
ತಮ್ಮ ವಿರುದ್ಧ ದಾಖಲಾಗಿರುವ ಡೀನೋಟೀಫಿಕೇಷನ್ ಕೇಸ್ (De notification) ರದ್ದುಪಡಿಸುವಂತೆ ಕೋರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದೆ. ಸುಪ್ರೀಂಕೋರ್ಟ್ ನ (Supreme court) ಜಸ್ಟೀಸ್ ದೀಪಾಂಕರ್ ದತ್ತಾ, ಜಸ್ಟೀಸ್ ರಾಜೇಶ್ ಬಿಂದಾಲ್ ಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ.

ಬೆಂಗಳೂರಿನ ಹಲಗೇವಡೇರಹಳ್ಳಿಯ ಡೀನೋಟೀಫಿಕೇಷನ್ ಕೇಸ್ ವಿಚಾರವಾಗಿ ಮಹಾದೇವಸ್ವಾಮಿ ಎಂಬುವವರು 2012 ರಲ್ಲಿ ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಿಸಿದ್ದರು.ಈ ಕೇಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಈ ಕೇಸ್ ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆದಿಲ್ಲ ಎಂದು ಎಚ್ಡಿಕೆ ವಾದ ಮಂಡಿಸಿದ್ದರು. ಆದ್ರೆ ಈ ವೇಳೆ ಭ್ರಷ್ಟಾಚಾರ ತಡೆ ಕಾಯಿದೆಯ 2018ರ ತಿದ್ದುಪಡಿ ಲಾಭ ಪಡೆಯುವುದನ್ನು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ.

2019ರ ಸೆಪ್ಟೆಂಬರ್ 4 ರಂದು ಬೆಂಗಳೂರಿನ ವಿಶೇಷ ಕೋರ್ಟ್ ಕೇಸ್ ದಾಖಲಿಸಲು ನಿರ್ದೇಶನ ನೀಡಿತ್ತು. ಈ ಆದೇಶವನ್ನು ಹೈಕೋರ್ಟ್,ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದ ಎಚ್.ಡಿ.ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ. ಎಚ್.ಡಿ.ಕುಮಾರಸ್ವಾಮಿ 2007ರ ಆಕ್ಟೋಬರ್ 3 ರಂದು ಸಿಎಂ ಆಗಿದ್ದಾಗ ಭೂಮಿ ಡೀನೋಟೀಫಿಕೇಷನ್ ಮಾಡಿದ್ರು.ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡೀನೋಟೀಫೈ ಮಾಡಿದ್ದರು ಎಂಬ ಆರೋಪ ಅವರ ಮೇಲಿದೆ.