ನವದೆಹಲಿ: ಏ.೦5: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ನವದೆಹಲಿಯಲ್ಲಿ ಭೇಟಿಯಾಗಿದ್ದರು, ಇದೇ ವೇಳೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಇದ್ದರು. ಪ್ರಧಾನಿ ಮೋದಿಗೆ ನಟ ಅಭಿಷೇಕ್ ಅಂಬರೀಶ್ ವಿಶೇಷ ಉಡುಗೊರೆಯನ್ನು ನೀಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಫೋಟೋ ತೆಗೆಸಿಕೊಂಡರು.

ಇನ್ನ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಗೌರವಾನ್ವಿತ ಹಾಗೂ ದೇಶದ ಪ್ರಗತಿಗಾಗಿ ಸದಾ ಸಮರ್ಪಣಾ ಮನೋಭಾವ ಹೊಂದಿರುವ ನಾಯಕರಿಂದ ಪುತ್ರ ಅಭಿಷೇಕ್ ಅಂಬರೀಶ್ ಅವರು ಆಶೀರ್ವಾದ ಪಡೆಯುವಂತಹ ಸೌಭಾಗ್ಯವನ್ನು ಇಂದು ಪಡೆದರು. ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದಾರೆ.