ಮಧ್ಯಮ ಕ್ರಮಾಂಕದಲ್ಲಿ ಮಾರ್ಕೂಸ್ ಸ್ಟೋನಿಸಿಸ್ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಟಿ-20 ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿದೆ.
ಪರ್ತ್ ನಲ್ಲಿ ಮಂಗಳವಾರ ನಡೆದ ಸೂಪರ್-12 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಸಂಪಾದಿಸಿತು. ಕಠಿಣ ಗುರಿ ನಡೆದ 16.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆಸ್ಟ್ರೇಲಿಯಾ ಆರಂಭದಲ್ಲೇ ಡೇವಿಡ್ ವಾರ್ನರ್ (11) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ನಾಯಕ ಏರಾನ್ ಫಿಂಚ್ (ಅಜೇಯ 31 ರನ್, 42 ಎಸೆತ, 1 ಸಿಕ್ಸರ್), ಮಿಚೆಲ್ ಮಾರ್ಷ್ (೧೮) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (23) ತಂಡವನ್ನು ಆಧರಿಸಿದರು.

ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಕೂಸ್ ಸ್ಟೋನಿಸಿಸ್ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಾಯದಿಂದ ಅಜೇಯ 59 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ಪರ ಪಾಥೂಮ್ ನಿಶಾಂಕ್ (40), ಧನಂಜಯ್ ಡಿಸಿಲ್ವಾ (26) ಮತ್ತು ಚರಿತ್ ಅಸ್ಲಂಕಾ (38) ರನ್ ಗಳಿಸಿದರೆ, ಉಳಿದವರು ವಿಫಲರಾಗಿದ್ದರಿಂದ ತಂಡ ಬೃಹತ್ ಮೊತ್ತ ಗಳಿಸುವ ಅವಕಾಶ ಕಳೆದುಕೊಂಡಿತು.












