ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು ಸುಪ್ರೀಂ ಕೋರ್ಟ್ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ತಂಡವನ್ನು ರಚಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಕಾರ್ಯಪಡೆ ರಚಿಸಿದ್ದು, ಮೆಡಿಕಲ್ ಆಕ್ಸಿಜನ್ ವ್ಯವಸ್ಥಿತ ರೀತಿಯಲ್ಲಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಶನಿವಾರ ಅಂದರೆ ಇವತ್ತು ಸುಪ್ರೀಂಕೋರ್ಟ್ 12 ಸದಸ್ಯರ ಕಾರ್ಯಪಡೆಯನ್ನು ರಚನೆ ಮಾಡಿದೆ.

ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆಯ ಬಗ್ಗೆ ದೂರು ನೀಡಿದ್ದು, ಅನೇಕ ಭಾಗಗಳಲ್ಲಿ ಆಕ್ಸಿಜನ್ ಲಭ್ಯವಿಲ್ಲದ ಕಾರಣ ಸಾವಿಗೀಡಾದ ವರದಿಗಳು ಬಂದಿವೆ. ಆಗಾಗಿ ನ್ಯಾಯಾಲಯದಿಂದ ನೇಮಕವಾದ ಕಾರ್ಯಪಡೆ ರಾಜ್ಯಗಳು, ಯೂನಿಯನ್ ಟೆರಿಟರಿಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಾದ ಔಷಧ, ವೈದ್ಯಕೀಯ ಆರೈಕೆ, ಆಮ್ಲಜನಕ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳಲಿದೆ. ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಸಮಿತಿಯ ಕನ್ವೀನರ್ ಆಗಿದ್ದು, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಹಾಗೂ 10 ಮಂದಿ ವೈದ್ಯರನ್ನು ಸಮಿತಿಗೆ ನಿಯೋಜಿಸಲಾಗಿದೆ.

ಈ ಕಾರ್ಯ ತಂಡ ವೈಜ್ಞಾನಿಕವಾಗಿ ಮತ್ತು ವಿಶೇಷ ಡೊಮೇನ್ ಜ್ಞಾನದ ಆಧಾರದ ಮೇಲೆ ಕೋವಿಡ್ -19 ಕುರಿತು ಬರುವ ಸಾರ್ವಜನಿಕ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ತನ್ನದೇ ಆದ ವಿಧಾನಗಳು ಮತ್ತು ಕಾರ್ಯನಿರ್ವಹಣೆಯ ಕಾರ್ಯವಿಧಾನವನ್ನು ರೂಪಿಸಲು ಇದು ಸ್ವಾತಂತ್ರ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕೊರೊನಾ ಪಿಡುಗು ನಿರ್ಹಣೆಯಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌ ತಾನೇ ೧೨ ಜನ ಪರಿಣಿತರ ರಾಷ್ಟ್ರೀಯ ಕೋವಿಡ್‌ ಕಾರ್ಯಪಡೆಯನ್ನು ನೇಮಿಸಿದೆ. ಈ ತಂಡ ಆಕ್ಸಿಜನ್‌ ವಿತರಣೆಯಿಂದ ಹಿಡಿದು ಕೋವಿಡ್‌ ಕುರಿತಾದ ಎಲ್ಲಾ ನಿರ್ವಹಣಾ ಅಂಶಗಳನ್ನೂ ಪರಿಗಣಿಸಿ ಶೀಫಾರಸ್ಸು ಮಾಡಿ ಮೇಲ್ವಿಚಾರಣೆಯ ಕಾರ್ಯ ನಿರ್ವಹಿಸಲಿದೆ.

ಅಪರೂಪದಲ್ಲೇ ಬಹಳ ಅಪರೂಪದ ಐತಿಹಾಸಿಕ ಕ್ಷಣಕ್ಕೆ ದೇಶ ಸಾಕ್ಷಿಯಾಗಿದೆ. ನಿರ್ಜೀವದಂತಿರುವ ಕೇಂದ್ರ ಸರ್ಕಾರದ ಕೆಲಸ ಕಾರ್ಯಗಳನ್ನು ಈಗ ಸುಪ್ರೀಂ ಕೋರ್ಟ್ ಮಾಡುತ್ತಿದೆ. ಕೋವಿಡ್ ನಿರ್ವಹಣೆಗೆ ಸುಪ್ರೀಂ ಕೋರ್ಟ್ 12 ಜನ ತಜ್ಞರ ಕಾರ್ಯಪಡೆ ಸಮಿತಿ‌ ರಚಿಸಿದೆ. ಈ ಮೂಲಕ ಕೋವಿಡ್ ನಿರ್ವಹಣೆಯ ಕೆಲವು ಅಧಿಕಾರಗಳನ್ನು ಮೋದಿ ಸಂಪುಟ ಕಳೆದುಕೊಂಡಂತಾಗಿದೆ. ಒಂದರ್ಥದಲ್ಲಿ ಜಸ್ಟಿಸ್‌ ಚಂದ್ರಚೂಡ್ ಈಗ ದೇಶದ ಅಘೋಷಿತ ಪ್ರಧಾನಿಯಾಗಿದ್ದಾರೆ ಅನ್ನಬಹುದಾಗಿದೆ ಎಂಬುದು ಜನಸಾಮಾನ್ಯರ ಮಾತು.

ಬಾರ್ ಮತ್ತು ಬೆಂಚ್ ಪ್ರಕಾರ, ರಾಷ್ಟ್ರೀಯ ಕಾರ್ಯಪಡೆ ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ:

೧. ಪಶ್ಚಿಮ ಬಂಗಾಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ, ಕೋಲ್ಕತ್ತಾದ ಮಾಜಿ ಉಪಕುಲಪತಿ ಡಾ.ಭಬತೋಷ್ ಬಿಸ್ವಾಸ್.

೨. ಡಾ.ದೇವೇಂದರ್ ಸಿಂಗ್ ರಾಣಾ, ಅಧ್ಯಕ್ಷರು, ಆಡಳಿತ ಮಂಡಳಿ, ಸರ್ ಗಂಗಾ ರಾಮ್ ಆಸ್ಪತ್ರೆ, ದೆಹಲಿ.

೩. ಬೆಂಗಳೂರಿನ ನಾರಾಯಣ ಹೆಲ್ತ್‌ಕೇರ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ.ದೇವಿ ಪ್ರಸಾದ್ ಶೆಟ್ಟಿ.

೪. ಡಾ.ಗಗನ್‌ದೀಪ್ ಕಾಂಗ್, ಪ್ರೊಫೆಸರ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ವೆಲ್ಲೂರು, ತಮಿಳುನಾಡು.

೫. ಡಾ.ಜೆ.ವಿ.ಪೀಟರ್, ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ನಿರ್ದೇಶಕರು.

೬. ಗುರುಗ್ರಾಮ್ನ ಮೆಡಂತ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ನರೇಶ್ ಟ್ರೆಹನ್.

೭. ಡಾ. ರಾಹುಲ್ ಪಂಡಿತ್, ನಿರ್ದೇಶಕ, ಕ್ರಿಟಿಕಲ್ ಕೇರ್ ಮೆಡಿಸಿನ್ ಮತ್ತು ಐಸಿಯು, ಫೋರ್ಟಿಸ್ ಆಸ್ಪತ್ರೆ, ಮುಲುಂಡ್ (ಮುಂಬೈ, ಮಹಾರಾಷ್ಟ್ರ) ಮತ್ತು ಕಲ್ಯಾಣ್ (ಮಹಾರಾಷ್ಟ್ರ).

೮. ಸರ್ ಗಂಗಾ ರಾಮ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಮತ್ತು ಲಿವರ್ ಟ್ರಾನ್ಸ್‌ಪ್ಲೆಂಟ್ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ ಡಾ.ಸೌಮಿತ್ರ ರಾವತ್

೯. ಡಾ.ಶಿವ ಕುಮಾರ್ ಸರಿನ್, ದೆಹಲಿಯ ಹಿರಿಯ ಪ್ರಾಧ್ಯಾಪಕ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ, ಮತ್ತು ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಲಿಯರಿ ಸೈನ್ಸ್ (ಐಎಲ್ಬಿಎಸ್) ದೆಹಲಿ ನಿರ್ದೇಶಕರು.

೧೦. ಮುಂಬೈನ ಹಿಂದೂಜಾ ಆಸ್ಪತ್ರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆ ಮತ್ತು ಪಾರ್ಸಿ ಜನರಲ್ ಆಸ್ಪತ್ರೆ, ಕನ್ಸಲ್ಟೆಂಟ್ ಚೆಸ್ಟ್ ವೈದ್ಯ ಡಾ.ಜರೀರ್ ಎಫ್ ಉಡ್ವಾಡಿಯಾ.

೧೧. ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ( ಆಫೀಸಿಯೊ ಮಾಜಿ ಸದಸ್ಯ); ಮತ್ತು

೧೨. ರಾಷ್ಟ್ರೀಯ ಕಾರ್ಯಪಡೆಯ ಕನ್ವೀನರ್, ಅವರು ಸಹ ಸದಸ್ಯರಾಗಿರುತ್ತಾರೆ, ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿರುತ್ತಾರೆ

ಸಮಾಲೋಚನೆ ಮತ್ತು ಮಾಹಿತಿಗಾಗಿ ಎನ್‌ಟಿಎಫ್ ಕೇಂದ್ರ ಸರ್ಕಾರದ ಈ ಕೆಳಗಿನ ಅಧಿಕಾರಿಗಳನ್ನು ಸಹ ಕರೆಯಬಹುದು ಎಂದು ತಿಳಿಸುದೆ.

೧. ಉಪ ಆಯುಕ್ತರಿಂದ ನಾಮನಿರ್ದೇಶನಗೊಳ್ಳಬೇಕಾದ ನೀತಿ ಆಯೋಗ ಸದಸ್ಯ

೨. ಕಾರ್ಯದರ್ಶಿ, ಮಾನವ ವ್ಯವಹಾರಗಳ ಸಚಿವಾಲಯ (Ministry of Human Affairs)

೩. ಕಾರ್ಯದರ್ಶಿ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ (Department for Promotion of Industry and Internal Trade)

೪. ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ.

೫. ನಿರ್ದೇಶಕ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ನವದೆಹಲಿ. (vi) ಡೈರೆಕ್ಟರ್ ಜನರಲ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ನವದೆಹಲಿ.

೬. ಆರೋಗ್ಯ ಸೇವೆಗಳ ಮಹಾನಿರ್ದೇಶಕರು.

೭. ಮಹಾನಿರ್ದೇಶಕರು, ರಾಷ್ಟ್ರೀಯ ಮಾಹಿತಿ ಕೇಂದ್ರ.

೮. ಮುಖ್ಯಸ್ಥ, ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ (ಸಿ-ಡಿಎಸಿ). (Development of Advanced Computing (C-DAC).)

ಸಂಬಂಧಪಟ್ಟ ಕಾರ್ಯದರ್ಶಿಗಳು ಹೆಚ್ಚುವರಿ / ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲು ನಾಮನಿರ್ದೇಶನ ಮಾಡಬಹುದು ಎಂದು ಸೂಚಿಸಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...