• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮಹಾರಾಷ್ಟ್ರ, ಕೇರಳದಿಂದ ಬರುತ್ತಿರುವ ಪ್ರಯಾಣಿಕರಿಂದ ಸ್ವ್ಯಾಬ್ ಟೆಸ್ಟ್ ಸಂಗ್ರಹ, ನೆಗೆಟಿವ್‌ ವರದಿ ತಪಾಸಣೆ: ಬಿಬಿಎಂಪಿ; ನಿಜವಾದ ವಾಸ್ತವ ಏನು?

ನೀಲಿ by ನೀಲಿ
August 5, 2021
in ಕರ್ನಾಟಕ
0
ಮಹಾರಾಷ್ಟ್ರ, ಕೇರಳದಿಂದ ಬರುತ್ತಿರುವ ಪ್ರಯಾಣಿಕರಿಂದ ಸ್ವ್ಯಾಬ್ ಟೆಸ್ಟ್ ಸಂಗ್ರಹ, ನೆಗೆಟಿವ್‌ ವರದಿ ತಪಾಸಣೆ: ಬಿಬಿಎಂಪಿ; ನಿಜವಾದ ವಾಸ್ತವ ಏನು?
Share on WhatsAppShare on FacebookShare on Telegram

ಒಂಬತ್ತು ಬಸ್ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ negative ಆರ್‌ಟಿ-ಪಿಸಿಆರ್ ಪ್ರಮಾಣಪತ್ರಗಳಿಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುತ್ತಿರುವ ಜನರಿಂದ 1,736 ಸ್ವ್ಯಾಬ್‌ ಟೆಸ್ಟ್ (ಬುಧವಾರ ಮಧ್ಯಾಹ್ನದವರೆಗೆ) ಸಂಗ್ರಹಿಸಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

ADVERTISEMENT

ಹೆಚ್ಚಿನ ಪರೀಕ್ಷೆಗಳನ್ನು ಪೂರ್ವ ವಲಯ (265) ಮತ್ತು ಆರ್‌ಆರ್ ನಗರಗಳಲ್ಲಿ ನಡೆಸಲಾಯಿತು. ಮತ್ತೊಂದೆಡೆ, ಪಶ್ಚಿಮ ವಲಯದಲ್ಲಿ ಕೇವಲ 30 ಪ್ರಯಾಣಿಕರನ್ನು ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ, ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ. 1,736 ಪ್ರಯಾಣಿಕರಲ್ಲಿ, 699 ಮಹಾರಾಷ್ಟ್ರದವರಾಗಿದ್ದಾರೆ.

ಭಾನುವಾರ, ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) ಪರೀಕ್ಷೆಗಳನ್ನು ನಡೆಸಲು ಮತ್ತು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಪರಿಶೀಲಿಸಲು ಒಂಬತ್ತು ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ತಂಡಗಳನ್ನು ರಚಿಸಿ ಸುತ್ತೋಲೆ ಹೊರಡಿಸಿದ್ದಾರೆ. ನೆಗೆಟಿವ್‌ ವರದಿಗಳಿಲ್ಲದವರಿಗೆ ಸ್ಥಳದಲ್ಲೇ ಸ್ವ್ಯಾಬ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ಮೆಜೆಸ್ಟಿಕ್ ನಿಲ್ದಾಣಗಳು, ಮೈಸೂರು ರಸ್ತೆ, ಯಶವಂತಪುರ, ಕೆಂಗೇರಿ ಮತ್ತು ಶಾಂತಿನಗರದ ಟರ್ಮಿನಲ್‌ಗಳಲ್ಲದೆ, ಯಶವಂತಪುರ, ಕಂಟೋನ್ಮೆಂಟ್ ಮತ್ತು ಕೆಆರ್ ಪುರಂನ ರೈಲ್ವೇ ನಿಲ್ದಾಣಗಳಲ್ಲಿ ನೆಗೆಟಿವ್‌ ವರದಿಯನ್ನು ಪರೀಕ್ಷಿಸಲು ಮತ್ತು ಪರಿಶೀಲಿಸಲು ತಂಡಗಳನ್ನು ನಿಯೋಜಿಸಲಾಗಿದೆ.

ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ಡಿ ರಂದೀಪ್ ಅವರು ಹೇಳುವಂತೆ, 100% ಪ್ರಯಾಣಿಕರನ್ನು ಪರೀಕ್ಷಿಸಲು ಸಾಧ್ಯವಾಗದಿದ್ದರು, ಉತ್ತಮ ಸ್ವ್ಯಾಬ್‌ ಟೆಸ್ಟ್‌ ಮಾಡುವಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಪ್ರಮುಖ ಬಸ್ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳ ನಿರ್ಗಮನ ಜಾಗದಲ್ಲಿ ನಾವು ಆರ್‌ಟಿ-ಪಿಸಿಆರ್ ಟೆಸ್ಟ್‌ ಮಾಡುವ ಜನರನ್ನು ಕೆಲಸಕ್ಕೆ ಸೇರಿಸಿದ್ದೇವೆ. ಕ್ವಾರಂಟೈನ್ (ಹೋಟೆಲ್ ಗಳಲ್ಲಿ) ಇನ್ನೂ ಆರಂಭವಾಗಿಲ್ಲ. ಇದು ನಾಳೆ (ಗುರುವಾರ) ಆರಂಭವಾಗಲಿದೆ “ಎಂದು ರಣದೀಪ್ ಹೇಳಿದ್ದಾರೆ.

ರೈಲುಗಳು ಮತ್ತು ಬಸ್‌ಗಳ ಆಗಮನದ ಸಮಯವನ್ನು ನಿಲ್ದಾಣದ ಮಾಸ್ಟರ್‌ಗಳು ಮತ್ತು ಕೆಎಸ್‌ಆರ್‌ಟಿಸಿಯಿಂದ ಸಂಗ್ರಹಿಸಲಾಗಿದೆ ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

“ನಾವು ಸುಮಾರು 2,000 ಪ್ರಯಾಣಿಕರ ಸ್ವ್ಯಾಬ್‌ಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ನಾವು ಅವರ ವಿಳಾಸಗಳನ್ನು ಗಮನಿಸುತ್ತಿದ್ದೇವೆ ಮತ್ತು ಅವರ ಮೊಬೈಲ್ ಸಂಖ್ಯೆಗಳನ್ನು ದೃಢೀಕರಿಸುತ್ತಿದ್ದೇವೆ. ಪರೀಕ್ಷಾ ಫಲಿತಾಂಶ ಬರುವವರಿಗೆ ಅವರಿಗೆ ಮನೆಯಲ್ಲಿಯೇ ಇರುವಂತೆ ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಅವರು ಹೇಳಿದ್ದಾರೆ.

PH: DC

ರಿಯಾಲಿಟಿ ಚೆಕ್ :

ಡೆಕ್ಕಲ್‌ ಎರಾಲ್ಡ್ಸ್‌ ವರದಿಗಾರರು ಯಶವಂತಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಹೆಚ್ಚಿನ ಪ್ರಯಾಣಿಕರನ್ನು ನಿಲ್ಲಿಸಿ ಆರ್‌ಟಿ-ಪಿಸಿಆರ್ negative ವರದಿಯನ್ನು ಪರೀಕ್ಷಿಸಲು ಅಧಿಕಾರಿಗಳು ಸ್ಪಷ್ಟವಾಗಿ ಹಿಂಜರಿಯುತ್ತಿದ್ದರು ಮತ್ತು ಪ್ರತಿ ಕೆಲವು ನಿಮಿಷಗಳಲ್ಲಿ ಕೇವಲ ಒಂದು ಅಥವಾ ಎರಡು ಪ್ರಯಾಣಿಕರಲ್ಲಿ ವರದಿಯನ್ನು ಕೇಳುತ್ತಿದ್ದರು.

ಶಿವಾಜಿನಗರದ ಆರೋಗ್ಯಾಧಿಕಾರಿ ಡಾ.ನವೀನ್ ಮಾತನಾಡಿ, “ನಾವು ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ negative ಆರ್‌ಟಿ-ಪಿಸಿಆರ್ ಪ್ರಮಾಣಪತ್ರವಿಲ್ಲದೆ ಪ್ರಯಾಣಿಕರನ್ನು ಬಿಡುವುದಿಲ್ಲ ಮತ್ತು ಅವರನ್ನು ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದು ಹೇಳಿದ್ದರು.

“ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ತಪಾಸಣೆಯನ್ನು ಮೇಲ್ವಿಚಾರಣೆ ಮಾಡುವ ದಕ್ಷಿಣ ವಲಯದ ಆರೋಗ್ಯ ಅಧಿಕಾರಿ ಡಾ ಕೋಮಲಾ ಕೆ ಆರ್ ಮಾತನಾಡಿ, ತಮ್ಮ ತಂಡವು ಕಳೆದ ಎರಡು ದಿನಗಳಲ್ಲಿ ಕೇರಳದಿಂದ ಬಂದ 65 ಪ್ರಯಾಣಿಕರನ್ನು ಪರೀಕ್ಷಿಸಿದೆ ಎಂದು ಹೇಳಿದ್ದಾರೆ.

“ಅವರಲ್ಲಿ ಸುಮಾರು 99 ಪ್ರತಿಶತದಷ್ಟು ಜನರು ನೆಗೆಟಿವ್ ವರದಿಯನ್ನು ಹೊಂದಿದ್ದಾರೆ. ಇಲ್ಲದಿರುವ ಒಂದು ಶೇಕಡಾವನ್ನು ನಾವು ಸ್ವ್ಯಾಬ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

“ಕೊನೆಯ ನಿಲ್ದಾಣವನ್ನು ತಲುಪುವ ಮುನ್ನ ಅನೇಕರು ಇಳಿಯುತ್ತಾರೆ, ಇದು ಮೈಸೂರು ರಸ್ತೆಯಾಗಿದ್ದು ಇಲ್ಲಿ ಲ್ಯಾಬ್ ತಂತ್ರಜ್ಞರು, ಡೇಟಾ ಎಂಟ್ರಿ ಆಪರೇಟರ್‌ಗಳು, ವೈದ್ಯರು ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ತಂಡವಿದೆ” ಎಂದು ಡಾ ಕೋಮಲಾ ಹೇಳಿದರು.

Tags: BBMPBBMP CommissionerCorona task forceCovid 19ಕರೋನಾಕೋವಿಡ್-19
Previous Post

ಹಳ್ಳಿಗೆ ರಸ್ತೆ ನಿರ್ಮಾಣವಾಗಲು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕಾಯಿತು!

Next Post

ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು?: ಡಿ.ಕೆ.ಶಿ ಪ್ರಶ್ನೆ

Related Posts

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು
ಇದೀಗ

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

by ಪ್ರತಿಧ್ವನಿ
February 2, 2026
0

ಬೆಂಗಳೂರು : ಕೊಯಂಬತ್ತೂರಿನಲ್ಲಿ ನಡೆದ ಸೆಲಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್ 2026) ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಸರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್...

Read moreDetails
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

February 2, 2026
ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Next Post
ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು?: ಡಿ.ಕೆ.ಶಿ ಪ್ರಶ್ನೆ

ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು?: ಡಿ.ಕೆ.ಶಿ ಪ್ರಶ್ನೆ

Please login to join discussion

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?
Top Story

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

by ಪ್ರತಿಧ್ವನಿ
February 2, 2026
ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!