ರಾಜಸ್ಥಾನದಿಂದ ಬೆಂಗಳೂರು ನಗರಕ್ಕೆ ಬಂದಿತ್ತು ಎನ್ನಲಾಗಿದ್ದ ನಾಯಿ ಮಾಂಸ ಎಂದು ಹೈಡ್ರಾಮಕ್ಕೆ ಕಾರಣ ಆಗಿದ್ದ ಮಾಂಸವನ್ನು ಆಹಾರ ಇಲಾಖೆ ಅಧಿಕಾರಿಗಳು ಸ್ಯಾಂಪಲ್ ಸಂಗ್ರಹ ಮಾಡಿದ್ದರು. ಇದೀಗ ರಾಜಸ್ಥಾನದಿಂದ ಬಂದಿರುವುದು ಕುರಿ ಮಾಂಸ, ಅಸುರಕ್ಷಿತ ಅಲ್ಲ ಎಂದು ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ವರದಿ ನೀಡಿದೆ.
ರಾಜಸ್ಥಾನದ ಜೈಪುರದಿಂದ ಬಂದ ಮಾಂಸ ಕುರಿಯದ್ದಾಗಿದೆ ಎಂದು ICAR ವರದಿ ಬಂದಿತ್ತು. ಬಳಿಕ ತಿನ್ನಲು ಯೋಗ್ಯನಾ ಎಂಬ ಬಗ್ಗೆ ಸ್ಯಾಂಪಲ್ ರಿಪೋರ್ಟ್ ಬರಬೇಕಿತ್ತು. ಇದಕ್ಕಾಗಿ FSSAI ಸೂಕ್ಷ್ಮಾಣು ವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳಿಸಿತ್ತು. ಇದೀಗ ಆಹಾರ ಇಲಾಖೆ ವರದಿ ಕೈ ಸೇರಿದ್ದು ತಿನ್ನಲು ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ಕೊಡಲಾಗಿದೆ.
ರೈಲು ಮೂಲಕ ನಗರಕ್ಕೆ ಬಂದಿದ್ದ ಮಾಂಸದ ಶುಚಿತ್ವ ಹಾಗೂ ಬ್ಯಾಕ್ಟೀರಿಯಾ ಬೆಳವಣಿಗೆ ಸಂಬಂಧ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳಿಸಲಾಗಿತ್ತು, ನಾಲ್ಕೈದು ದಿನಗಳ ಹಿಂದೆಯೇ ವರದಿ ಕೈ ಸೆರಿದ್ದು, ಇಂದು ವರದಿ ಮಾಡಲಾಗಿದೆ. ಕೃಷ್ಣಮಣಿ