ಬೇಸಿಗೆ ಬಂತು ಅಂದ್ರೆ ಒಂದು ರೀತಿಯ ಖುಷಿ ಮತ್ತೊಂದು ರೀತಿಯಲ್ಲಿ ಬೇಸರ,ಅದೂ ಈ ಬಾರಿಯ ಬಿಸಿಲಿಗೆ ಜನ ಸುಸ್ತಾಗಿ ಹೋಗಿದ್ದಾರೆ,ಯಾವಾಗಪ್ಪ ಮಳೆ ಬರುತ್ತೆ ಅಂತಾ ಕಾತುರದಿಂದ ಕಾಯ್ತಿದ್ದಾರೆ.ಈ ವಿಪರೀತ ಬಿಸಿಲಿನಲ್ಲಿ ಹೊರಗೆ ಕಾಲಿಡಲು ಅಸಾಧ್ಯ,ಆದ್ರೆ ಅನಿವಾರ್ಯತೆ ಇದ್ದವರು ಹೋಗ್ಲೆಬೇಕಾಗುತ್ತದೆ.. ಇಂತ ಸಂದರ್ಭದಲ್ಲಿ ನಾವು ಟ್ಯಾನ್ ಆಗೋದು ಹೆಚ್ಚು, ಸೂರ್ಯನ ಕಿರಣಗಳು ನಮ್ಮ ಚರ್ಮದ ಮೇಲೆ ನೇರವಾಗಿ ಬೀಳುವುದರಿಂದ ಸ್ಕಿನ್ ಕಪ್ಪಾಗುತ್ತದೆ. ಟ್ಯಾನ್ ಆದಾಗ ರಿಮೂವ್ ಮಾಡಲು ನೀವು ದುಬಾರಿ ಖರ್ಚು ಮಾಡುವ ಅಗತ್ಯವಿಲ್ಲಾ, ಬದಲಿಗೆ ಒಂದಿಷ್ಟು ಹೋಮ್ ರೆಮಿಡೀಸ್‌ನಿಂದ ಈಸಿ ಆಗಿ ಟ್ಯಾನ್ ಗೆ ಗುಡ್ ಬಾಯ್ ಹೇಳ್ಬಹುದು.
ನಿಂಬೆ ರಸ
ನಿಂಬೆ ರಸ ನ್ಯಾಚುರಲ್ ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ,ನಿಂಬೆ ರಸದಲ್ಲಿ ಆಂಟಿಆಕ್ಸಿಡೆಂಟ್ ಆಸ್ಕೋರ್ಬಿಕ್ ಆಸಿಡ್ ಅನ್ನು ಹೊಂದಿದೆ,ಇದು ಬೇಗನೆ ಟ್ಯಾನ್ ರಿಮೂವ್ ಮಾಡುವುದಕ್ಕೆ ಸಹಕಾರಿ.ಎರಡು ಟೇಬಲ್ ಸ್ಪೂನ್ ಅಷ್ಟು ನಿಂಬೆರಸಕ್ಕೆ,ಒಂದು ಟಿ ಸ್ಪೂನ್ ಅಷ್ಟು ಜೇನುತುಪ್ಪವನ್ನು ಮಿಶ್ರಣ ಮಾಡಿ ಟ್ಯಾನ್ ಆದ ನಿಮ್ಮ ಕೈ ಕಾಲುಗಳಿಗೆ ಹಚ್ಚಿ ೧೫ ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ. ವಾರಕ್ಕೆ ೩ ಬಾರಿ ಹೀಗೆ ಮಾಡುವುದರಿಂದ ಟ್ಯಾನ ಬೇಗನೆ ನಿವಾರಣೆ ಆಗುತ್ತದೆ.
ತೆಂಗಿನ ಹಾಲು
ತೆಂಗಿನ ಹಾಲು ಸನ್ ಬರ್ನ್ ಅನ್ನು ಶಮನಗೊಳಿಸಲು ಮತ್ತು ಸನ್ ಟ್ಯಾನ್ ಅನ್ನು ನಿವಾರಿಸಲು ಉತ್ತಮ,ತೆಂಗಿನ ಹಾಲನಲ್ಲಿ ಲಾರಿಕ್ ಆಸಿಡ್ ಸಮೃದ್ಧವಾಗಿದೆ, ಹಾಗೂ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ ಮತ್ತು ಚರ್ಮದ pH ಲೆವೆಲ್‌ನ ಬ್ಯಾಲೆನ್ಸ್ ಮಾಡೊದಕ್ಕೆ ಸಹಕಾರಿ. ತೆಂಗಿನ ಕಾಯಿಯ ತಿರುಳನ್ನ ರುಬ್ಬಿ ಹಾಲು ತೆಗೆದು, ಟ್ಯಾನ್ ಆದ ಭಾಗಕ್ಕೆ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು,ಉಗುರು ಬೆಚ್ಚ ನೀರಿನಿಂದ ವಾಶ್ ಮಾಡಿ.ಹೀಗೆ ಮಾಡುವುದರಿಂದ ಟ್ಯಾನ್ ಬೇಗನೆ ನಿವಾರಣೆಯಾಗುತ್ತದೆ̤.
ಮಸೂರ್ ದಾಲ್
ಸನ್ ಟ್ಯಾನ್‌ನ ರಿಮೂವ್ ಮಾಡೊದಿಕ್ಕೆ ಮಸೂರ್ ದಾಲ್ ಬೆಸ್ ರೆಮಿಡಿ.ಹಿಂದನ ಕಾಲದಿಂದಲ್ಲು ಈ ಒಂದು ಮನೆ ಮದ್ದನ್ನ ಬಳಸಿಕೊಂಡು ಬಂದಿದ್ದಾರೆ..ಇದೊಂದು ಆಯುರ್ವೇದದ ಸ್ಕ್ರಬ್ ಆಗಿದ್ದು, ಚರ್ಮದ ಮೇಲಿನ ಟ್ಯಾನ್ ಪದರಗಳನ್ನು ಎಫ್ಫೋಲಿಯೇಟ್ ಮಾಡುತ್ತದೆ, ಮತ್ತು ಚರ್ಮವನ್ನು ಬ್ರೈಟ್ ಮಾಡುತ್ತದೆ.ರಾತ್ರಿ ೩ ಸ್ಪೂನ್ ಅಷ್ಟು ದಾಲ್‌ನ ನೀರಿರಲ್ಲಿ ನೆನೆಸಿಡಿ, ಬೆಳಗ್ಗೆ ಅದನ್ನು ಗ್ರೈಂಡ್ ಮಾಡಿ ಪೇಸ್ಟ್ ತಯಾರಿಸಿ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಮಿಶ್ರಣ ಮಾಡಿ, ಟ್ಯಾನ್ ಆದ ಭಾಗಕ್ಕೆ ಹಚ್ಚಿ ೧೫ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ ಬೇಗನೆ ಟ್ಯಾನ ರಿಮೂವ್ ಆಗುತ್ತದೆ..
ಒಟ್ಟಿನಲ್ಲಿ ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಛತ್ರಿಯನ್ನು ಬಳಸಿ, ಫುಲ್ ಆರ್ಮ್ ಬಟ್ಟೆಗಳನ್ನು ಧರಿಸಿ, ಸನ್ ಸ್ಕ್ರೀನ್ ಹಚ್ಚಿ, ಹಾಗೂ ತಪ್ಪದೆ ಮೋಶ್ಚರೈಸರ್ ಬಳಸಿ ನಿಮ್ಮ ಬಗ್ಗೆ ನೀವೆ ಕಾಳಜಿ ವಹಿಸಿ..