಳ್ಳಲು ಹೆಚ್.ಡಿ.ಕೆ & ಬಿ.ವೈ.ವಿ ಮೊರೆಹೋದ ವಿ.ಸೋಮಣ್ಣ !

ಯಾಕೋ ಏನೋ ವಿ.ಸೋಮಣ್ಣ (V.somanna) ನಸೀಬು ಸ್ವಲ್ಪವೂ ಸರಿಯಿಲ್ಲವೇನೋ ಅನ್ಸತ್ತೆ. ಈ ಹಿಂದೆ ವಿಧಾನಸಭೆಯ ಚುನಾವಣೆಯಲ್ಲಿ ಹೈಕಮ್ಯಾಂಡ್ (B]p Highcommand) ಒತ್ತಾಯದ ಮೇರೆಗೆ ಕ್ಷೇತ್ರ ಬದಲಾವಣೆ ಮಾಡಿ ...

Read more

ಮಾಧುಸ್ವಾಮಿಗೆ ಗಾಳ ಹಾಕಿದ್ರಾ ಜಿ.ಪರಮೇಶ್ವರ್ ?! ತುಮಕೂರಿನಲ್ಲಿ ಸೋಮಣ್ಣಗೆ ಫುಲ್ ಟೆನ್ಶನ್ ! 

ತುಮಕೂರು (Tumkur constituency) ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ . ಬಿಜೆಪಿಯಿಂದ ವಿ.ಸೋಮಣ್ಣ(V.somanna) ಅಭ್ಯರ್ಥಿ ಎಂದು ಘೋಷಣೆಯಾದ ನಂತರ, ಮಾಜಿ ಸಚಿವ ಮಾಧುಸ್ವಾಮಿ (Maadhuswamy) ...

Read more

48 ಗಂಟೆಯಲ್ಲಿ 4 ಕ್ಷೇತ್ರದ ಬಂಡಾಯಕ್ಕೆ ಬ್ರೇಕ್ ಹಾಕಿದ ಯಡಿಯೂರಪ್ಪ ! ರಾಜಾಹುಲಿ ಫುಲ್ ಆಕ್ಟಿವ್ ! 

2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಅಸಮಾಧಾನಗಳನ್ನು ಕೇವಲ 48 ಘಂಟೆಗಳಲ್ಲಿ ಬಿ.ಎಸ್. ಯಡಿಯೂರಪ್ಪ ಶಮನಗೊಳಿಸಿದ್ದಾರೆ. ತುಮಕೂರು, ದಾವಣಗೆರೆ, ಬೆಳಗಾವಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ...

Read more

ಚುನಾವಣಾ ಆಯೋಗದ ಅಧಿಕಾರ ಕಿತ್ತುಕೊಂಡ ಪಂಚಾಯತ್ ತಿದ್ದುಪಡಿ ವಿಧೇಯಕ!

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಾಗಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಮತ್ತು ಮತಗಟ್ಟೆ ನಿಗದಿಯಂತಹ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಚುನಾವಣಾ ದಿನಾಂಕಕ್ಕಾಗಿ ಆಯೋಗ ಎದುರುನೋಡುತ್ತಿರುವಾಗ, ದಿಢೀರನೇ ರಾಜ್ಯ ಸರ್ಕಾರ ದಿಢೀರನೇ ಕರ್ನಾಟಕ ಗ್ರಾಮ‌ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಅಂಗೀಕಾರದ ಮೂಲಕ ಕಳೆದ ಒಂದು ವರ್ಷದಿಂದ ನಡೆದ ತಯಾರಿಗಳನ್ನು ತಿರುವುಮುರುವು ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ಅವಕಾಶವನ್ನೇ ಬಳಸಿಕೊಂಡು ಸರ್ಕಾರ, ವಿವಾದಿತ ವಿಧೇಯಕಕ್ಕೆ ಯಾವುದೇ ವಿಸ್ತೃತ ಚರ್ಚೆಯಿಲ್ಲದೆ ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡನೆಯಿಂದ ಆರಂಭವಾಗಿ, ಕ್ಷೇತ್ರ ನಿಗದಿ, ಮೀಸಲಾತಿ ಮರು ನಿಗದಿ ಸೇರಿದಂತೆ ಹಾಲಿ ಇರುವ ಜಿಲ್ಲಾ ಮತ್ತು ಪಂಚಾಯ್ತಿಗಳ ಸಂಪೂರ್ಣ ಕ್ಷೇತ್ರ ಸ್ವರೂಪವನ್ನೇ ಬದಲಾಯಿಸುವ ಮಹತ್ತರ ಉದ್ದೇಶದಿಂದ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್ವಿಂಗಡನೆ ಆಯೋಗ(ಡಿಲಿಮಿಟೇಷನ್ ಕಮಿಷನ್) ರಚಿಸುವ ಉದ್ದೇಶದಿಂದ ಈ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಈ ಹಿಂದೆ ರಾಜ್ಯ ಚುನಾವಣಾ ಆಯೋಗ ಮಾಡಿದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ವಿಂಗಡನೆ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಹಲವಾರು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಅರ್ಜಿಗಳನ್ನೇ ನೆಪವಾಗಿರಿಸಿಕೊಂಡು ರಾಜ್ಯ ಬಿಜೆಪಿ ಸರ್ಕಾರ, ದಿಢೀರನೇ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆಗಾಗಿ ವಿಧೇಯಕವನ್ನು ತಂದಿದೆ. ಸಹಜವಾಗೇ ಉಭಯ ಸದನಗಳ ಅನುಮೋದನೆ ಪಡೆದಿರುವ ವಿಧೇಯಕ ರಾಜ್ಯಪಾಲರ ಅಂಕಿತದೊಂದಿಗೆ ಜಾರಿಗೆ ಬರಲಿದೆ. ವಿಧೇಯಕ ಜಾರಿಯಾಗುತ್ತಲೇ ಈಗಾಗಲೇ ಚುನಾವಣಾ ಆಯೋಗ ಮಾಡಿರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆ ತನ್ನಿಂತಾನೆ ರದ್ದಾಗಲಿದೆ. ಜೊತೆಗೆ, ಆ ಕ್ಷೇತ್ರ ಪುನರ್ವಿಂಗಡನೆ ಆಧಾರದಲ್ಲಿ ಜಾರಿಯಲ್ಲಿರುವ ಕ್ಷೇತ್ರಗಳ ಮೀಸಲು ಅಧಿಸೂಚನೆ ಕೂಡ ರದ್ದಾಗಲಿದೆ. ಅಂದರೆ; ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅವಧಿ ಪೂರ್ವನಿಗದಿಯಾಗಿರುವಾಗ, ಕಳೆದ ಎರಡು ವರ್ಷಗಳಿಂದ ಬಿಜೆಪಿಯ ಸರ್ಕಾರವೇ ಅಧಿಕಾರದಲ್ಲಿರುವಾಗ ಕ್ಷೇತ್ರಗಳ ಪುನರ್ ವಿಂಗಡಣೆಯ ಬಗ್ಗೆಯಾಗಲೀ, ಮೀಸಲಾತಿ ನಿಗದಿಯ ಬಗ್ಗೆಯಾಗಲೀ ಗಂಭೀರವಾಗಿ ಯೋಚಿಸದೇ ಇದ್ದ ಬಿಜೆಪಿ, ಇದೀಗ ಚುನಾವಣೆಗೆ ಆಯೋಗ ಎಲ್ಲಾ ತಯಾರಿ ಮಾಡಿಕೊಂಡಿರುವಾಗ, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಸೂಚನೆಗಳನ್ನು ಹೊರಡಿಸಿರುವಾಗ, ದಿಢೀರನೇ ಚುನಾವಣಾ ಆಯೋಗದ ಎಲ್ಲಾ ಕೆಲಸಗಳನ್ನು ತಿರುವುಮುರುವು ಮಾಡಲು ಮುಂದಾಗಿದೆ. ಅದೂ ಕ್ಷೇತ್ರ ಪುನರ್ ವಿಂಗಡನೆಗೆ ಪ್ರತ್ಯೇಕ ಆಯೋಗ ರಚನೆಯ ಮೂಲಕ, ಚುನಾವಣಾ ಆಯೋಗದ ಕಾರ್ಯವಿಧಾನದಲ್ಲಿ ಮೂಗು ತೂರಿಸುವ ಯತ್ನ ಕೂಡ ನಡೆದಿದೆ. ವಾಸ್ತವವಾಗಿ ಈವರೆಗೆ ಯಾವುದೇ ಚುನಾವಣಾ ಕ್ಷೇತ್ರದ ಕ್ಷೇತ್ರ ಪುನರ್ ವಿಂಗಡನೆ ಎಂಬುದು ಸಂಪೂರ್ಣವಾಗಿ ಆಯಾ ಚುನಾವಣಾ ಆಯೋಗದ ವಿವೇಚನೆ ಮತ್ತು ಅಧಿಕಾರಕ್ಕೆ ಬಿಟ್ಟ ವಿಷಯವಾಗಿತ್ತು.  ಇದೀಗ ಬಿಜೆಪಿ ಚುನಾವಣಾ ಆಯೋಗದ ಆ ಅಧಿಕಾರವನ್ನು ಕಿತ್ತುಕೊಂಡು, ಪ್ರತ್ಯೇಕ ಆಯೋಗದ ಮೂಲಕ ಕ್ಷೇತ್ರ ಪುನರ್ ವಿಂಗಡನೆಗೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿಯೇ ಪ್ರತಿಪಕ್ಷಗಳು ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ವಿಧೇಯಕವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ತರಲಾಗಿದೆ. ಬಿಜೆಪಿ ಮೀಸಲಾತಿ ವಿರುದ್ಧವಾಗಿದೆ.‌ ಹಾಗಾಗಿಯೇ ಮೀಸಲಾತಿ ಬದಲಾಯಿಸುವ ಮೂಲಕ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ್ನು ಅಧಿಕಾರದಿಂದ ದೂರವಿಡುವ ದುರುದ್ದೇಶದಿಂದಲೇ ತಿದ್ದುಪಡಿಗೆ ಮುಂದಾಗಿದೆ. ಇದೊಂದು ಸಂವಿಧಾನ ವಿರೋಧಿ ಕರಾಳ ವಿಧೇಯಕ” ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕೂಡ ಮೇಲ್ಮನೆಯಲ್ಲಿ, “ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ತಿದ್ದುಪಡಿ ವಿಧೇಯಕಕ್ಕೆ ನಮ್ಮ ವಿರೋಧವಿದೆ, ಚುನಾವಣಾ ಆಯೋಗಕ್ಕೆ ನೀಡಿದ ಅಧಿಕಾರ ವಾಪಸ್ ಪಡೆದರೆ ಹೇಗೆ? ಇದರಿಂದ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಮನಸ್ಸೋ ಇಚ್ಚೆ ಆಗಲಿದೆ. ಸಂವಿಧಾನದಲ್ಲಿ ಪಾರದರ್ಶಕ ಕೆಲಸಕ್ಕೆ ಚುನಾವಣಾ ಆಯೋಗಗಳನ್ನು ರಚಿಸಲಾಗಿದೆ. ಅದರ ಆ ಹಕ್ಕನ್ನೇ ಕಿತ್ತುಕೊಳ್ಳುವುದು ಸರಿಯಲ್ಲ” ಎಂದು ಹೇಳಿದ್ದಾರೆ. ಅಂದರೆ, ಮುಖ್ಯವಾಗಿ ಪ್ರತಿಪಕ್ಷಗಳು ಸರಿಯಾಗಿಯೇ ಗುರುತಿಸಿರುವಂತೆ ಈ ಹೊಸ ವಿಧೇಯಕದ ಮೂಲಕ ಬಿಜೆಪಿ, ಮೊದಲನೆಯದಾಗಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿಯಂತಹ ಸಂವಿಧಾನಿಕ ಕಾರ್ಯಗಳ ಅಧಿಕಾರವನ್ನು ಚುನಾವಣಾ ಆಯೋಗದಿಂದ ಕಿತ್ತುಕೊಂಡು, ತಾನೇ ರಚಿಸುವ ಆಯೋಗಕ್ಕೆ ನೀಡಲು ಮುಂದಾಗಿದೆ. ಎರಡನೆಯದಾಗಿ ಹಾಗೇ ಸಂವಿಧಾನಿಕ ಸಂಸ್ಥೆಯೊಂದರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕ್ರಿಯೆಯ ಅಧಿಕಾರ ಕಿತ್ತುಕೊಳ್ಳುವ ಮೂಲಕ ತನ್ನ ಮೂಗಿನ ನೇರಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡುವ ಮೂಲಕ ರಾಜಕೀಯ ಲಾಭ ಪಡೆಯುವ ತಂತ್ರಗಾರಿಕೆ ಹೆಣೆದಿದೆ. ಹಾಗಾಗಿ ಬಿಜೆಪಿ ಸರ್ಕಾರದ ಈ ನಡೆ, ಜಾತಿ, ಧರ್ಮ ಮತ್ತು ಲಿಂಗಾಧಾರಿತ ತಾರತಮ್ಯ ಮತ್ತು ಶೋಷಣೆಯನ್ನು ಅಳಿಸಿ ಹಾಕುವ ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಎಲ್ಲಾ ವರ್ಗಗಳಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗುವ ಮತ್ತು ಅಧಿಕಾರದ ಪಾಲು ಪಡೆಯುವ ಆಶಯದಿಂದ ಜಾರಿಗೆ ತಂದಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ. ಆದರೆ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಕಾನೂನು ಸಚಿವ ಮಾಧುಸ್ವಾಮಿ, “ಈ ಬಾರಿ ಕ್ಷೇತ್ರ ಮರುವಿಂಗಡಣೆ ನಿರೀಕ್ಷೆ ಇರಲಿಲ್ಲ, ಹೊಸ ಜನ ಗಣತಿ ನಂತರ ಮಾಡಬೇಕು. 2022ಕ್ಕೆ ನಿರೀಕ್ಷೆ ಮಾಡಿದ್ದೆವು. ಆದರೆ ಚುನಾವಣಾ ಆಯೋಗ ಅವೈಜ್ಞಾನಿಕವಾಗಿ ಮರು ವಿಂಗಡಣೆ ಮಾಡಿದೆ. ಇದರಿಂದ ತಕರಾರು ಅರ್ಜಿ ಹೆಚ್ಚಾಗುತ್ತಿವೆ, ಹೀಗಾದಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೆಗಡೆ, ನಜೀರ್ ಸಾಬ್, ದೇವೇಗೌಡರ ಕಾಲದಲ್ಲಿ ಏನಿತ್ತೋ ಅದನ್ನೇ ನಾವು ಈಗ ವಿಧೇಯಕದ ಮೂಲಕ ಇಟ್ಟಿದ್ದೇವೆ, ಬೇರೆ ಏನಿಲ್ಲ, ಚುನಾವಣೆ ಆಯೋಗವೇ ಚುನಾವಣೆ ಮಾಡಲಿದೆ, ಚುನಾವಣಾ ಆಯೋಗ ಮೀಸಲಾತಿ ಮಾಡಲು ಸಾಧ್ಯವಿಲ್ಲ, ಅದನ್ನು ಸರ್ಕಾರವೇ ಕೊಡುವುದು. ಹಳೆ ಜಿಲ್ಲಾ ಪರಿಷತ್ ಕಾಯ್ದೆಯ ಪ್ರಕಾರವೇ ಎಲ್ಲವೂ ನಡೆಯಲಿದೆ” ಎಂದು ಹೇಳಿದ್ದಾರೆ. ಈ ನಡುವೆ, ಈಗಾಗಲೇ ಚುನಾವಣಾ ಆಯೋಗದ ಮೂಲಕವೇ ನಡೆದಿರುವ ಕ್ಷೇತ್ರ ಪುನರ್ ವಿಂಗಡಣೆಯ ಪ್ರಕ್ರಿಯೆಯಲ್ಲಿ ಕೂಡ ಹಲವಾರು ದೋಷಗಳಾಗಿವೆ. ಅಂತಿಮವಾಗಿ ಆಯೋಗದ ಕೆಲಸ ಕೂಡ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳ ಮೂಲಕವೇ ಜಾರಿಯಾಗುವುದರಿಂದ ಮತ್ತು ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಅಧಿಕಾರಶಾಹಿ ಸಾಮಾನ್ಯವಾಗಿ ಆಳುವ ಪಕ್ಷದ ತಾಳಕ್ಕೆ ಕುಣಿಯುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಬಹುತೇಕ ಕಡೆ ಬಿಜೆಪಿಗೆ ಅನುಕೂಲವಾಗುವಂತೆಯೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಪಕ್ಷೇತರರಾಗಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿರುವ ಮತ್ತು ರಾಜಕಾರಣದಲ್ಲಿ ಬೆಳೆಯುವ ಭರವಸೆ ಹುಟ್ಟಿಸಿರುವ ಹಲವು ಯುವ ನಾಯಕರನ್ನು ಸ್ಪರ್ಧೆಯಿಂದ ಹೊರಗಿಡುವ ಲೆಕ್ಕಾಚಾರದಲ್ಲಿ ಮೀಸಲಾತಿ ನಿಗದಿಯಾಗಿದೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿವೆ. ಇಂತಹ ಹಿನ್ನೆಲೆಯಲ್ಲಿ, ಭವಿಷ್ಯದ ನಾಯಕತ್ವ ರೂಪಿಸುವ ಮತ್ತು ಆರೋಗ್ಯಕರ ರಾಜಕಾರಣಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಕನಿಷ್ಟ ಪಕ್ಷಾತೀತ ಧೋರಣೆ ತಳೆಯಬೇಕಿದ್ದ ಬಿಜೆಪಿ ಸರ್ಕಾರ, ಇದೀಗ ವಿಧೇಯಕದ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಸಂಪೂರ್ಣ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯವಸ್ಥೆಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಚುನಾವಣಾ ರಾಜಕೀಯ ವ್ಯವಸ್ಥೆಯಲ್ಲಿ ಭವಿಷ್ಯದ ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಎಂದೇ ಹೇಳಲಾಗುವ ಮತ್ತು ಪ್ರಜಾಸತ್ತೆಯ ಪ್ರಯೋಗಶಾಲೆ ಎನ್ನಲಾಗುವ ಪಂಚಾಯ್ತಿ ವ್ಯವಸ್ಥೆಯಲ್ಲಿ ಹೀಗೆ ಆಡಳಿತರೂಢ ಪಕ್ಷ ಇಡಿಯಾಗಿ ಹಸ್ತಕ್ಷೇಪ ನಡೆಸುವುದು ಮತ್ತು ಇಡೀ ವ್ಯವಸ್ಥೆಯನ್ನು ತನ್ನ ರಾಜಕೀಯ ಲಾಭಕ್ಕೆ ತಕ್ಕಂತೆ ರೂಪಿಸುವುದು ಅಪಾಯಕಾರಿ ಬೆಳವಣಿಗೆ. ಹಾಗಾಗಿ ಅಧಿಕಾರ ವಿಕೇಂದ್ರೀಕರಣದ ಪರಮ ಉದ್ದೇಶದ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಈ ಪ್ರಯತ್ನ ಬುಡಮೇಲು ಮಾಡಲಿದೆ. https://www.youtube.com/watch?v=uHDorwnx3SY

Read more

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!