ಉತ್ತರಪ್ರದೇಶದಲ್ಲಿ ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗ್ತಿದೆ. ಇದೇ ಕಾರಣಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ಬುಲ್ಡೋಜರ್ ಬಾಬಾ ಅಂತಾನೂ ಕರೆಯುತ್ತಾರೆ. ಸಂವಿಧಾನದ ವಿರುದ್ಧ ಯಾರೇ ತಿರುಗಿ ಬವಿದ್ದರೂ ಯೋಗಿ ಆದಿತ್ಯನಾಥ್ ಸರ್ಕಾರ ಬುಲ್ಡೋಜರ್ ಕಳುಹಿಸಿ ಆರೋಪಿಯ ಮನೆ, ಕಚೇರಿ ಕಟ್ಟಡಗಳನ್ನ ಕೆಡವಿ ಆಸ್ತಿಯನ್ನ ಸರ್ಕಾರ ವಶಪಡಿಸಿಕೊಳ್ಳುವ ಕೆಲಸ ಮಾಡುತ್ತಿತ್ತು. ಒಂದು ಹಂತದಲ್ಲಿ ಯೋಗಿ ಆದಿತ್ಯನಾಥ್ ಅವರನ್ನ ಎಲ್ಲರೂ ಬುಲ್ಡೋಜರ್ ಬಾಬಾ ಅಂತಾನೇ ಕರೆಯೋದಕ್ಕೂ ಶುರು ಮಾಡಿದ್ರು. ಇದೀಗ ಅದೇ ಬುಲ್ಡೋಜರ್ ಬಾಬಾ ನೀತಿಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಹಾಗೂ ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 2023 ರಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ದರೋಡೆಕೋರ – ರಾಜಕಾರಣಿ ಆಗಿದ್ದ ಅತೀಕ್ ಅಹ್ಮದ್ ಸಾವನ್ನಪ್ಪಿದ್ದ.. ಆಮೇಲೆ ಆತನಿಗೆ ಸೇರಿದ ಭೂಮಿ ಅಂತ ರಾಜ್ಯ ಸರ್ಕಾರ ಅನೇಕ ಮನೆಗಳನ್ನ ಧ್ವಂಸ ಮಾಡಿತ್ತು.. ಆದ್ರೆ ಇದು ಅತೀಕ್ ಆಸ್ತಿಯಲ್ಲ ಬೇರೆಯವ್ರ ಆಸ್ತಿಯಾಗಿತ್ತು. ಹೀಗಾಗಿ ನೊಂದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು..

ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರ ಬಲಪ್ರಯೋಗ ಮಾಡಿದೆ ಅಂತ ಸುಪ್ರೀಂಕೋರ್ಟ್ ಸಿಟ್ಟು ಹೊರಹಾಕಿದೆ.. ಬುಲ್ಡೋಜರ್ ಕಳುಹಿಸಿ ತೆರವು ಕಾರ್ಯಾಚರಣೆಗಳನ್ನ ನಡೆಸೋದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ.. ಕಟ್ಟಡಗಳನ್ನ ಉರುಳಿಸುವುದು ಅಮಾನವೀಯ, ಅಕ್ರಮ. ಧ್ವಂಸ ಕ್ರಮವನ್ನು “ಉಗ್ರ” ರೀತಿಯಲ್ಲಿ ನಡೆಸಲಾಗುತ್ತಿದೆ . “ದೇಶದಲ್ಲಿ ಕಾನೂನಿನ ಆಳ್ವಿಕೆ ಇನ್ನೂ ಇದೆ ನೆನಪಿಡಿ, ನಾಗರಿಕರ ವಸತಿ ರಚನೆಗಳನ್ನ ಸುಮ್ಮನೆ ಕೆಡವಲು ಸಾಧ್ಯವಿಲ್ಲ.
“ಇದು ನಮ್ಮ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡುತ್ತದೆ. ಆಶ್ರಯ ಪಡೆಯುವ ಹಕ್ಕು, ಕಾನೂನಿನ ಜೊತೆ ಸೇರಿದೆ. 6 ವಾರಗಳಲ್ಲಿ ಪರಿಹಾರ ಕೊಡ್ಬೇಕು. ಮನೆ ಮಾಲೀಕರಿಗೆ ತಲಾ ರೂಪಾಯಿ 10 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಮಾರ್ಚ್ 26 ರಂದು ಸಮಾಜವಾದಿ ಪಕ್ಷದ ಸಂಸದ ರಾಮ್‌ಜಿ ಲಾಲ್ ಸುಮನ್ ಅವರ ನಿವಾಸದ ಹೊರಗೂ ಬುಲ್ಡೋಜರ್ ಪ್ರಯೋಗ ನಡೆದಿದೆ. ನಿನ್ನೆ ಸುಪ್ರೀಂಕೋರ್ಟ್ ಆದೇಶವನ್ನೇ ನೆಪ ಮಾಡ್ಕೊಂಡು ಸಮಾಜವಾದಿ ಪಕ್ಷದ ಸಂಸದರು ಸಂಸತ್ ಭವನದ ಆವರಣದಲ್ಲಿ ಅಖಿಲೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ಏನೇ ಹೇಳಿ.. ಯೋಗಿ ಸರ್ಕಾರದ ಬುಲ್ಡಜರ್ ನೀತಿಯನ್ನ ಅನೇಕ ರಾಜ್ಯಗಳು ಮಾಡೆಲ್ ಆಗಿ ತಗೊಂಡಿದ್ವು.. ಮಧ್ಯಪ್ರದೇಶ, ರಾಜಸ್ಥಾನ, ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಹಿಂಸಾಚಾರ ಆರೋಪಿಗಳ ಮನೆಯನ್ನೂ ಫಡ್ನವೀಸ್ ಸರ್ಕಾರ ಕೆಡವಿ ಹಾಕಿತ್ತು.. ಈಗ ಬುಲ್ಡೋಜರ್ ನೀತಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ..