2019ರಲ್ಲಿ ನಡೆದು ಲೋಕಸಭಾ ಚುನಾವಣೆ(karnataka assembly election2023) ವೇಳೆ ಕಾಂಗ್ರೆಸ್(congress) ಹಾಗೂ ಜೆಡಿಎಸ್(JDS) ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಕರ್ನಾಟಕದಲ್ಲಿ(karnataka) ಮೈತ್ರಿ ಮಾಡಿಕೊಂಡೇ ಚುನಾವಣೆ ನಡೆಸಿದ್ದವು. ಆದರೂ ಬಿಜೆಪಿ ವಿರುದ್ಧ ಗೆದ್ದು ಬೀಗುವುದಕ್ಕೆ ಸಾಧ್ಯವಾಗಿರಲಿಲ್ಲ. ಬರೋಬ್ಬರಿ 25 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಭಾರತೀಯ ಜನತಾ ಪಾರ್ಟಿ, ಮೈತ್ರಿ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡುವುದರಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಕರ್ನಾಟಕದ ಮೈತ್ರಿ ಸರ್ಕಾರವೂ ಮುರಿದು ಬಿದ್ದಿತ್ತು. ಆದರೆ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ದಾಳ ಉರುಳಿಸಿದ್ದ ಕಾಂಗ್ರೆಸ್(congress) ನಾಯಕರು ಇಬ್ಬರು ನಾಯಕರ ಸೋಲು ಗೆಲುವಿಗೆ ಸಾಕ್ಷಿಯಾಗಿತ್ತು. ಮಂಡ್ಯದಲ್ಲಿ ಸುಮಲತಾ ಅವರನ್ನು ಗೆಲ್ಲಿಸಿ ನಿಖಿಲ್ ಕುಮಾರಸ್ವಾಮಿಯನ್ನು(nikil kumaraswamy) ಸೋಲಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು ಎನ್ನುವುದು ಜೆಡಿಎಸ್ನ ಆರೋಪ ಆಗಿತ್ತು.


ಮಂಡ್ಯದಲ್ಲಿ ಜೆಡಿಎಸ್ಗೆ ದ್ರೋಹ ಮಾಡಿತ್ತು ಸತ್ಯ..!
ಈ ಮಾತನ್ನು ಜೆಡಿಎಸ್(JDS) ಮೈತ್ರಿ ಸರ್ಕಾರ ಬಿದ್ದ ಕೂಡಲೇ ಹೇಳಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಸೋಲಿಸುವ ಕೆಲಸ ಮಾಡಿತ್ತು ಎಂದು ಆರೋಪಿಸಿತ್ತು. ಆದರೆ ಕಾಂಗ್ರೆಸ್ ನಾಯಕರು ಜೆಡಿಎಸ್ ಆರೋಪವನ್ನು ಅಲ್ಲಗಳೆದಿದ್ದರು. ಆದರೆ ಇದೀಗ ಜೆಡಿಎಸ್ ಆರೋಪವನ್ನು ಒಪ್ಪಿಕೊಂಡಿದೆ. ನಿನ್ನೆ ಮಂಡ್ಯ ಜಿಲ್ಲಾ ಪ್ರವಾಸ ಮಾಡಿದ್ದ ಸಿದ್ದರಾಮಯ್ಯ, ನಾಗಮಂಗಲದಲ್ಲಿ ಭಾಷಣ ಮಾಡಿದ್ದರು. ಕಳೆದ ಬಾರಿ ಜೆಡಿಎಸ್ ಕ್ಯಾಂಡಿಡೇಟ್ಗೆ ಮತ ಹಾಕಿಸು ಎಂದು ಚಲುವರಾಯಸ್ವಾಮಿಗೆ ಹೇಳಿದ್ದೆ. ಆದರೆ ಜನ ಯಾಕೋ ಮಾತು ಕೇಳ್ತಿಲ್ಲ ಅಂದಿದ್ರು. ಈಗ ನನಗೆ ಅನ್ನಿಸ್ತಿದೆ ಆ ಯಮ್ಮನ್ನ (ಸುಮಲತಾ) ಗೆಲ್ಲಿಸಿ ತಪ್ಪು ಮಾಡಿದ್ವಿ ಅಂತ ಹೇಳುವ ಮೂಲಕ ಪರೋಕ್ಷವಾಗಿ ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಸಿದ್ದರಾಮಯ್ಯ(siddaramaiah) ವಾಗ್ದಾಳಿ ಮಾಡಿದ್ದಾರೆ.

ದೇವೇಗೌಡರನ್ನು ಸೋಲಿಸಲು ನಾನು ಕೆಲಸ ಮಾಡಿದೆ..!
ದೇವೇಗೌಡರು ಈಗಾಗಲೇ ಇಬ್ಬರ ಮೇಲೆ ಹೋಗ್ತಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ನಾಲ್ವರ ಮೇಲೆ ಹೋಗ್ತಾರೆ ಎನ್ನುವ ಮೂಲಕ ದೇವೇಗೌಡರ ಸಾವನ್ನು ಬಯಸಿದ್ದ ಕೆ.ಎನ್ ರಾಜಣ್ಣ, ಮಧುಗಿರಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈಗ ಚುನಾವಣೆ ಪ್ರಚಾರದ ಸಮಯದಲ್ಲಿ ಕೆ.ಎನ್ ರಾಜಣ್ಣ ಮಾತನಾಡಿ, ಕಳೆದ ಬಾರಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆಗಿದ್ದ ದೇವೇಗೌಡರನ್ನು ಸೋಲಿಸಲು ನಾನು ಕೆಲಸ ಮಾಡಿದ್ದೆ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು ಎಂದಿದ್ದರು. ಅಂದರೆ ಈಗ ಬಿಜೆಪಿ ಕಾರ್ಯಕರ್ತರು ನನ್ನನ್ನು ಬೆಂಬಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಇದು ಜೆಡಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ದೇವೇಗೌಡರನ್ನು ಸೋಲಿಸುವ ಹುನ್ನಾರ ಮಾಡಿದ ಕೆ.ಎನ್ ರಾಜಣ್ಣನನ್ನು ಸೋಲಿಸಲೇಬೇಕು ಅನ್ನೋ ಚರ್ಚೆಗಳು ಶುರುವಾಗಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಸಿದ್ದು ಮಾತೇ ಅಡ್ಡಿ..!
ಮಂಡ್ಯ ಜಿಲ್ಲೆಯಲ್ಲಿ ಕಳೆದ ಬಾರಿ ಏಳಕ್ಕೆ ಏಳೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್, ಈ ಬಾರಿ ಒಂದೆರಡು ಸ್ಥಾನಗಳನ್ನು ಕಾಂಗ್ರೆಸ್ಗೆ ಬಿಟ್ಟು ಕೊಡಬಹುದು ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಆದರೆ ನಾಗಮಂಗಲದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕಾಂಗ್ರೆಸ್ ಗೆಲ್ಲುವ ಸ್ಥಾನಗಳಿಗೂ ಕೊಕ್ಕೆ ಹಾಕುವ ಸಾಧ್ಯತೆಯಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಎನ್ ಚಲುವರಾಯಸ್ವಾಮಿ ಸುಮಲತಾ ಬೆಂಬಲಿಸಿ, ನಿಖಿಲ್ ಸೋಲಿಸಲು ಕಾರಣಕರ್ತ ಆಗಿದ್ದರು ಎನ್ನೋ ಮಾತಿಗೆ ಸಿದ್ದರಾಮಯ್ಯ ಸಾಕ್ಷ್ಯ ಕೊಟ್ಟಂತಾಗಿದೆ. ಇದೀಗ ಚಲುವರಾಯಸ್ವಾಮಿಯನ್ನು ಜೆಡಿಎಸ್ ಕಾರ್ಯಕರ್ತರು ಸೋಲಿಸಲು ಪಣತೊಟ್ಟಂತೆ ಕಾಣಿಸುತ್ತಿದೆ. ಚುನಾವಣೆ ಕೆಲವೇ ದಿನಗಳು ಬಾಕಿ ಇರುವ ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಕೊಟ್ಟ ಹೇಳಿಕೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆಲುವಿಗೆ ಸಹಕಾರಿ ಆದಂತಿದೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರದಲ್ಲಿ ಇದ್ದುಕೊಂಡು ಹೊಂದಾಣಿಕೆ ರಾಜಕಾರಣ(politics) ಮಾಡಿದ್ದ ಜೆಡಿಎಸ್ಗೆ(JDS) ಕಾಂಗ್ರೆಸ್ ದ್ರೋಹ ಮಾಡಿದ್ದನ್ನು ಹಳೇ ಮೈಸೂರು ಭಾಗ ಯಾವ ರೀತಿ ಸ್ವೀಕರಿಸುತ್ತದೆ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಬೇಕಿದೆ.















