• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಗರ್ಭಿಣಿ ಸ್ತ್ರೀಯರು ಚಳಿಗಾಲದ ಅಲರ್ಜಿಗಳಿಂದ ರಕ್ಷಿಸಿಕೊಳ್ಳಲು ಸಲಹೆಗಳು

Any Mind by Any Mind
May 15, 2021
in ಅಭಿಮತ
0
ಗರ್ಭಿಣಿ ಸ್ತ್ರೀಯರು ಚಳಿಗಾಲದ ಅಲರ್ಜಿಗಳಿಂದ ರಕ್ಷಿಸಿಕೊಳ್ಳಲು ಸಲಹೆಗಳು
Share on WhatsAppShare on FacebookShare on Telegram

ನೀವು ಗರ್ಭಾವಸ್ಥೆಯಲ್ಲಿದ್ದಾಗ ಮೂಗಿನಿಂದ ಸೋರುವುದು, ಮೂಗಿನಿಂದ ಉಸಿರಾಟ ಕಷ್ಟವಾಗಬಹುದು, ಕಣ್ಣು, ಮೂಗು, ಕಿವಿ ಹಾಗೂ ಗಂಟಲಿನಲ್ಲಿ ತುರಿಕೆ, ಸೀನು, ನೆಗಡಿ, ತಲೆನೋವು ಕಾಣಿಸುವುದು. ಗರ್ಭಾವಸ್ಥೆಯಲ್ಲಿರುವವರಿಗೆ ಕಿರಿಕಿರಿಯುಂಟು ಮಾಡಬಹುದು. ಧೂಳು, ಅಲರ್ಜಿ ಪ್ರಾಣಿಗಳ ಕೂದಲು, ಕೀಟಗಳು, ಕೆಲವು ವಿಧದ ಗಿಡಗಳು ಹಾಗೂ ಹೂವಿನ ಪರಾಗಗಳಿಂದಲೂ ಸಹ ಅಲರ್ಜಿಗಳು ಬರುತ್ತವೆ. ಅಲರ್ಜಿಯ ಸಮಸ್ಯೆ ಉಂಟಾದಾಗ ಶ್ವಾಸ ನಾಳಿಕೆಗಳ ಜೀರ್ಣ ಊತದಿಂದ ಶ್ವಾಸನಾಳವು ಬಿಗಿದುಕೊಳ್ಳುವುದು.

ADVERTISEMENT

ಇದರಿಂದ ಉಸಿರಾಡಲು ತೊಂದರೆಯಾಗುತ್ತದೆ. ಸೀನುತ್ತಿದ್ದರೆ, ಕಣ್ಣುಗಳಲ್ಲಿ ತುರಿಕೆಯಿದ್ದರೆ, ಋತುಮಾನದ ಚಳಿಗಾಲದ ಅಲರ್ಜಿಯು ಗರ್ಭಧಾರಣೆಯಿಂದ ಪ್ರೇರಿತವಾಗಿದೆ ಮತ್ತು ನಿಮ್ಮ ದೇಹವು ಹಾದುಹೋಗುತ್ತಿರುವ ಎಲ್ಲಾ ಬದಲಾವಣೆಗಳಿಂದ ನೀವು ಆಶ್ಚರ್ಯಚಕಿತರಾಗಬಹುದು. ನೀವು ಅಲರ್ಜಿಗಳ ಇತಿಹಾಸವನ್ನು ಹೊಂದಿದ್ದರೆ ಕೆಲವೊಮ್ಮೆ, ಸೀನುವಿಕೆ ಮತ್ತು ಗರ್ಭಾವಸ್ಥೆಗೆ ಸಂಬಂಧಿಸಿದಂತೆ ನಾಸಿಕ ದಟ್ಟಣೆಯಿಂದ ಉಂಟಾಗಬಹುದು. ಆದರೆ, ಇದು ಅಲರ್ಜಿಗಳಿಗಿಂತ ಭಿನ್ನವಾಗಿದೆ ಮತ್ತು ನೀವು ಇದರ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು.


ನೀವು ಗರ್ಭಿಣಿಯಾಗಿದ್ದಾಗ ಚಳಿಗಾಲದ ಅಲರ್ಜಿಗಳನ್ನು ಹೊಂದುವ ಸಾಧ್ಯವಿದೆ, ವಿಶೇಷವಾಗಿ ನೀವು ಅಂತಹ ಅಲರ್ಜಿಗಳ ಇತಿಹಾಸವನ್ನು ಹೊಂದಿದ್ದರೆ ಅಥವಾ ಮೊದಲ ಸಲ ಸಹ ನಿಮಗೆ ಅಲರ್ಜಿ ಯೂ ಬರಬಹುದು. ಅನೇಕ ಗರ್ಭಿಣಿಯರು ಅಲರ್ಜಿಯನ್ನು ಅನುಭವಿಸುತ್ತಾರೆ ಮತ್ತು ಎಲ್ಲರೂ ದೀರ್ಘಕಾಲೀನವಾಗಿ ನರಳ ಬೇಕಾಗಿಯೂ ಇರುವುದಿಲ್ಲ.
ಒಳ್ಳೆಯ ಸುದ್ದಿಯೆಂದರೆ ನಿಮಗೆ ಅಲರ್ಜಿಗಳು ಇದ್ದರೂ ಸಹ ನೀವು ಆರೋಗ್ಯಕರ ಮತ್ತು ಸುರಕ್ಷಿತ ಗರ್ಭಧಾರಣೆಯನ್ನು ಹೊಂದಬಹುದು. ನೀವು ಸ್ವತಃ ಅನಾರೋಗ್ಯಪೀಡಿತರಾಗಿದ್ದರೂ ಸಹ, ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಅನುಭವಿಸುತ್ತಿರುವ ರೋಗಲಕ್ಷಣಗಳ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ ಮತ್ತು ಯಾವುದೇ ಔಷಧೋಪಚಾರವನ್ನು ತೆಗೆದುಕೊಳ್ಳುವ ಮುನ್ನ ಅವರೊಂದಿಗೆ ಪರಿಶೀಲಿಸಿ.


ಅಲರ್ಜಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ಅವುಗಳನ್ನು ತಡೆಗಟ್ಟಲು ನೀವು ಏನು ಮಾಡಬಹುದು? ಚಳಿಗಾಲದಲ್ಲಿ ಅಲರ್ಜಿಯ ಪ್ರಚೋದಕಗಳಿಂದ ದೂರವಿರಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನಮಾಡಬೇಕು. ನೀವು ಗರ್ಭಿಣಿಯಾಗಿದ್ದಾಗ, ಅಲರ್ಜಿಯ ಲಕ್ಷಣಗಳನ್ನು ನಿವಾರಿಸಲು ಅಥವಾ ಸಂಪೂರ್ಣವಾಗಿ ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ:

ಆರೋಗ್ಯಕರ ಆಹಾರ ಸೇವಿಸಿ: ಸರಿಯಾದ ಪೌಷ್ಟಿಕಾಂಶದ ಮೌಲ್ಯವುಳ್ಳ ಸರಿಯಾದ ಆಹಾರವನ್ನು ಸೇವಿಸುವ ಮೂಲಕ ಗರ್ಭಿಣಿಯರು  ಆರೋಗ್ಯವಾಗಿ ಮತ್ತು ಸದೃಢವಾಗಿರಲು ಪ್ರಯತ್ನಿಸಬೇಕು. ಅಲರ್ಜಿ ಎಂದರೆ ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆಯಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಕಾಯಿಲೆ ಮತ್ತು ಅಲರ್ಜಿವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ನಿಮ್ಮ ಆಹಾರಗಳಲ್ಲಿ ಪೌಷ್ಟಿಕ ಆಹಾರ ಸೇವನೆಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತದೆ. 

ಧೂಮಪಾನ ಮಾಡುವವರಿಂದ ಅಂತರ ಕಾಯ್ದುಕೊಳ್ಳಿ: ಧೂಮಪಾನದಿಂದ ಅಲರ್ಜಿಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ತಾಯಿ ಮತ್ತು ಮಗು ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

ಅಲರ್ಜಿ ಇದ್ದರೆ ಪುಷ್ಪ/ಪರಾಗದಿಂದ ದೂರವಿಡಿ: ಹೂವುಗಳ ಪರಾಗ ಕಣಗಳು, ಧೂಳು, ಹೊಗೆ, ಗಾಳಿ ಚೆನ್ನಾಗಿ ಫಿಲ್ಟರ್ ಆದ ಜಾಗದಲ್ಲಿ ಒಳಗೆ ಇರಲು ಪ್ರಯತ್ನಿಸಿ. ಹೊರಗಡೆ ಹೋಗಬೇಕಾದರೆ ಸನ್ ಗ್ಲಾಸ್ ಉಪಯೋಗಿಸಿ. ಬಟ್ಟೆ ಬದಲಾಯಿಸಿ, ಶೂ ಗಳನ್ನು ತೆಗೆದು, ಒಳಗೆ ಬಂದಾಗ ಮುಖ ಮತ್ತು ಕೈಗಳನ್ನು ತೊಳೆಯಿರಿ. ಇದರಿಂದ ಪರಾಗವು ನಿಮ್ಮೊಂದಿಗೆ ಇರುವುದಿಲ್ಲ. ಹಲವಾರು ಅಲರ್ಜಿಗಳು ಬಹುತೇಕ ಗಾಳಿ ಮೂಲಕ ಉಂಟಾಗುತ್ತವೆ.ಅಂದರೆ ಧೂಳು ಮತ್ತು ಪರಾಗಸ್ಪರ್ಶ ಈ ಪ್ರಕರಣಗಳಲ್ಲಿ ಗಾಳಿ ಮೂಲಕ ಅಲರ್ಜಿಯಾಗಲು ಕಣ್ಣುಗಳು,ಮೂಗು ಮತ್ತು ಶ್ವಾಶಕೋಶಗಳು ಕಾರಣವಾಗುತ್ತವೆ.

ಧೂಳಿನಿಂದ ದೂರವಿರಿ: ಧೂಳಿನ ಅಲರ್ಜಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಧೂಳಿನಿಂದ ದೂರವಿರಿ. ಮ್ಯಾಟ್, ಹಾಸಿಗೆ ಮತ್ತು ಪೀಠೋಪಕರಣಗಳ ಮೇಲೆ ಧೂಳಿನ ಕ್ರಿಮಿಗಳು ಅಡಗಿರುತ್ತದೆ. ನಿಮ್ಮ ಮನೆ ಮತ್ತು ವಾಸದ ಕೋಣೆಗಳನ್ನು ಸ್ವಚ್ಛ ಮತ್ತು ಧೂಳಿನಿಂದ ಮುಕ್ತವಾಗಿಡಿ.ಧೂಳಿನಿಂದ ಅಲರ್ಜಿ ಯಾಗಿದ್ದರೆ, ಸ್ವತಃ ಸ್ವಚ್ಛಗೊಳಿಸುವುದನ್ನು ತಪ್ಪಿಸಿ, ಅದನ್ನು ಬೇರೊಬ್ಬರಿಗೆ ವಹಿಸುವುದು ಒಳ್ಳೆಯದು. ಕಸ ಗುಡಿಸುವ, ಒದ್ದೆ ಯಾದ ಮಾಪ್ ಅಥವಾ ಒಂದು HEPA ಫಿಲ್ಟರ್ ನೊಂದಿಗೆ ವಾಕ್ಯೂಂ ಕ್ಲೀನರ್ ಬಳಸುವ ಮೂಲಕ ಧೂಳನ್ನು ಕಲಕುವುದನ್ನು ತಪ್ಪಿಸಿ. ಸಾಂಪ್ರದಾಯಿಕ ಗರಿಯ ಡಸ್ಟರ್ ಗಳಿಗಿಂತ ಮೈಕ್ರೋಫೈಬರ್ ಬಟ್ಟೆಗಳು ಹೆಚ್ಚು ಆದ್ಯತೆ ಯನ್ನು ಹೊಂದಿದೆ. ನೀವು ಬೇಸ್ ಮೆಂಟ್ ಗಳು, ಅಟೆಕ್ಸ್ ಮತ್ತು ಇತರ ಸ್ಥಳಗಳಿಂದ ದೂರಉಳಿಯಲು ಪ್ರಯತ್ನಿಸಬೇಕು. ನೀವು ಹೊರಗಡೆ ಹೋಗುವಾಗ ಮೂಗಿಗೆ ಮಾಸ್ಕ್ ಅಥವಾ ಮೂಗನ್ನು ಬಟ್ಟೆಯಿಂದ ಮುಚ್ಚುವುದರಿಂದ ಧೂಳಿನ ಅಲರ್ಜಿಯಿಂದ ನಿಮ್ಮನ್ನು ದೂರವಿಡಬಹುದು.

ಸಾಕುಪ್ರಾಣಿಯ ಅಲರ್ಜಿಯನ್ನು ನಿಯಂತ್ರಿಸಿ: ನಿಮಗೆ ಸಾಕುಪ್ರಾಣಿಗಳ ಅಲರ್ಜಿಯಾಗಿದ್ದರೆ, ನಿಮ್ಮ ಸಾಕುಪ್ರಾಣಿಯ ಮಾಲಿಕರಿಗೆ ಈ ಬಗ್ಗೆ ಮೊದಲೇ ತಿಳಿದಿರಬೇಕು, ನಿಮ್ಮ ಸಾಕುಪ್ರಾಣಿಯು ಇತರ ಸಾಕುಪ್ರಾಣಿಗಳಂತೆ, ತುರಿಕೆ, ಕಚ್ಚುವಿಕೆ, ಮತ್ತು ಅನೇಕ ಕಾರಣಗಳಿಂದಾಗಿ ತಮ್ಮನ್ನು ಬಾಧಿಸುತ್ತದೆ. ಚರ್ಮದ ಪರಾವಲಂಬಿಗಳು, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಚರ್ಮದ ಸೋಂಕುಗಳು, ಸಂಪರ್ಕ ಕಿರಿಕಿರಿಗಳು ಮತ್ತು ಇನ್ಹಲೇಂಟ್ ಅಲರ್ಜಿಗಳು ಸೇರಿವೆ. ಆದ್ದರಿಂದ ಸಾಕುಪ್ರಾಣಿಯ ವ್ಯವಸ್ಥೆಗಳನ್ನು ಸೂಕ್ತವಾದ ನಿರ್ವಹಣೆ ಮಾಡಬಹುದು. ಸಾಕುಪ್ರಾಣಿಗಳು ನಿಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಚ್ಚುವರಿ ತೊಂದರೆಯನ್ನುಂಟು ಮಾಡುತ್ತದೆ. ಸಾಕುಪ್ರಾಣಿಯ ಸುತ್ತಲೂ ಇರುವಂತಹ ಕಲುಷಿತ ಗಾಳಿಯನ್ನು ನೀವು ಉಸಿರಾಡುವುದು ನಿಮ್ಮಲ್ಲಿ ಸೋಂಕನ್ನು ಉತ್ಪತ್ತಿ ಮಾಡುತ್ತದೆ. ಇದು ನಿಮ್ಮ ಗರ್ಭದಲ್ಲಿರುವ ಶಿಶುವಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಸಾಕುಪ್ರಾಣಿಗಳು ನಿಮ್ಮ ಹತ್ತಿರಕ್ಕೆ ಬರುವುದನ್ನು ನಿಲ್ಲಿಸಿ.

ಅಲರ್ಜಿ ಶಾಟ್ಸ್: ಅಲರ್ಜಿ ಶಾಟ್ ಎಂದೂ ಕರೆಯಲ್ಪಡುವ ದೀರ್ಘಕಾಲೀನ ಚಿಕಿತ್ಸೆಯ ಒಂದು ರೂಪವಾಗಿದ್ದು, ಕುಟುಕುವ ಕೀಟಗಳ ಅಲರ್ಜಿ ಹೊಂದಿರುವ ಅನೇಕ ಜನರಿಗೆ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಇವು ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿವೆ, ಆದರೆ ನೀವು ಗರ್ಭಧರಿಸುವ ಮೊದಲು ಶಾಟ್ ಗಳನ್ನು ಪಡೆಯುತ್ತಿದ್ದರೆ ಮಾತ್ರ. ನೀವು ಗರ್ಭಿಣಿಯಾಗಿದ್ದಾಗ ಅಲರ್ಜಿಯ ಪ್ರಾರಂಭಿಸುವುದು ಅತ್ಯುತ್ತಮ ಉಪಾಯವಲ್ಲ. ನಿಮ್ಮ ರೋಗ ನಿರೋಧಕ ವ್ಯವಸ್ಥೆಯು ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ ಮತ್ತು ಶಾಟ್ ಗಳು ಕೆಲವು ಬದಲಾವಣೆಗಳನ್ನು ಪ್ರಚೋದಿಸಬಹುದು, ಇದು ಅನಿರೀಕ್ಷಿತ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ.

ಆಹಾರ ಅಲರ್ಜಿಯನ್ನು ನಿಯಂತ್ರಿಸಿ: ನೀವು ಕಡಲೆಕಾಯಿ ಮತ್ತು ಕೆಲವು ಆಹಾರ ಪದಾರ್ಥಗಳು (ಹಾಲು, ಮೊಟ್ಟೆ, ಸೋಯಾ, ಮೀನು) ಡೈರಿ ಉತ್ಪನ್ನಗಳಂತಹ ಹೆಚ್ಚು ಅಲರ್ಜಿಕಾರಕ ಆಹಾರ ಗಳಿಂದ ಇದು ನಿಮ್ಮ ಮಗುವಿಗೆ ಅಲರ್ಜಿಯನ್ನು ಪ್ರಚೋದಿಸುತ್ತದೆ ಎಂಬ ಭಯದಿಂದ ಅವುಗಳನ್ನು ಬಿಟ್ಟುಹೋಗುವ ಅಗತ್ಯವಿಲ್ಲ. ನಿಮಗೆ ಆಹಾರ ಅಲರ್ಜಿ ಇದ್ದರೆ ನಿಮ್ಮ ಆಹಾರ ಕ್ರಮವನ್ನು ನಿರ್ಬಂಧಿಸುವ ಬಗ್ಗೆ ಶಿಫಾರಸುಗಳನ್ನು ಪಡೆಯಲು ನಿಮ್ಮ ಹೆಲ್ತ್ ಕೇರ್ ಪ್ರಾಕ್ಟಿಶಿಯರನ್ನು ಸಂಪರ್ಕಿಸಿ.

ಲೇಖಕರು

ಡಾ.ನಾಗರತ್ನ ಡಿ.ಎಸ್ . ಎಂಬಿಬಿಎಸ್, ಡಿ.ಜಿ.ಓ. 

ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ 

ಅಪೊಲೊ ಕ್ರೆಡಲ್ & ಮಕ್ಕಳ ಆಸ್ಪತ್ರೆ – 

ಕೋರಮಂಗಲ 

ಬೆಂಗಳೂರು  

Previous Post

ಚಾಮರಾಜನಗರ ಆಕ್ಸಿಜನ್‌ ದುರಂತ: ದಾಖಲಾತಿಗಳನ್ನು ತಿರುಚಲಾಗಿದೆಯೇ..?

Next Post

ಇಬ್ಬರು ರೋಗಿಗಳು ಮತ್ತು ಇರುವುದೊಂದೇ ಬೆಡ್: ವೈದ್ಯನ ಮುಂದೆ ನೈತಿಕ ಸವಾಲು ಒಡ್ಡುತ್ತಿರುವ ಕೋವಿಡ್

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಇಬ್ಬರು ರೋಗಿಗಳು ಮತ್ತು ಇರುವುದೊಂದೇ ಬೆಡ್: ವೈದ್ಯನ ಮುಂದೆ ನೈತಿಕ ಸವಾಲು ಒಡ್ಡುತ್ತಿರುವ ಕೋವಿಡ್

ಇಬ್ಬರು ರೋಗಿಗಳು ಮತ್ತು ಇರುವುದೊಂದೇ ಬೆಡ್: ವೈದ್ಯನ ಮುಂದೆ ನೈತಿಕ ಸವಾಲು ಒಡ್ಡುತ್ತಿರುವ ಕೋವಿಡ್

Please login to join discussion

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada