ಈಗೀಗ ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಅವಘಡಕ್ಕೆ ಅನೇಕ ಸ್ಟಾರ್ ನಟರೂ ಸಹ ಬಲಿಯಾಗುತ್ತಿದ್ದಾರೆ. ಬಾಲಿವುಡ್ನ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಕೂಡ ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದು ಒಂದೆರೆಡು ದಿನಗಳ ಹಿಂದೆ ತಮಗೆ ಹೃದಯಾಘಾತವಾಗಿತ್ತು ಎಂದು ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 47 ವರ್ಷದ ಸುಶ್ಮಿತಾ ಸೇನ್ ಇಂತಹದ್ದೊಂದು ಮಾಹಿತಿಯನ್ನು ಶೇರ್ ಮಾಡುತ್ತಿದ್ದಂತೆಯೇ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ತಂದೆಯ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿರುವ ಸುಶ್ಮಿತಾ ಸೇನ್, ಕ್ಯಾಪ್ಶನ್ನಲ್ಲಿ ತಮ್ಮ ಹೃದಯಾಘಾತದ ಕತೆಯನ್ನು ಹಂಚಿಕೊಂಡಿದ್ದಾರೆ. ನಿಮ್ಮ ಹೃದಯವನ್ನು ನೀವು ಯಾವಾಗಲು ಸಂತಸ ಮತ್ತು ಧೈರ್ಯದಲ್ಲಿ ಇಟ್ಟುಕೊಳ್ಳಬೇಕು. ಆಗ ಮಾತ್ರ ನಿಮ್ಮ ಕಷ್ಟದ ಸಂದರ್ಭದಲ್ಲಿ ಅದು ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ನನ್ನ ತಂದೆ ನನಗೆ ಎಂದಿಗೂ ಹೇಳುತ್ತಿದ್ದರು. ನಾನು ಕಳೆದ 2 ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ನನಗೆ ಈಗ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಹಾಗೂ ಸ್ಟಂಟ್ ಕೂಡ ಅಳವಡಿಸಲಾಗಿದೆ. ಇನ್ನೊಂದು ವಿಶೇಷ ಅಂದರೆ ನನ್ನ ಹೃದ್ರೋಗ ತಜ್ಞರು ನನ್ನ ಹೃದಯ ವಿಶಾಲವಾಗಿದೆ ಎಂದು ಹೇಳಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
199ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದ ನಟಿ ಸುಶ್ಮಿತಾ ಸೇನ್ ಬಳಿಕ ಆಯ್ಕೆ ಮಾಡಿಕೊಂಡಿದ್ದು ಬಾಲಿವುಡ್ ಕ್ಷೇತ್ರವನ್ನ, ಬಿವಿ ನಂಬರ್ 1, ಡು ನಾಟ್ ಡಿಸ್ಟರ್ಬ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಮ್ ಸೇರಿದಂತೆ ಇನ್ನು ಸಾಕಷ್ಟು ಸಿನಿಮಾಗಳಲ್ಲಿ ಸುಶ್ಮಿತಾ ಸೇನ್ ನಟಿಸಿದ್ದಾರೆ. ಮದುವೆಯಾಗದೇ ಇದ್ದರೂ ಸಹ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಿಂಗಲ್ ಮದರ್ ಆಗಿ ಇಬ್ಬರನ್ನೂ ಸಲಹುತ್ತಿದ್ದಾರೆ. 2000ನೇ ಇಸ್ವಿಯಲ್ಲಿ ರೆನಿ ಹಾಗೂ 2010ರಲ್ಲಿ ಅಲಿಸಾರನ್ನು ಸುಶ್ಮಿತಾ ಸೇನ್ ದತ್ತು ಪಡೆದಿದ್ದಾರೆ. ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಜೊತೆಯಲ್ಲಿ ವೆಕೇಶನ್ ಮಾಡುವ ಮೂಲಕ ಸುಶ್ಮಿತಾ ಸೇನ್ ಕೆಲವು ತಿಂಗಳುಗಳ ಹಿಂದೆ ಭಾರಿ ಸುದ್ದಿಯಾಗಿದ್ದರು.