ಪುಟಾಣಿ ಮಕ್ಕಳಲ್ಲಿ ಹಾಗೂ ಬೆಳೆಯುವ ಮಕ್ಕಳಲ್ಲಿ ಜಂತು ಹುಳುವಿನ ಸಮಸ್ಯೆ ತುಂಬಾನೇ ಸಾಮಾನ್ಯ. ಹೊಟ್ಟೆಯಲ್ಲಿ ಹುಳುವಾದಾಗ ಮಕ್ಕಳಿಗೆ ಊಟ ಸರಿಯಾಗಿ ಸೇರುವುದಿಲ್ಲ, ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದಲ್ಲದೆ ಪೌಷ್ಟಿಕಾಂಶದ ಮೇಲೆಯೂ ಕೂಡ ಪರಿಣಾಮವಾಗುತ್ತದೆ.
ಇನ್ನು ಹೊಟ್ಟೆಯಲ್ಲಿ ಜಂತುಳು ಆದಾಗ ಅದರಿಂದ ಕಾಡುವಂತ ಸಮಸ್ಯೆಗಳು ಹೊಟ್ಟೆ ನೋವು, ಅತಿಸಾರ ,ವಾಕರಿಕೆ, ಸುಸ್ತು, ವೇಟ್ ಲಾಸ್, ಮಲದಲ್ಲಿ ಹುಳಗಳು, ಮುಖದಲ್ಲಿ ವೈಟ್ ಪ್ಯಾಚಸ್ ಹೀಗೆ ಸಾಕಷ್ಟಿವೆ. ಇನ್ನು ಜಂತು ಹುಳು ಆದಾಗ ಕಡೆಗಣಿಸದೆ ಮಾಡದೆ ಔಷಧಿಗಳನ್ನ ಕೊಡಿಸುವುದು ಉತ್ತಮ. ಹೊಟ್ಟೆಯಲ್ಲಿ ಜಂತುಹುಳು ಆಗಲು ಪ್ರಮುಖ ಕಾರಣಗಳು.
ಕೈಗಳು ಕೊಳಕಾದಾಗ
ಕೆಲವು ಮಕ್ಕಳಿಗೆ ಬಾಯಲ್ಲಿ ಕೈ ಇಡುವಂತಹ ಅಭ್ಯಾಸವಿರುತ್ತದೆ ಇಂಥ ಸಂದರ್ಭದಲ್ಲಿ ಮಕ್ಕಳು ಆಟವಾಡುತ್ತಾ ಅಥವ ಯಾವುದಾದರು ವಸ್ತುವನ್ನು ಮುಟ್ಟಿ ಬಾಯೊಳಗೆ ಕೈಯನ್ನ ಇಟ್ಟಾಗ ಬಾಯಿಯ ಮೂಲಕ ಹೊಟ್ಟೆ ಒಳಗೆ ಜಂತು ಹುಳುಗಳು ಅಥವಾ ಮೊಟ್ಟೆಗಳು ಪ್ರವೇಶಿಸಬಹುದು. ಇನ್ನು ಊಟ ತಿಂಡಿ ಅಥವಾ ಏನುನಾದರೂ ತಿನ್ನುವ ಮುಂಚೆ ಕೈಯನ್ನು ತೊಳೆದಿದ್ದರೂ ಕೂಡ ಈ ಸಮಸ್ಯೆ ಎದುರಾಗುತ್ತದೆ.
ಸಿಹಿ ಪದಾರ್ಥಗಳು
ಕೆಲವು ಮಕ್ಕಳು ಸಿಹಿ ಪದಾರ್ಥಗಳನ್ನ ಅತಿಯಾಗಿ ಸೇವಿಸುತ್ತಾರೆ ಅದರಲ್ಲೂ ಚಾಕ್ಲೇಟ್ ಬಿಸ್ಕೆಟ್ ಸ್ವೀಟ್ಸ್ ಅಂತೆ ಸಾಕಷ್ಟು ಬಗೆಯ ಸಿಹಿ ತಿಂಡಿಗಳನ್ನು ತಿನ್ನುವುದು ಹೆಚ್ಚು. ಇದರಿಂದ ಹಲ್ಲು ಹುಡುಕಾಗುವುದು ಮಾತ್ರವಲ್ಲದೆ ಜಂತು ಹುಳುವಿನ ಸಮಸ್ಯೆ ಕೂಡ ಕಾಡುತ್ತದೆ ಇದರಿಂದ ಇತರೆ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.
ಆಹಾರ ಮತ್ತು ಕುಡಿಯುವ ನೀರು
ಕೆಲವು ಬಾರಿ ಗೊತ್ತೋ ಗೊತ್ತಿಲ್ಲದೆಯೋ ಮಕ್ಕಳು ಕಲುಷಿತವಾದ ನೀರನ್ನ ಕುಡಿಯುವುದರಿಂದ ಕೂಡ ಜಂತು ಹುಳುವಿನ ಸಮಸ್ಯೆ ಕಾಡುತ್ತದೆ ಹಾಗೂ ಆಹಾರ ಸೇವನೆಯಿಂದ ಕೂಡ ಈ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಸರಿಯಾಗಿ ಬೇಯಿಸದೇ ಇರುವ ಮಾಂಸ ಅಥವಾ ತರಕಾರಿ ಹಾಗೂ ಸೀ ಫುಡ್ ಅತಿಯಾದಗಲು ಕೂಡ ಜಂತು ಹುಳುವಿನ ಸಮಸ್ಯೆ ಕಾಡುತ್ತದೆ.