ಭಾರತದ ನಾಸಾ (NASA) ಗಗನಯಾನಿ ಸುನೀತಾ ವಿಲಿಯಮ್ಸ್ (Sunitha wiliams) ಹಾಗೂ ಬಚ್ ವಿಲ್ಮೋರ್ (Butch wilmore) ಕಡೆಗೂ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿದ್ದಾರೆ.ಸುನೀತಾ, ಬುಚ್ ಹಾಗೂ ಇನ್ನಿತರ ಗಗನಯಾತ್ರಿಗಳನ್ನು ಹೊತ್ತ ಕ್ರೂ ಡ್ರಾಗನ್ ಬಾಹ್ಯಾಕಾಶ ನೌಕೆ ಫ್ಲೋರಿಡಾದ ಕರಾವಳಿಯ ಸಮುದ್ರದ ನೀರಿನಲ್ಲಿ ಇಂದು (ಮಾ.೧೮) ನಸುಕಿನ ಜಾವ 3:27ಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ.

2024 ರ ಜೂನ್‌ನಲ್ಲಿ ಸುನೀತ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದ ಸ್ಟಾರ್ ಲೈನರ್ ಅಂತರಿಕ್ಷ ನೌಕೆಯಲ್ಲಿನ ಕಾರಣಾಂತರಗಳಿಂದ ತಾಂತ್ರಿಕ ಸಮಸ್ಯೆ ಉಂಟಾಗಿ ಭೂಮಿ ವಾಪಸ್ ಮರಳಲು ಸಾಧ್ಯವಾಗದೆ ಗಗನಯಾನಿಗಳು ಅಲ್ಲೇ ಸಿಲ್ಲುಕುವಂತಾಗಿತ್ತು.

ಕೇವಲ 8 ದಿನಗಳ ಸಂಶೋಧನೆ ಮುಗಿಸಿ ಭೂಮಿಗೆ ಹಿಂತಿರುಗಬೇಕಿದ್ದ ಈ ಇಬ್ಬರೂ ಗಗನಯಾತ್ರಿಗಳು ಬರೋಬ್ಬರಿ 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿ ಮರಳಿ ಭೂಮಿಗೆ ಬರಲು ಕಾಯಬೇಕಿತ್ತು.

ಅಂತಿಮವಾಗಿ ಈ ಇಬ್ಬರೂ ಗಗನಯಾನಿಗಳನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಭೂಮಿಗೆ ಕರೆತರುವಲ್ಲಿ ನಾಸಾ ಯಶಸ್ವಿಯಾಗಿದ್ದು, ವಿಶ್ವದ ಹಲವೆಡೆ ಜನ ಸಂತಸಪಟ್ಟಿದ್ದಾರೆ.