ಬೇಸಿಗೆಯಲ್ಲಿ ಮಕ್ಕಳಿಗೆ ಧರಿಸಬಹುದುದಾ ಸಿಂಪಲ್ ಅಂಡ್ ಫ್ಯಾಶನ್ ಡ್ರೆಸ್ ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಕ್ರೀಯೇಟ್ ಮಾಡಿದೆ… ಈ ಸೀಸನ್ನಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಇರುವ ಕಾರಣ ಆಟಾ ಓಡಾಟ ಹೆಚ್ಚಾಗಿರತ್ತೆ ಹಾಗಾಗಿ ಬೆವರುವುದು ಕೂಡಾ ಜಾಸ್ತಿ ಆಗತ್ತೆ.. ಅದಕ್ಕೆ ಅನುಕೂಲವಾಗುವಂತೆ ತಳುವಾದ ಜೊತೆಗೆ ಫ್ಯಾಶನೇಬಲ್ ಆಗಿರುವಂತ ಕಿಡ್ಸ್ ವೇರ್ ಇವು… ಎಲ್ಲಿ ನೋಡಿದ್ರೂ ಹೆಣ್ಣು ಮಕ್ಕಳಿಗೆ ಬಗೆ ಬಗೆಯ ಪ್ಯಾಟರ್ನ್ ಡ್ರಸ್ಗಳನ್ನ ನೋಡ್ತೀವಿ ಆದ್ರೇ ಇದೀಗಾ ಗಂಡು ಮಕ್ಕಳಿಗೂ ಅಷ್ಟೆ ವ್ಯರ್ಯಾಟಿ ಬಟ್ಟೆಗಳು ಲಗ್ಗೆಯಿಟ್ಟಿವೆ..
ಹೆಣ್ಣು ಮಕ್ಕಳ ಬಟ್ಟೆಗಳ ಬಗ್ಗೆ ನೋಡ್ತಾಹೋದ್ರೆ ಒಂದಲ್ಲಾ ಎರಡಲ್ಲಾ ಸುಮಾರು ಆಪಶ್ನ್ಗಳಿವೆ ಮಿನಿ ಸ್ಕ್ರಟ್ಗಳು, ಕ್ರಾಪ್ ಟಾಪ್, ಕಾಟನ್ ಫ್ರಾಕ್, ಪ್ರಿಂಟೆಡ್ ಅಂಡ ಫ್ಲಾರಲ್ ಡ್ರೆಸ್, ಸ್ಲೀವ್ ಲೆಸ್ ಟಾಪ್, ಹಾಫ್ಸ್ಲೀವ್ ಡ್ರೆಸ್, ಡ್ರಾಪ್ ಶೋಲ್ಡರ್ ಟಿ ಶರ್ಟ್, ಕೋ ಆರ್ಡ್ ಸೆಟ್, ಪಾಕೆಟ್ ಮಿಡಿ, ಸಿಂಗಲ್ ಪೀಸ್, ಬಗೆ ಬಗೆಯ ಬಣ್ಣದ ಪ್ಲೇ ಸೂಟ್, ಜಂಪ್ ಸೂಟ್, ಡಂಗ್ರಿ, ಮಲ್ಟಿ ಕಲರ್ ಶಾರ್ಟ್ಸ್̧ ಹೀಗೆ ವಿಧವಿಧದ ಬಟ್ಟೆಗಳು ಆಕರ್ಷಿಸುತ್ತವೆ̤̤
ಗಂಡುಮಕ್ಕಳ ಬಟ್ಟೆಗಳ ಬಗ್ಗೆ ಹೇಳೊದಾದ್ರೆ ರೋಂಪರ್ಸ್, ಫಂಕಿ ಬಾಕ್ಸರ್, ಶಾರ್ಟ್ಸ್̧ ಕ್ಯಾಂಪ್ ಕಾಲರ್ ಶರ್ಟ್ಗಳು̧ ಫಂಕಿ ಅಂಡ್ ಸ್ಟ್ರೈಪ್ ಟಿ ಶರ್ಟ್ಗಳು, ಪ್ರಿಂಟೆಡ್ ಶರ್ಟ್̧ ಚಿನೋಸ್ ಮತ್ತು ಜೀನ್ಸ್̧ ಸ್ಲೇವ್ ಲೆಸ್ ಬನಿಯನ್ ರೀತಿಯ ಟಿ ಶರ್ಟ್ಗಳು, ಡಂಗ್ರಿ ,ಕಾರ್ಟೂನ್ ಪ್ರಿಂಟ್ ಆವೆಂಜರ್ ಪ್ರಿಂಟ್, ಲೈಟ್ ಕಲರ್ಸ್ ಡಾರ್ಕ್ ಕಲರ್ಸ್ ರೈನ್ಬೋ ಕಲರ್ಸ್ ಹೀಗೇ ಅಬ್ಬಬ್ಬಾ ನೋಡ್ತಾ ಹೋದ್ರೆ ಸಾಕಷ್ಟು ಬಗೆಯ ಬಣ್ಣಗಳು ಹಾಗೂ ಪ್ಯಾಟರ್ನ್ ಗಳು ಕೂಡಾ ಹೆಚ್ಚಿದೆ..ಇದೆಲ್ಲದರ ಜೊತೆಗೆ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇಬ್ಬರು ಕೂಡಾ ಧರಿಸದ ಬಹುದಾದ ಪ್ರಿಂಟೆಡ್ ಅಂಡ ಫ್ಲಾರಲ್ ಕೋ ಆರ್ಡ್ ಸೆಟ್, ರೈನ್ಬೋ ಕಲರ್ ಟಿ ಶರ್ಟ್, ಶಾರ್ಟ್ಸ್ ಹಾಗೂ ಪ್ಯಾಂಟ್ಗಳು ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ..
ಇನ್ನೂ ಸಮ್ಮರ್ ಬಂದಾಗ ಮಕ್ಕಳು ಹಾಗೂ ದೊಡ್ಡವರು ಕಾಟನ್ ಹಾಗೂ ಲೈಟ್ ಕಲರ್ ಬಟ್ಟೆಗಳನ್ನ ಧರಿಸೋದು ಉತ್ತಮ ಯಾಕೆಂದ್ರೆ ಬೇಸಿಗೆಯಲ್ಲಿ ನಾವೂ ಹೆಚ್ಚು ಬೆವರೊದ್ರಿಂದ ಕಾಟನ್ ಬಟ್ಟೆ ನೀರನ್ನ ಬೇಗನೆ ಹೀರಿಕೊಳ್ಳುತ್ತದೆ ಜೊತೆಗೆ ಬೇಗನೆ ಆ ಬೆವರು ಆವಿಯಾಗುತ್ತದೆ.. ಒಟ್ನಲ್ಲಿ ಈ ಸಮ್ಮರ್ಗೆ ಸಾಕಷ್ಟು ಬಗೆಯ ಬಟ್ಟೆಗಳು ಬಂದಿರೋದು ತುಂಬಾ ವ್ಯರೈಟಿಯಾಗಿದೆ ಅನ್ನುತ್ತಾರೆ ಡಿಸೈನರ್ಸ್..