ಬೆಂಗಳೂರಿನಲ್ಲಿದೆ ಶೇ. 84 ರಷ್ಟು ಅನಧಿಕೃತ ಕಟ್ಟಡಗಳು : ಬಿಬಿಎಂಪಿ ಸರ್ವೆಯಲ್ಲಿ ಮಾಹಿತಿ ಬಯಲು!
ಕಳೆದೊಂದುವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಕಟ್ಟಡಗಳು ಬೀಳುತ್ತಲೇ ಇದಾವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಒಂದ್ಕಡೆಯಾದ್ರೆ, ಬಿಬಿಎಂಪಿಯಿಂದ ಅನುಮತಿ ಪಡೆಯದೇ ನಿರ್ಮಿಸಿರುವ ಕಟ್ಟಡಗಳು ಮತ್ತೊಂದ್ಕಡೆ. ನಿರಂತರವಾಗಿ ಬಿಲ್ಡಿಂಗ್ಸ್ ಬೀಳ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿತ್ತು. ಅಷ್ಟೇ ಅಲ್ದೇ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳ ಸರ್ವೆ ನಡೆಸಿ ವರದಿ ನೀಡುವಂತೆಯೂ ಸೂಚನೆ ಕೊಟ್ಟಿತ್ತು. ಅದರಂತೆ ಸರ್ವೆ ನಡೆಸಿದ ಪಾಲಿಕೆಗೆ ಶಾಕ್ ಕಾದಿತ್ತು. ಯಾಕಂದ್ರೆ ಕಳೆದೊಂದುವರೆ ವರ್ಷದಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಶೇಕಡಾ 84 ರಷ್ಟು ಕಟ್ಟಡಗಳು ಅಕ್ರಮ ಅನ್ನೋದು ಬೆಳಕಿಗೆ ಬಂದಿದೆ. ಈಗಾಗಲೇ ನಗರದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಸಾವು ನೋವುಗಳಾಗಿವೆ. ಸಂಧಿಗುಂಧಿ ಗಳಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ಹಾಗೂ ...
Read more