ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಸಮನ್ಸ್ ಕರ್ನಾಟಕದ ಸಿಐಡಿ ಪೊಲೀಸರು ನೀಡಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾಗೂ ಸಮನ್ಸ್ ನೀಡಿದ್ದು, ಮೀಸಲಾತಿ ಕೋಟಾದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿತ್ತು. ಇದೊಂದು ಆಕ್ಷೇಪಾರ್ಹ ಟ್ವೀಟ್ ಡೀಲೀಟ್ ಮಾಡಲು ಟ್ವಿಟರ್‌ಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿತ್ತು.
ಎಸ್‌ಸಿ, ಎಸ್‌ಟಿ , ಓಬಿಸಿ ಮೀಸಲಾತಿಯನ್ನು ಮುಸ್ಲಿಂರು ಕಬಳಿಸುತ್ತಾರೆ ಎಂದು ಟ್ವೀಟ್‌ನಲ್ಲಿ ಬರೆದಿದ್ದು, ಕಾಂಗ್ರೆಸ್ ನಾಯಕರು ಎಸ್‌ಸಿ, ಎಸ್‌ಟಿ, ಓಬಿಸಿ ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುತ್ತಾರೆ ಎಂದು ಚಿತ್ರದ ಮೂಲಕ ಟ್ವೀಟ್ ಮಾಡಿತ್ತು.
ಇದೊಂದು ಕೋಮು ಆಧಾರದ ಟ್ವೀಟ್ ಎಂದು ಪರಿಗಣಿಸಿದ ಕೇಂದ್ರ ಚುನಾವಣಾ ಆಯೋಗದಿಂದ ಈಗ ಕ್ರಮವಾಗಿದೆ. ಕರ್ನಾಟಕ ಸಿಐಡಿಯ ಸೈಬರ್ ಸೆಲ್‌ನಿಂದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾಗೆ ಸಮನ್ಸ್ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯಾಧ್ಯಕ್ಷರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ ಸಿಐಡಿ ಸೈಬರ್ ಸೆಲ್ ಸೂಚಿಸಿದೆ.