ಕೆ.ಆರ್.ಪೇಟೆ: ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಹಾರುವ ಬೂದಿಯಿಂದ ಆ ವ್ಯಾಪ್ತಿಯ ರೈತರ ತೋಟದ ಫಸಲುಗಳು ಹಾಳಾಗುತ್ತಿದ್ದಾವೆ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಕಾರ್ಖಾನೆಯ ಸುತ್ತಮುತ್ತಲಿನ ರೈತರು ತರಾಟೆಗೆ ತೆಗೆದುಕೊಂಡು
ತಾಲೂಕು ರೈತಸಂಘದ ನೇತೃತ್ವದಲ್ಲಿ ನೂರಾರು ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಾರ್ಯವೈಖಾರಿ ಖಂಡಿಸಿ.ಪಟ್ಟಣದಲ್ಲಿರುವ ತಾಲೂಕು ಪಂಚಾಯತಿ ಕಾರ್ಯಾಲಕ್ಕೆ ರೈತ ಚಳುವಳಿಯ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಸ್ಥಳಕ್ಕೆ ಆಗಮಿಸಿ ಚಳುವಳಿಗೆ ಆಗಮಿಸಿದ ನೂರಾರು ರೈತರ ಮನವೊಲಿಸಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ರೈತರೊಂದಿಗೆ ಆರೋಗ್ಯಕರ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ಮಾತನಾಡಿದ ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ ರೈತರ ಜೀವನಾಡಿ ಹೇಮಾವತಿ ನದಿ ಸಮೀಪವಿರುವ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯಿಂದ ಬರುವ ಹಾರುವ ವಿಷಕಾರಿ ಬೂದಿಯಿಂದ ಕಾರ್ಖಾನೆ ವ್ಯಾಪ್ತಿಗೆ ಬರುವ ಮಾಕವಳ್ಳಿ, ಕರೋಟಿ,ವಡ್ಡರಹಳ್ಳಿ ಹೆಗ್ಗಡಹಳ್ಳಿ, ಕರಿಗನಹಳ್ಳಿ, ಮಾಣಿಕನಹಳ್ಳಿ,ಲಿಂಗಾಪುರ,ರಾಮನಹಳ್ಳಿ, ಬಿಚೇನಹಳ್ಳಿ,ಕುಂದನಹಳ್ಳಿ, ಗ್ರಾಮಗಳ ರೈತರ ತೋಟದ ಫಸಲಗಳು ಮೇಲೆ ಭಾರಿ ಪರಿಣಾಮ ಬೀರುತ್ತಿವೆ ಹಾಗೂ ಹಾರುವ ಬೂದಿಯಿಂದ ಈ ಭಾಗದ ಜನರ ಆರೋಗ್ಯದ ಮೇಲೂ ಸಮಸ್ಯೆ ಎದುರಾಗುತ್ತಿದೆ ಎಂದು ಹತ್ತು ವರ್ಷಗಳಿಂದ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸೂಕ್ತ ವರದಿಯೊಂದಿಗೆ ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಹಲವು ಬಾರಿ ಮನವಿ ಮಾಡಿದರು ಬಡವರ ಕೋಪ ದವಡೆಗೆ ಮೂಲ ಎಂಬ ಗಾದೆಯ ಅನುಸಾರವಾಗಿ ತಾಲೂಕು ತೋಟಗಾರಿಕಾ ಇಲಾಖೆ ಕಾರ್ಖಾನೆಯ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ನಿರಂತರವಾಗಿ ಕಿಡಿಕಾರಿ.ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಮತ್ತು ನಮಗೆ ನ್ಯಾಯ ದೊರಕಿಸಿಕೊಡಿ ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ರೂಪಶ್ರೀರವರಿಗೆ ಕಾರ್ಖಾನೆ ವ್ಯಾಪ್ತಿಯ ರೈತರು ಪಟ್ಟು ಹಿಡಿದರು.
ಬಳಿಕ ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ ಪರಿಸರ ಮತ್ತು ಕಾರ್ಖಾನೆ ವ್ಯಾಪ್ತಿಯ ರೈತರ ಉಳಿವಿಗಾಗಿ ನಾನು ಕೂಡ ಕಾರ್ಖಾನೆಯ ಸ್ಥಳೀಯ ಸಮಿತಿಯ ಸದಸ್ಯನಾಗಿದ್ದೇನೆ ನಿಮ್ಮ ಸ್ಥಳೀಯ ಇಲಾಖೆ ಅಧಿಕಾರಿಗಳು ಸಮಿತಿಯ ಎಷ್ಟು ಬಾರಿ ಸಭೆಗೆ ಹಾಜರಾಗಿದ್ದಾರೆ ನಿಮ್ಮ ಎದುರೇ ನೀವೇ ಕೇಳಬೇಕು..?ತಾಲೂಕಿನ ತೋಟಗಾರಿಕೆ ಇಲಾಖೆ ಸಾರ್ವಜನಿಕ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೋ ಅಥವಾ ಉದ್ಯಮಿಗಳ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೋ ಎಂದು ಸಾಮಾನ್ಯ ಜನರಲ್ಲಿ ಆತಂಕ ಮೂಡಿದೆ ಎಂದು ಆರೋಪಿಸಿ ಸರ್ಕಾರ ನೀಡುವ ಸಂಬಳಕಾದರೂ ಸ್ವಾಭಿಮಾನದಿಂದ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಕಾರ್ಯನಿರ್ವಹಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲು ಸಿದ್ದರಿದ್ದೇವೆ ಎಂದು ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.
ಸಮಸ್ಯೆ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ರೂಪಶ್ರೀ ಒಂದು ಕಾರ್ಖಾನೆಗಳಿದ್ದಲ್ಲಿ ಆ ಭಾಗದ ರೈತರ ಸಮಸ್ಯೆ ನನಗೂ ಹರಿವು ಇದೆ. ನಾನು ರೈತನ ಮಗಳು ಅಂತಹ ರೈತ ಸಂಕುಲದ ಆರೋಗ್ಯಕ್ಕೆ ಮತ್ತು ಪರಿಸರದ ಮೇಲೆ ಹಾನಿ ಉಂಟುಮಾಡುವ ಕಾರ್ಖಾನೆಯಾದರೆ ಅವರ ಮೇಲೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುತ್ತೇನೆ ಹಾಗೂ ಕಾರ್ಖಾನೆಯಿಂದ ಬರುವ ಹಾರುವ ಬೂದಿಯ ಬಗ್ಗೆ ನನಗೆ ಮತ್ತು ತಾಲೂಕು ರೈತರಿಗೆ ಶೀಘ್ರವೇ ವರದಿ ನೀಡುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಲೋಕೇಶ್ ರವರಿಗೆ ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸತೀಶ್, ತಾ.ಪಂ ಅಭಿವೃದ್ದಿ ಅಧಿಕಾರಿ ನರಸಿಂಹರಾಜು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್, ಹಿರಿಯ ರೈತ ಮುಖಂಡರಾದ ಮಂದಗೆರೆ ಜಯರಾಮ್.ಜಗದೀಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಸಂಘದ ತಾಲೂಕು ಕಾರ್ಯದರ್ಶಿ ಬೂಕನಕೆರೆ ನಾಗರಾಜು,ಮಾಕವಳ್ಳಿ ರವಿ, ಕರೋಟಿ ತಮ್ಮಯ್ಯ,ಹೊನ್ನೇಗೌಡ,ಪಿ.ಬಿ ಮಂಚನಹಳ್ಳಿ ನಾಗೇಗೌಡ, ನಗರೂರು ಕುಮಾರ್, ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ, ಕಾರಿನಗಹಳ್ಳಿ ಮಂಜುನಾಥ್ ಸೇರಿದಂತೆ ರೈತರಿದ್ದರು.