Tag: ಝೀಕಾ ವೈರಸ್

ಕಾನ್ಪುರದಲ್ಲಿ ಝೀಕಾ ವೈರಸ್ ಅಬ್ಬರ; 89 ಜನರಲ್ಲಿ ರೋಗ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿದೆ. ಸೊಳ್ಳೆಯಿಂದ ಹರಡುವ ಈ ರೋಗವು ಈಗಾಗಲೇ 89 ಜನರಲ್ಲಿ ಪತ್ತೆಯಾಗಿದ್ದು, ಇವರಲ್ಲಿ 17 ಜನ ಮಕ್ಕಳು ಹಾಗೂ ಒಬ್ಬಾಕೆ ಗರ್ಭಿಣಿಯಾಗಿದ್ದಾರೆ. ವಿರಳಾತಿವಿರಳ ನರ ಸಂಬಂಧಿ ಕಾಯಿಲೆಗೂ ಕಾರಣವಾಗುವ ಈ ವೈರಸ್,80% ಜನರಲ್ಲಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಉಳಿದವರಲ್ಲಿ ಸಾಮಾನ್ಯ ಜ್ವರ ಹಾಗೂ ಮೈ ಕೈ ನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  ಅಕ್ಟೋಬರ್ 23ರಂದು ಕಾನ್ಪುರದಲ್ಲಿ ಮೊದಲನೇ ಝೀಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಕಳೆದ ವಾರದಿಂದ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆತಂಕದ ಸಂಗತಿ ಏನೆಂದರೆ, ಕಾನ್ಪುರದಿಂದ 90 ಕಿ.ಮೀ. ದೂರ ಇರುವಂತಹ ಕನೌಜ್ ಎಂಬಲ್ಲಿಯೂ ಝೀಕಾ ವೈರಸ್ ಪತ್ತೆಯಾಗಿದ್ದು, ಇದು ಮತ್ತಷ್ಟು ಪ್ರದೇಶಗಳಿಗೆ ಹರಡಿರಬಹುದಾದ ಸಂದೇಹವನ್ನು ಸೃಷ್ಟಿಸಿದೆ.  ಡೆಂಘಿ ಹಾಗೂ ಚಿಕುನ್ ಗುನ್ಯಾ ರೋಗಾಣು ವಾಹಕವಾದ ಈಡೀಸ್ ಈಜಿಪ್ಟೀ ಎಂಬ ವಿಧದ ಸೊಳ್ಳೆಗಳಿಂದ ಈ ರೋಗ ಹರಡುತ್ತದೆ. ನಿಂತ ನೀರಿನಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.  ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರದಿದ್ದರೂ, ಒಂದು ವೇಳೆ ರೋಗವು ತೀವ್ರವಾದಲ್ಲಿ ಮುಂದೆ ಹುಟ್ಟುವ ಮಕ್ಕಳಲ್ಲಿ ದೋಷ ಉಂಟು ಮಾಡಬಲ್ಲದು, ಮಾತ್ರವಲ್ಲದೇ ನರಮಂಡಲದ ಮೇಲೆ ತೀವ್ರವಾದ ಪರಿಣಾಮವನ್ನು ಬೀರಬಲ್ಲದು.  ಸದ್ಯಕ್ಕೆ ಕಾನ್ಪುರ ಜಿಲ್ಲಾಡಳಿತವು ಅಲ್ಲಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದಿದ್ದು, ರೋಗದ ಶೀಘ್ರ ಪತ್ತೆಗೆ ಕ್ರಮವಹಿಸಿದೆ. ಗರ್ಭಿಣಿಯ ಆರೈಕೆಗಾಗಿ ಹೆಚ್ಚಿನ ಗಮನ ನೀಡಲಾಗಿದೆ. ಹಲವು ತಂಡಗಳನ್ನು ರಚಿಸಿ ರೋಗವನ್ನು ಹತೋಟಿಗೆ ತರುವಂತಹ ಪ್ರಯತ್ನ ಮಾಡಲಾಗುತ್ತಿದೆ, ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ನೇಪಾಳ್ ಸಿಂಗ್ ಹೇಳಿದ್ದಾರೆ.  “ಝೀಕಾ ವೈರಸ್ ದೃಢಪಟ್ಟ ರೋಗಿಗಳಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿದಿನ ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ರೋಗಿಗಳ ದೇಹವು ಚಿಕಿತ್ಸೆಗೆ ಯಾವ ರೀತಿ ಸ್ಪಂದಿಸುತ್ತಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿ ವಿಕಾಸ್ ಜಿ ಅವರು ಹೇಳಿದ್ದಾರೆ.  ಮಾತ್ರವಲ್ಲದೇ, ಜಿಲ್ಲೆಯಲ್ಲಿ ಝೀಕಾ ಕಂಟ್ರೋಲ್ ರೂಂ ಸ್ಥಾಪಿಸಿ, ರೋಗಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಜನರಲ್ಲಿ ನರ್ಮೈಲ್ಯತೆ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳಲು ಜಾಗೃತಿಯನ್ನು ಸೃಷ್ಟಿಸುವ ಪ್ರಯತ್ನವನ್ನೂ ಜಿಲ್ಲಾಡಳಿತ ಮಾಡುತ್ತಿದೆ.  ಸುಮಾರು ಎರಡು ತಿಂಗಳ ಹಿಂದೆ, ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಡೆಂಘೀ ಜ್ವರವು ಹಲವರ ಜೀವವನ್ನು ಕಸಿದುಕೊಂಡಿತ್ತು. ಇದರಲ್ಲಿ ಬಹುತೇಕ ಮೃತರು ಮಕ್ಕಳಾಗಿದ್ದು. ಈಗ ಝೀಕಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ವೇಗ ಉತ್ತರ ಪ್ರದೇಶವನ್ನು ಹೈರಾಣಾಗಿಸಿದೆ. ಕರೋನಾ, ಡೆಂಘೀ ಬಳಿಕ ಝೀಕಾ ವೈರಸ್ ಜನರ ಜೀವನವನ್ನು ದುಸ್ತರವಾಗಿಸಿದೆ.  1947ರಲ್ಲಿ ಮೊದಲ ಬಾರಿಗೆ ಝೀಕಾ ವೈರಸ್ ಪತ್ತೆಯಾಗಿತ್ತು. 2015ರಲ್ಲಿ ಬ್ರೆಜಿಲ್ ದೇಶದಲ್ಲಿ ನೂರಾರು ಮಕ್ಕಳು ಅಸಹಜವಾಗಿ ಸಣ್ಣ ತಲೆ ಹಾಗೂ ಬೆಳವಣಿಯಾಗದ ಮೆದುಳಿನೊಂದಿಗೆ ಜನ್ಮ ಪಡೆದಿದ್ದರು. ಇದನ್ನು ಮೈಕ್ರೊಸೆಫಾಲಿ ಎಂದು ಕರೆಯುತ್ತಾರೆ.  ಈ ಕಾರಣಕ್ಕಾಗಿ ಝೀಕಾ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಎಂದು ಪರಿಗಣಿಸಲಾಗುತ್ತದೆ. ನೈರ್ಮಲ್ಯತೆಗೆ ಹೆಚ್ಚಿನ ಒತ್ತು ನೀಡದರೆ ಈ ರೋಗದಿಂದ ಪಾರಾಗಬಹುದು. 

Read moreDetails

ಕರೋನಾ ನಡುವೆ ಬಂತು ಹೊಸ ವೈರಸ್ ಝೀಕಾ ವೈರಸ್.?

ಕೋವಿಡ್ ಎರಡನೇ ಅಲೆತ ಭೀಕರತೆ ಕ್ರಮೇಣ ಇಳಿಮುಖವಾಗಿ, ನಿಯಂತ್ರಣಕ್ಕೆ ಬಂತು ಎಂಬ ನಿರಾಳತೆಯ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಲಾಕ್ಡೌನ್ ತೆರವು ಮಾಡಿ ಎಲ್ಲವೂ ಮುಗಿದುಹೋಯಿತು. ಇನ್ನೇನು ಆತಂಕವೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವಾಗ ಮತ್ತೊಂದು ಆಘಾತಕಾರಿ ಸೋಂಕು ಇದೀಗ ದೇಶದಲ್ಲಿ ಕಾಣಿಸಿಕೊಂಡಿದೆ. ನಿಫಾ ಮತ್ತು ಕೋವಿಡ್ ಸೋಂಕಿಗೆ ದೇಶದಲ್ಲೇ ಮೊದಲ ಸಾಕ್ಷಿಯಾಗಿದ್ದ, ಆ ಮೂಲಕ ಭಯಾನಕ ಸೋಂಕು ಪತ್ತೆ ಮತ್ತು ನಿರ್ವಹಣೆಯ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!