• Home
  • About Us
  • ಕರ್ನಾಟಕ
Saturday, January 24, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹಿಂದುಳಿದ ವರ್ಗಗಳ ಆಯೋಗದಿಂದ ಮೊಬೈಲ್ ಮೂಲಕ ಸಮೀಕ್ಷೆ : ಪ್ರತಿಯೊಬ್ಬರು ಗಣತಿದಾರರಿಗೆ ಮಾಹಿತಿ ನೀಡಿ: ಪ್ರಿಯಾಂಕ್ ಖರ್ಗೆ

ಪ್ರತಿಧ್ವನಿ by ಪ್ರತಿಧ್ವನಿ
September 6, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ
0
Share on WhatsAppShare on FacebookShare on Telegram

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ಸಾರ್ವಜನಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಜೆಸ್ಕಾಂ ವತಿಯಿಂದ ಪ್ರತಿ ಮನೆಗೂ ಯು.ಹೆಚ್.ಐ.ಡಿ (UHID) ನಂಬರ್ ಜನರೇಟ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ADVERTISEMENT

ಈ ಸಂಬಂಧದಲ್ಲಿ ಪ್ರತಿ ಮನೆಗೂ ಸರ್ಕಾರದಿಂದ ನಿಯೋಜಿತವಾಗುವ ಗಣತಿದಾರರು ಮುಂದಿನ ದಿನಗಳಲ್ಲಿ ಮೊಬೈಲ್ ಆಪ್ ಮುಖೇನ ಸಮೀಕ್ಷೆ ಕೈಗೊಳ್ಳಲಿದ್ದು, ಆ ಸಮಯದಲ್ಲಿ ಸಾರ್ವಜನಿಕರು ಸೂಕ್ತ ಮಾಹಿತಿ ಒದಗಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಹಾಗೂ ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಹಾಗೂ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಬುನಾದಿ ಹಾಕಲು ಮುಕ್ತ ಮನಸ್ಸಿನಿಂದ ಸಹಕಾರ ನೀಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.

ಈ ಸಮೀಕ್ಷೆಯು ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ನೀತಿ ನಿರೂಪಣೆಗೆ ಆಧಾರವಾಗಿರುತ್ತದೆ. ಹೀಗಾಗಿ ಸಮೀಕ್ಷೆಯನ್ನು ಸಂಪೂರ್ಣ ಯಶಸ್ವಿಗೊಳಿಸುವುದು ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿ ಅಕ್ಟೋಬರ್ 7 ರವರೆಗೆ ನಡೆಯುವ ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದಲ್ಲಿ ಮಾಡುವುದರಿಂದ, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡಿನ ಸಂಖ್ಯೆ, ವಿಕಲಚೇತನರಾಗಿದ್ದರೆ UID ಕಾರ್ಡ್ ಅಥವಾ ಅಂಗವಿಕಲರ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ದ ಮಾಡಿ ಇಟ್ಟುಕೊಂಡಿದ್ದರೆ ಸಮೀಕ್ಷೆ ಸುಲಭವಾಗುತ್ತದೆ ಮತ್ತು ವೇಗವಾಗುತ್ತದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

ಕುಟುಂಬದ ಎಲ್ಲಾ ಸದಸ್ಯರೂ ತಮ್ಮ ಆಧಾರ್ ಕಾರ್ಡ್ ಗಳೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುಬೇಕು.
ಸಮೀಕ್ಷೆ ಸಮಯದಲ್ಲಿ ಇಕೆವೈಸಿ ಮಾಡುವಾಗ ಆ ಸದಸ್ಯರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಬರುವ ಒಟಿಪಿಯನ್ನು ತಿಳಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿದ್ದಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಹೊಸ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು.

ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಕೋರಿರುವ ವಿದ್ಯಾರ್ಹತೆ, ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ಎಲ್ಲಾ ವಿವರಗಳ ಮಾಹಿತಿಯನ್ನು ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ಸಮೀಕ್ಷೆಯ ಪ್ರಶ್ನಾವಳಿಗಳ ಬಗ್ಗೆ ಅರಿವು ಮೂಡಿಸಲು ಪದವಿ ವಿಧ್ಯಾರ್ಥಿಗಳ ಮೂಲಕ ಸಮೀಕ್ಷಾ ಪೂರ್ವ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿರುವ ಸಚಿವರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಅಥವಾ Website ವಿಳಾಸ https://kscbc.karnataka.gov.in ರಲ್ಲಿ ಮಾಹಿತಿ ಪಡೆಯಬಹುದು ಎಂದಿದ್ದಾರೆ.

Tags: Priyank Khargepriyank kharge about rsspriyank kharge attackpriyank kharge audiopriyank kharge bytepriyank kharge interviewpriyank kharge newspriyank kharge news 2025priyank kharge on bjppriyank kharge on modipriyank kharge on pm modipriyank kharge on rsspriyank kharge on rss banpriyank kharge rss banpriyank kharge speechpriyank kharge today newspriyank kharge updatespriyank kharge videopriyank kharge vs bjppriyank kharge vs rssrss priyank kharge
Previous Post

ಎರಡೂವರೆ ವರ್ಷದಲ್ಲಿ 2,422 ರೈತರ ಆತ್ಮಹ*ತ್ಯೆ – ರಾಜ್ಯ ಸರ್ಕಾರದ ಅಸಡ್ಡೆಗೆ ಜೆಡಿಎಸ್ ಆಕ್ರೋಶ ! 

Next Post

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಿಂದ “ದೈವ” ಚಿತ್ರದ ಟೀಸರ್ ಬಿಡುಗಡೆ .

Related Posts

ಟಿ20 ಸರಣಿಯಲ್ಲಿ ನ್ಯೂಜಿಲೆಂಡ್‌ ಮಣಿಸಿದ ಭಾರತ : ಯಾದವ್‌ ಪಡೆಗೆ 7 ವಿಕೆಟ್‌ಗಳ ರೋಚಕ ಜಯ..!
ಇದೀಗ

ಟಿ20 ಸರಣಿಯಲ್ಲಿ ನ್ಯೂಜಿಲೆಂಡ್‌ ಮಣಿಸಿದ ಭಾರತ : ಯಾದವ್‌ ಪಡೆಗೆ 7 ವಿಕೆಟ್‌ಗಳ ರೋಚಕ ಜಯ..!

by ಪ್ರತಿಧ್ವನಿ
January 24, 2026
0

ಬೆಂಗಳೂರು : ರಾಯ್‌ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್‌ಗಳಿಂದ ಜಯಗಳಿಸಿದ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲ...

Read moreDetails
ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್‌ ಕುಸಿದು ಮೂವರಿಗೆ ಗಾಯ

ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್‌ ಕುಸಿದು ಮೂವರಿಗೆ ಗಾಯ

January 24, 2026
ಬ್ಯಾನರ್ ಗಲಾಟೆ ಬೆನ್ನಲ್ಲೆ ಮಾಡೆಲ್ ಹೌಸ್ ಗೆ ಬೆಂಕಿ

ಬ್ಯಾನರ್ ಗಲಾಟೆ ಬೆನ್ನಲ್ಲೆ ಮಾಡೆಲ್ ಹೌಸ್ ಗೆ ಬೆಂಕಿ

January 24, 2026
ಬೆದರಿಕೆ ಹಾಕಿ ಬೆಂಕಿ ಹಚ್ಚಿತಾ ಕಾಂಗ್ರೆಸ್‌..? : ಹೊತ್ತಿ ಉರಿದ ಜನಾರ್ದನ ರೆಡ್ಡಿ ಮಾಡೆಲ್‌ ಹೌಸ್..!

ಬೆದರಿಕೆ ಹಾಕಿ ಬೆಂಕಿ ಹಚ್ಚಿತಾ ಕಾಂಗ್ರೆಸ್‌..? : ಹೊತ್ತಿ ಉರಿದ ಜನಾರ್ದನ ರೆಡ್ಡಿ ಮಾಡೆಲ್‌ ಹೌಸ್..!

January 24, 2026
ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!

ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!

January 24, 2026
Next Post

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಿಂದ "ದೈವ" ಚಿತ್ರದ ಟೀಸರ್ ಬಿಡುಗಡೆ .

Recent News

ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್‌ ಕುಸಿದು ಮೂವರಿಗೆ ಗಾಯ
Top Story

ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್‌ ಕುಸಿದು ಮೂವರಿಗೆ ಗಾಯ

by ಪ್ರತಿಧ್ವನಿ
January 24, 2026
ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!
Top Story

ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!

by ಪ್ರತಿಧ್ವನಿ
January 24, 2026
Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್‌ ಹೆಮ್ಮರ!
Top Story

Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್‌ ಹೆಮ್ಮರ!

by Shivakumar
January 24, 2026
Daily Horoscope: ಇಂದು ಸರ್ವಾರ್ಥ ಸಿದ್ಧಿ ಯೋಗ ಇರುವ ರಾಶಿಗಳಿವು..!
Top Story

Daily Horoscope: ಇಂದು ಸರ್ವಾರ್ಥ ಸಿದ್ಧಿ ಯೋಗ ಇರುವ ರಾಶಿಗಳಿವು..!

by ಪ್ರತಿಧ್ವನಿ
January 24, 2026
ಅರ್ಧಕ್ಕೆ ನಿಂತ ಕರ್ನಾಟಕದ ʼಮಿಲೆಟ್ಸ್ ಟು ಮೈಕ್ರೋಚಿಪ್ʼ ಕನಸು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಾರತಮ್ಯ?
Top Story

ಅರ್ಧಕ್ಕೆ ನಿಂತ ಕರ್ನಾಟಕದ ʼಮಿಲೆಟ್ಸ್ ಟು ಮೈಕ್ರೋಚಿಪ್ʼ ಕನಸು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಾರತಮ್ಯ?

by ಪ್ರತಿಧ್ವನಿ
January 23, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಟಿ20 ಸರಣಿಯಲ್ಲಿ ನ್ಯೂಜಿಲೆಂಡ್‌ ಮಣಿಸಿದ ಭಾರತ : ಯಾದವ್‌ ಪಡೆಗೆ 7 ವಿಕೆಟ್‌ಗಳ ರೋಚಕ ಜಯ..!

ಟಿ20 ಸರಣಿಯಲ್ಲಿ ನ್ಯೂಜಿಲೆಂಡ್‌ ಮಣಿಸಿದ ಭಾರತ : ಯಾದವ್‌ ಪಡೆಗೆ 7 ವಿಕೆಟ್‌ಗಳ ರೋಚಕ ಜಯ..!

January 24, 2026
ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್‌ ಕುಸಿದು ಮೂವರಿಗೆ ಗಾಯ

ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್‌ ಕುಸಿದು ಮೂವರಿಗೆ ಗಾಯ

January 24, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!