ಕೋರ್ಟ್ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ: ಸುಪ್ರೀಂ ಕೋರ್ಟ್ ತರಾಟೆಯನಂತರ ಕೈಬಿಟ್ಟ NIC!
ಸುಪ್ರೀಂ ಕೋರ್ಟ್ ಆಕ್ಷೇಪಣೆಯ ನಂತರ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ಇಮೇಲ್‌ಗಳ ಕೆಳ ಅಂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಮತ್ತು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬ ಘೋಷಣೆ ಇರುವ ಜಾಹೀರಾತು ಬ್ಯಾನರ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (NIC) ತೆಗೆದು ಹಾಕಿದೆ. ಆಗಸ್ಟ್ 15,2021 ವೇಳೆಗೆ ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ "ಆಜಾದ್ ಕಾ ಅಮೃತ್ ಮಹೋತ್ಸವ್" ಮತ್ತು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬ ಘೋಷಣೆ ಇರುವ ಜಾಹಿರಾತು ಬ್ಯಾನರ್ ಅನ್ನು ಎಲ್ಲಾ ಕಡೆ ಹಾಕಿತ್ತು. ಈ ಬ್ಯಾನರ್ ಅನ್ನು ಸುಪ್ರೀಂಕೋರ್ಟ್ ನ ಅಧಿಕೃತ ಇಮೇಲ್‌ಗಳ ಕೆಳ ಅಂಚಿನಲ್ಲಿ ಕೂಡ ಹಾಕಿದ್ದು ಸರ್ವೋಚ್ಚ ನ್ಯಾಯಾಲಯದ ಕಣ್ಣು ಕೆಂಪಾಗಿಸಿದೆ. ಹೌದು, ಸುಪ್ರೀಂಕೋರ್ಟ್ಗೆ ಇಮೇಲ್ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮೋದಿ ಭಾವಚಿತ್ರ ಮತ್ತು ಘೋಷನೆ ಇರುವ ಬ್ಯಾನರ್ ಒಂದನ್ನು ಇಮೇಲ್ ಅಂಚಿನಲ್ಲಿ ಹಾಕಲಾಗಿತ್ತು. ಈ ಕುರಿತು ಪ್ರಶ್ನೆ ಎತ್ತಿರುವ ಸುಪ್ರೀಂಕೋರ್ಟ್ ತಕ್ಷಣವೇ ಈ ಚಿತ್ರವನ್ನು ತೆಗೆದು ಹಾಕಿ ಎಂದು ಆದೇಶಿಸಿದೆ. ಬದಲಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಭಾವಚಿತ್ರವನ್ನು ಸೂಚಿಸಿದೆ. ಸುಪ್ರೀಂಕೋರ್ಟ್ ವಕೀಲರ ಅಡ್ವೊಕೇಟ್ಸ್- ಅನ್- ರೆಕಾರ್ಡ್- ಅಸೋಸಿಯೇಶನ್ ವಾಟ್ಸ್ ಆಪ್ ಗ್ರೂಪಿನಲ್ಲಿ ಮೋದಿ ಇರುವಂತಹ ಜಾಹೀರಾತು ಹರಿದಾಡಿದೆ. ಈ ಕುರಿತು ಒರ್ವ ವಕೀಲ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದು, ಸರ್, ನಾನು ಪ್ರಧಾನ ಮಂತ್ರಿ ಇರುವ ಜಾಹಿರಾತಿನ ಒಂದು ಸ್ಕ್ರೀನ್ ಶಾಟ್ ಅನ್ನು ನಮ್ಮ ವಕೀಲರ ವಾಟ್ಸ್ ಆಪ್ ಗ್ರೂಪ್‌ನಿಂದ ಪಡೆದುಕೊಂಡಿದ್ದೇನೆ, ಸುಪ್ರೀಂಕೋರ್ಟ್ ಒಂದು independent organ ಇದು ಸರ್ಕಾರದ ಭಾಗವಲ್ಲ ಆದರಿಂದ ಈ ಕುರಿತು ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದರು. ತಕ್ಷಣವೇ ಉತ್ತರಿಸಿದ ಸುಪ್ರೀಂಕೋರ್ಟ್ ನ ಪ್ರಧಾನ ಕಾರ್ಯದರ್ಶಿ ಸಂಜೀವ್ ಎಸ್ ಕಲ್ಗಾಂವ್ಕರ್, ಇಂತಹ ಘಟನೆಗಳ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದರು. ಅಡ್ವೊಕೇಟ್ಸ್- ಅನ್- ರೆಕಾರ್ಡ್- ಅಸೋಸಿಯೇಶನ್ ಕಾರ್ಯದರ್ಶಿ ಜೋಸೆಫ್ ಅವರು, ವಕೀಲರಿಂದ ಈ ತರಹದ ಔಪಚಾರಿಕ ದೂರ ಬಂದ ನಂತರ ಕ್ರಮ ಯೋಜಿಸಲಾಗುವುದು ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅರ್ಹವಾದ ವಕೀಲರು ಅಡ್ವೊಕೇಟ್ಸ್-ಆನ್-ರೆಕಾರ್ಡ್ (AoR) ಮಾತ್ರ ಪ್ರಕರಣ ದಾಖಲಿಸಬಹುದು. ರಿಜಿಸ್ಟ್ರಿ ನ್ಯಾಯಾಲಯದ ಬ್ಯಾಕ್-ಎಂಡ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ ಮತ್ತು ಪ್ರಕರಣಗಳ ಸ್ಥಿತಿಯ ಕುರಿತು AoR ಗಳೊಂದಿಗೆ ಸಂವಹನ ನಡೆಸುತ್ತದೆ. ಇಮೇಲ್‌ಗಳಲ್ಲಿನ ಜಾಹೀರಾತುಗಳ ಬಗ್ಗೆ ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಕೇಳಿದಾಗ, ಇದು "ಅತ್ಯಂತ ಆಕ್ಷೇಪಾರ್ಹ" ಎಂದು ವಿವರಿಸಿದ್ದಾರೆ. "ಸುಪ್ರೀಂ ಕೋರ್ಟ್ ಮತ್ತು ಭಾರತದ ಎಲ್ಲಾ ಇತರ ನ್ಯಾಯಾಲಯಗಳು ಸರ್ಕಾರಿ ಕಚೇರಿಗಳಲ್ಲ ಮತ್ತು ಸರ್ಕಾರದ ಪ್ರಚಾರ ಯಂತ್ರವಾಗಿ ಬಳಸಲು ಉದ್ದೇಶಿಸಿಲ್ಲ" ಎಂದು ಸಿಂಗ್ ಹೇಳಿದ್ದಾರೆ. ಈ ಬಗೆಗಿನ ವಿವರಣಾ ಪ್ರಕಟಣೆಯಲ್ಲಿ ಸುಪ್ರೀಂ ಕೋರ್ಟ್, “ಭಾರತದ ಸುಪ್ರೀಂ ಕೋರ್ಟ್ನ ಅಧಿಕೃತ ಇಮೇಲ್ಗಳ ಕೆಳಅಂಚಿನಲ್ಲಿ ನ್ಯಾಯಾಂಗದ ಕಾರ್ಯಕ್ಕೆ ಯಾವುದೇ ರೀತಿಯಲ್ಲಿಯೂ ...
Read moreDetails