ಬೇಸಿಗೆಯಲ್ಲಿ ಹೆಚ್ಚು ಜನಕ್ಕೆ ಕಾಡುವಂತ ಸಮಸ್ಯೆ ಅಂದ್ರೆ ದೇಹದಲ್ಲಿ ಅದು ಕೂಡ ಬೆನ್ನಿನ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗುವಂತದ್ದು.ಈ ಗುಳ್ಳೆಗಳು ಆಗುವುದು ಮಾತ್ರವಲ್ಲದೆ ಅದರಿಂದ ತುರಿಕೆಯು ಶುರುವಾಗುತ್ತದೇ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಈ ಸಮಸ್ಯೆ ಎದುರಾಗ್ತಾಯಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಬೇಸಿಗೆಯಲ್ಲಿ ನಾವು ಹೆಚ್ಚು ಬೆವರ್ತಿವಿ ಈ ಬೆವರಿನಿಂದಾಗಿ ನಮ್ಮ ಬೆನ್ನಿನಲ್ಲಿ ಗುಳ್ಳೆಗಳಾಗುತ್ತದೆ. ಗುಳ್ಳೆಗಳನ್ನು ನ್ಯಾಚುರಲ್ ಆಗಿ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.
ಕೊಬ್ಬರಿ ಎಣ್ಣೆ
ಬೆವರಿನಿಂದಾಗಿ ಬೆನ್ನಿನಲ್ಲಿ ನೋಡುವಂತ ಗುಳ್ಳೆಗಳನ್ನು ಹೋಗಲಾಡಿಸುವುದಕ್ಕೆ ಕೊಬ್ಬರಿ ಎಣ್ಣೆ ಒಳ್ಳೆಯ ಮದ್ದು .ಎರಡು ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಉಪ್ಪನ್ನು ಬೆರೆಸಿ ಚೆನ್ನಾಗಿ ಕುದಿಸಿ.ನಂತರ ಅದು ತಣ್ಣಗಾದ ಮೇಲೆ ಗುಳ್ಳೆಗಳಾದ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಗುಳ್ಳೆಗಳು ಬೇಗನೆ ನಿವಾರಣೆ ಆಗುತ್ತದೆ ಇದರ ಜೊತೆಗೆ ತುರಿಕೆ ತಕ್ಷಣಕ್ಕೆ ಕಡಿಮೆಯಾಗುತ್ತದೆ.
ಬೇವಿನ ಎಲೆ
ಬೇವಿನ ಎಲೆ ಕಹಿಯಾದರು ಕೂಡ ಇದರಿಂದ ಔಷಧೀಯ ಅಂಶ ತುಂಬಾನೇ ಇದೆ. ಬೆನ್ನಿನಲ್ಲಿ ಆಗಿರುವಂತಹ ಗುಳ್ಳೆಗಳನ್ನು ತಕ್ಷಣಕ್ಕೆ ನಿವಾರಿಸಲು ಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದನ್ನ ಬೆನ್ನಿನ ಭಾಗಕ್ಕೆ ಅಥವಾ ಗುಳ್ಳೆಗಳಾದ ಜಾಗಕ್ಕೆ ಹಚ್ಚಿ. ಕೆಲ ಕಾಲ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡಿ .ಇದು ತಕ್ಷಣವೇ ಪರಿಹಾರವನ್ನ ನೀಡುತ್ತದೆ .ಇನ್ನು ಬೇವಿನಲ್ಲಿ ಆಂಟಿ ಮೈಕ್ರೋಬಿಯಲ್ ಮತ್ತು ಉರಿಯುತ್ತದ ಹಾಗೂ ಆಂಟಿ ಫಂಗಲ್ ಗುಣಲಕ್ಷಣಗಳು ಇರೋದ್ರಿಂದ ನಿಮಗೆ ಏನೇ ಗುಳ್ಳೆಗಳು ಅಥವಾ ಅಲರ್ಜಿ ಆದ್ರೂ ಕಡಿಮೆಯಾಗುತ್ತದೆ.
ನುಗ್ಗಿ ಸೊಪ್ಪು
ನುಗ್ಗಿ ಸೊಪ್ಪು ದೇಹಕ್ಕೆ ಉಷ್ಣದ ಅಂಶವನ್ನು ಹೆಚ್ಚು ಮಾಡುತ್ತದೆ ಆದರೆ ಬೆವರಿನಿಂದ ಆಗುವ ಗುಳ್ಳೆಗಳನ್ನು ತಕ್ಷಣಕ್ಕೆ ನಿವಾರಣೆ ಮಾಡುತ್ತದೆ ನುಗ್ಗೆ ಸೊಪ್ಪನ್ನು ಚೆನ್ನಾಗಿ ರುಬ್ಬಿ ಗುಳ್ಳೆಗಳಾದ ಜಾಗಕ್ಕೆ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಬೇಗನೆ ಗುಳ್ಳೆಗಳು ನಿವಾರಣೆ ಆಗುತ್ತದೆ ಹಾಗೂ ಕಲೆಗಳು ಕೂಡ ಕಡಿಮೆಯಾಗುತ್ತದೆ.
ಆಪಲ್ ಸೈಡರ್ ವಿನಿಗರ್
ಆಪಲ್ ಸೈಡರ್ ವಿನಿಗರ್ ತುರಿಕೆಯನ್ನ ನಿವಾರಿಸಲು ತುಂಬಾನೇ ಒಳ್ಳೆಯದು. ಇದರಲ್ಲಿ ಕೂಡ ಆಂಟಿ ಫಂಗಲ್ ಗುಣಲಕ್ಷಣಗಳು ಇದ್ದು ಯಾವುದೇ ತುರಿಕೆಗಳಾಗಲಿ ಅಥವಾ ಗುಳ್ಳೆಗಳಾಗಲಿ ತಕ್ಷಣಕ್ಕೆ ಪರಿಹಾರ ನೀಡುತ್ತದೆ .ಸ್ವಲ್ಪ ನೀರಿಗೆ ಬೆರೆಸಿ ನಂತರ ಒಂದು ಹತ್ತಿ ಉಂಡೆಯ ಸಹಾಯದಿಂದ ಗುಳ್ಳೆಗಳಾದ ಜಾಗಕ್ಕೆ ಮಿಶ್ರಣವನ್ನು ಅಪ್ಲೈ ಮಾಡುವುದರಿಂದ ಗುಳ್ಳೆಗಳು ಬೇಗನೆ ನಿವಾರಣೆಯಾಗುತ್ತದೆ.
ಇದೆಲ್ಲದರ ಜೊತೆಗೆ ನಮ್ಮ ದೇಹ ತುಂಬಾನೇ ಬೆವರದಂತೆ ನಾವು ನೋಡಿಕೊಳ್ಳಬೇಕು.ಇದರ ಜೊತೆಗೆ ಬೆವರಿದಾಗ ನಾವು ಧರಿಸಿದ ಬಟ್ಟೆ ಒದ್ದೆಯಾಗಿದ್ದರೆ ತಕ್ಷಣಕ್ಕೆ ಅದನ್ನು ಬದಲಾಯಿಸುವುದು ಉತ್ತಮ.ಇಲ್ಲವಾದಲ್ಲಿ ಈ ಗುಳ್ಳೆಗಳು ಜಾಸ್ತಿ ಆಗುತ್ತದೆ. ಬೇಸಿಗೆಯಲ್ಲಿ ನಾವು ಕಾಟನ್ ಬಟ್ಟೆಗಳನ್ನ ಧರಿಸುವಂತದ್ದು ಉತ್ತಮ.