ರಾಜ್ಯ ಬಿಜೆಪಿ (BJP) ಪಕ್ಷಕ್ಕೆ ಬರಲು ತಯಾರಿ ಮಾಡುತ್ತಾ ಇದ್ದಾರೆ ಎಂದು ಸಾಕಷ್ಟು ದಿನಗಳಿಂದ ಮಾತು ಕೇಳಿ ಬರುತ್ತಾ ಇದೆ ಅದ್ರೆ ಇಂದು ಬಿಜೆಪಿ ಹಿರಿಯ ನಾಯಕ ಎಸ್ಎಂ ಕೃಷ್ಣಾರನ್ನು (Senior BJP leader SM Krishna) ಭೇಟಿಯಾದ ಅವರು ಕೇಸರಿ ಪಡೆ ಸೇರುವ ಬಗ್ಗೆ ಬಿಜೆಪಿ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ. ಈಗಾಗಲೇ ಕೆಲವೊಂದು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದ ಸುಮಲತಾ ಅವರು ಇಂದು ಜೆಪಿ ನಗರದಲ್ಲಿರುವ ನಿವಾಸದಲ್ಲ(Residence at JP Nagar) ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.

ಈ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟ ಕುತೂಹಲ ಜಾಸ್ತಿ ಮಾಡಿದೆ, ಈ ಬಗ್ಗೆ ಸ್ವತಃ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದು, ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಹಿನ್ನಲೆ ಅವರಿಗೆ ಅಭಿನಂದನೆ ಸಲ್ಲಿಸಲು ಭೇಟಿಯಾಗಿದ್ದೆ. ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ನಮ್ಮ ಬೆಂಬಲಿಗರ ಅಭಿಪ್ರಾಯ ಬೇಕು ಎಂದು ಹೇಳಿದ್ದಾರೆ, ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸುಮಲತಾ ಅವರು ಹೇಳಿದ್ದಾರೆ.
ಮಂಡ್ಯದಿಂದ ಹಲವರು ಬಂದಿದ್ದಾರೆ, ಎಲ್ಲರ ಜತೆ ಚರ್ಚೆ ಮಾಡುತ್ತೇನೆ. ನನ್ನ ಲಾಭ ನಷ್ಟ ನೋಡಿ ನಿರ್ಧಾರ ಮಾಡಲ್ಲ. ನನ್ನ ಜತೆ ಇರುವವರ ಬಗ್ಗೆ ನೋಡಿಕೊಂಡೇ ನಿರ್ಧಾರ ಮಾಡಬೇಕಿದೆ. ಇನ್ನೂ ಹಲವರ ಜೊತೆ ಚರ್ಚೆ ಮಾಡಬೇಕು. ಹಿರಿಯರು, ಹಿತೈಷಿಗಳು, ಕುಟುಂಬಸ್ಥರು, ವರಿಷ್ಠರ ಜೊತೆ, ಪಕ್ಷೇತರವಾಗಿ ಸ್ಪರ್ಧಿಸುವಂತೆ ಹೇಳಿ ಬೆಂಬಲಿಸಿದ ನಾಯಕರ ಜೊತೆ ಚರ್ಚೆ ನಡೆಸಿಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.