ಸ್ವಯಂಚಾಲಿತ ಮಾಹಿತಿ ವಿನಿಮಯದಡಿಯಲ್ಲಿ ಭಾರತವು ತನ್ನ ನಾಗರಿಕರು ಮತ್ತು ಸಂಸ್ಥೆಗಳ ನಾಲ್ಕನೇ ಸೆಟ್ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದೆ.
ಇದರ ಅಡಿಯಲ್ಲಿ 101 ರಾಷ್ಟ್ರಗಳಲ್ಲಿನ 34 ಲಕ್ಷ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಅಧಿಕಾರಿಗಳ ಪ್ರಕಾರ ಈ ಪೈಕಿ ವ್ಯಕ್ತಿಗಳಿಗೆ ಸೇರಿದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳ ಮಾಹಿತಿಯೂ ಲಭ್ಯವಾಗಿದೆ.
ಸರ್ಕಾರ, ಮುಂದಿನ ತನಿಖೆಯ ಮೇಲೆ ಪರಿಣಾಮ ಉಂಟುಮಾಡಬಹುದೆಂಬ ಕಾರಣಕ್ಕಾಗಿ ಖಾತೆಗಳ ವಿವರಗಳನ್ನು ಗೌಪ್ಯತೆಯ ಕಾರಣದಿಂದಾಗಿ ಹಂಚಿಕೊಂಡಿಲ್ಲ. ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್ಎಟಿ) ಈ ಬಗ್ಗೆ ಮಾಹಿತಿ ನೀಡಿದ್ದು ಈ ವರ್ಷ ಮಾಹಿತಿ ಹಂಚಿಕೆಯಲ್ಲಿ ಹೊಸದಾಗಿ ಅಲ್ಬೇನಿಯಾ, ಬ್ರೂನಿ ದಾರುಸ್ಸಲಾಮ್, ನೈಜೀರಿಯಾ, ಪೆರು ಮತ್ತು ಟರ್ಕಿ ದೇಶಗಳ ಸೇರ್ಪಡೆಯಾಗಿವೆ ಎಂದು ತಿಳಿಸಿದೆ.
ಒಟ್ಟಾರೆ ಹಣಕಾಸು ಖಾತೆಗಳ ಸಂಖ್ಯೆ ಸುಮಾರು ಒಂದು ಲಕ್ಷದಷ್ಟು ಹೆಚ್ಚಾಗಿದೆ. 74 ದೇಶಗಳೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ಕೆಲವು ವ್ಯಕ್ತಿಗಳು, ಕಾರ್ಪೊರೇಟ್‌ಗಳು ಮತ್ತು ಟ್ರಸ್ಟ್‌ಗಳನ್ನು ಒಳಗೊಂಡ ಹಲವಾರು ಪ್ರಕರಣಗಳು ಸೇರಿದಂತೆ “ನೂರಾರು ಹಣಕಾಸು ಖಾತೆಗಳಿಗೆ” ಸಂಬಂಧಿಸಿದ ಹೊಸ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಯ ವಿನಿಮಯದ ಗೌಪ್ಯತೆ ಷರತ್ತು ಮತ್ತು ಮುಂದಿನ ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಲ್ಲೇಖಿಸಿ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ, ಆದರೆ ದತ್ತಾಂಶವನ್ನು ಶಂಕಿತ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ಸೇರಿದಂತೆ ಇತರ ಅಪರಾಧಗಳಿಗೆ ಬಳಸಲಾಗಿದೆ ಎಂದು ಒತ್ತಿ ಹೇಳಿದರು.
ವಿನಿಮಯವು 74 ದೇಶಗಳೊಂದಿಗೆ ಪರಸ್ಪರ ವಿನಿಮಯವಾಗಿದ್ದರೂ, ರಷ್ಯಾ ಸೇರಿದಂತೆ 27 ದೇಶಗಳ ವಿಷಯದಲ್ಲಿ ಯಾವುದೇ ಮಾಹಿತಿಯನ್ನು ಒದಗಿಸಲಿಲ್ಲ, ಏಕೆಂದರೆ ಆ ದೇಶಗಳು ಗೌಪ್ಯತೆ ಮತ್ತು ಡೇಟಾ ರಕ್ಷಣೆಯ ಕುರಿತು ಅಂತರರಾಷ್ಟ್ರೀಯ ಅವಶ್ಯಕತೆಗಳನ್ನು ಇನ್ನೂ ಪೂರೈಸದ ಕಾರಣ ಯಾವುದೇ ಮಾಹಿತಿ ವಿನಿಮಯ ನಡೆದಿಲ್ಲ ಎಂದು ವರದಿಯಾಗಿದೆ.
FTA ಎಲ್ಲಾ 101 ದೇಶಗಳ ಹೆಸರುಗಳು ಮತ್ತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅಧಿಕಾರಿಗಳು ಸತತವಾಗಿ ನಾಲ್ಕನೇ ವರ್ಷಕ್ಕೆ ಭಾರತವು ಪ್ರಮುಖ ಮಾಹಿತಿ ಸ್ವೀಕರಿಸುವ ದೇಶವಾಗಿದೆ. ಸ್ವಿಸ್ ಹಣಕಾಸು ಸಂಸ್ಥೆಗಳೊಂದಿಗೆ ಖಾತೆಗಳನ್ನು ಹೊಂದಿರುವವ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿವರಗಳನ್ನು ಭಾರತೀಯ ಅಧಿಕಾರಿಗಳೊಂದಿಗೆ FTA ಹಂಚಿಕೊಂಡಿದೆ.
ದತ್ತಾಂಶ ರಕ್ಷಣೆ ಮತ್ತು ಗೌಪ್ಯತೆಗೆ ಭಾರತದಲ್ಲಿ ಅಗತ್ಯ ಕಾನೂನು ಚೌಕಟ್ಟಿನ ಪರಿಶೀಲನೆ ಸೇರಿದಂತೆ ಸುದೀರ್ಘ ಪ್ರಕ್ರಿಯೆಯ ನಂತರ ಸ್ವಿಟ್ಜರ್ಲೆಂಡ್ ಭಾರತದೊಂದಿಗೆ ಮಾಹಿತಿ ವಿನಿಮಯಕ್ಕೆ ಒಪ್ಪಿಗೆ ನೀಡಿತ್ತು.
ವಿನಿಮಯದ ವಿವರಗಳು ಹೆಸರು, ವಿಳಾಸ, ವಾಸಿಸುವ ದೇಶ ಮತ್ತು ತೆರಿಗೆ ಗುರುತಿನ ಸಂಖ್ಯೆ ಸೇರಿದಂತೆ ಗುರುತಿಸುವಿಕೆ, ಖಾತೆ ಮತ್ತು ಹಣಕಾಸಿನ ಮಾಹಿತಿಯನ್ನು ಒಳಗೊಂಡಿರುತ್ತದೆ, ಹಾಗೆಯೇ ವರದಿ ಮಾಡುವ ಹಣಕಾಸು ಸಂಸ್ಥೆ, ಖಾತೆಯ ಬಾಕಿಗಳು ಮತ್ತು ಬಂಡವಾಳ ಆದಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಒಳಗೊಂಡಿರುತ್ತದೆ.