• Home
  • About Us
  • ಕರ್ನಾಟಕ
Tuesday, July 8, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇತರೆ / Others

ಡಿಕೆಶಿ ಆಯ್ಕೆ ಮಾಡಿದ್ದ ಸುಧಾಮ್​ ದಾಸ್​ಗೆ ಕಾಂಗ್ರೆಸ್​ನಲ್ಲೇ ವಿರೋಧ..

ಕೃಷ್ಣ ಮಣಿ by ಕೃಷ್ಣ ಮಣಿ
August 19, 2023
in ಇತರೆ / Others, ಇದೀಗ, ಕರ್ನಾಟಕ, ರಾಜಕೀಯ
0
ಕರ್ನಾಟಕ ಚುನಾವಣಾ ಫಲಿತಾಂಶದಿಂದ ಕುಸಿದ ‘ಬ್ರಾಂಡ್ ಮೋದಿ’ ಮೌಲ್ಯ
Share on WhatsAppShare on FacebookShare on Telegram

ಕಾಂಗ್ರೆಸ್​ನಲ್ಲಿ ಮೂವರು ನಾಯಕರನ್ನು ಪರಿಷತ್​ಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಾಯಕ ಎಂ.ಆರ್​ ಸೀತಾರಾಂ ಹಾಗು ಸುಧಾಮ್​ ದಾಸ್​ ಎಂಬುವರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡುವಂತೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಉಮಾಶ್ರೀ ಹಾಗು ಎಂ.ಆರ್​ ಸೀತಾರಾಂ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿದ್ದು, ಸುಧಾಮ್​ ದಾಸ್​ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಅವರ ಆಯ್ಕೆ ಎನ್ನುವ ಗುಸುಗುಸು ಕಾಂಗ್ರೆಸ್​ನಲ್ಲೇ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಸುಧಾಮ್​ ದಾಸ್​ ಆಯ್ಕೆಯನ್ನು ವಿರೋಧಿಸಿ ನಾಲ್ವರು ಪ್ರಮುಖ ದಲಿತ ನಾಯಕರು AICC​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ.

ADVERTISEMENT
ಡಿ.ಕೆ ಶಿವಕುಮಾರ್‌

ಕಾಂಗ್ರೆಸ್​ನಲ್ಲಿ ನಿಲ್ಲದ ಅಸಮಾಧಾನಿಗಳ ಪತ್ರ ಸಮರ..!

ಕಾಂಗ್ರೆಸ್​ ಸರ್ಕಾರ ರಚನೆಯಾದ ಬಳಿಕ ಕೆಲವು ದಿನಗಳ ಹಿಂದಷ್ಟೇ ಶಾಸಕರು ಬಿ.ಆರ್​ ಪಾಟೀಲ್​ ನೇತೃತ್ವದಲ್ಲಿ ಪತ್ರ ಬರೆದಿದ್ದರು. ಸಚಿವರು ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರು. ಮೊದಲಿಗೆ ಪತ್ರ ಬರೆದಿದ್ದು ನಾವೇ, ಸಹಿ ಹಾಕಿದ್ದೇನೆ ಎಂದಿದ್ದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ಆ ಬಳಿಕ ನಕಲಿ ಪತ್ರ ಎಂದು ತೇಪೆ ಸಾರಿಸಿಕೊಂಡಿದ್ದರು. ಇದೀಗ ನಾಲ್ವರು ಪ್ರಮುಖ ಸಚಿವರು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೇರವಾಗಿ ಅಸಮಾಧಾನದ ಪತ್ರ ಬರೆದಿದ್ದಾರೆ. ಮಾಧ್ಯಮಗಳ ಎದುರಲ್ಲೂ ಪತ್ರ ಬರೆದಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಸುಧಾಮ್​ ದಾಸ್​ ನೇಮಕಕ್ಕೆ ಭಾರೀ ವಿರೋಧ ಮಾಡಿದ್ದಾರೆ. ಕೇವಲ ಮೂರು ತಿಂಗಳ ಹಿಂದಷ್ಟೇ ಪಕ್ಷಕ್ಕೆ ಬಂದವರಿಗೆ ಅಧಿಕಾರ ಕೊಟ್ಟಿದ್ದು ಹೇಗೆ..? ಎಂದು ಪ್ರಶ್ನೆ ಮಾಡಿದ್ದಾರೆ..

ಮಣಿಪುರ

ಸುಧಾಮ್​ ದಾಸ್​ ಆಯ್ಕೆಗೆ ಸಚಿವರ ವಿರೋಧ ಯಾಕೆ..?

ವಿಧಾನ ಪರಿಷತ್​​ಗೆ ಸುಧಾಮ ದಾಸ್​​ ಆಯ್ಕೆ ಮಾಡಿದ್ದನ್ನ ವಿರೋಧಿಸಿ ನಾಲ್ವರು ದಲಿತ ಸಮುದಾಯದ ಸಚಿವರು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ವಕ್ತಾರ ಸಂಕೇತ್​ ಏಣಗಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಹಿರಿಯ ರಾಜಕಾರಣಿಗಳು ಹಾಗೂ ಅವರ ಪಾರಿವಾರದವರಿಗೆ ಮಾತ್ರ ಮಣೆ ಹಾಕದೆ, ಇನ್ನಾದರೂ ಸಮರ್ಥ, ಸುಶಿಕ್ಷಿತ, ಪಕ್ಷನಿಷ್ಠ, ನ್ಯಾಯಪರತೆ ಇರುವ ಯುವ ರಾಜಕಾರಣಿಗಳಿಗೆ ಪಕ್ಷ ವಿಶೇಷ ಅವಕಾಶ ನೀಡಬೇಕು ಎಂದು ಆಗ್ರಹ ಮಾಡಿದ್ದರು. ಹೀಗೆಯೇ ಮುಂದುವರಿದರೆ ಪಕ್ಷ ಮುಂದೊಮ್ಮೆ ಯುವ ರಾಜಕಾರಣಿಗಳು ಇಲ್ಲದೆ ಸೊರಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದೀಗ ಸುಧಾಮ್​ ದಾಸ್​ ಆಯ್ಕೆ ವಿರೋಧಿಸಿ ಗೃಹಸಚಿವರಾದ ಡಾ.ಜಿ.ಪರಮೇಶ್ವರ್, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹಾಗು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪತ್ರ ಬರೆದಿದ್ದಾರೆ. ಮೂರು ತಿಂಗಳ ಹಿಂದೆ ಪಕ್ಷ ಸೇರಿದವರನ್ನು ಆಯ್ಕೆ ಮಾಡದೆ 30 ವರ್ಷದಿಂದ ಪಕ್ಷದಲ್ಲಿ ದುಡಿಯುತ್ತಿರುವ ಜನರನ್ನು ಆಯ್ಕೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.

ಸುಧಾಮ್​ದಾಸ್​ ಯಾರು ಡಿ.ಕೆ ಬ್ರದರ್ಸ್​ ಬೆಂಬಲ ಯಾಕೆ..?

ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿ ಆಗಿದ್ದ ಸುಧಾಮ್ ದಾಸ್, ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಸ್ವಯಂ ರಾಜೀನಾಮೆ ನೀಡಿದ್ದರು. ಆ ಬಳಿಕ ಮಾಹಿತಿ ಹಕ್ಕು ಆಯುಕ್ತರಾಗಿದ್ದರು. ಮಾರ್ಚ್ 2023ರಲ್ಲಿ ಮಾಹಿತಿ ಆಯುಕ್ತರ ಹುದ್ದೆಗೂ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗಿದ್ದರು. ಪಕ್ಷಕ್ಕೆ ಸೇರಿ ಯಾವುದೇ ಸಂಘಟನೆ ಕೆಲಸ ಮಾಡದೆ ಇದ್ದರೂ ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಿದ್ದು ಯಾಕೆ ಎನ್ನುವುದು ಸಾಮಾನ್ಯ ಕಾರ್ಯಕರ್ತರು ಹಾಗು ನಾಯಕರ ಪ್ರಶ್ನೆಯಾಗಿದೆ. ಪಕ್ಷಕ್ಕಾಗಿ ದುಡಿದ ಸಾಕಷ್ಟು ಹಿರಿಯ ನಾಯಕರು ಇದ್ದಾರೆ. ಅವರನ್ನ ಪರಿಗಣಿಸದೆ ಪರಿಷತ್​ಗೆ ನಾಮರ್ನಿರ್ದೇಶನ‌ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ರಾಜ್ಯ ಅಥವಾ ರಾಷ್ಟ್ರ ನಾಯಕರು ಈ ಬಗ್ಗೆ ನಮ್ಮ ಬಳಿ ಚರ್ಚೆ ನಡೆಸಿಲ್ಲ ಎನ್ನುವುದು ನಾಯಕರ ಆರೋಪ. ಆದರೆ ಡಿ.ಕೆ ಸುರೇಶ್​ ಮಾತ್ರ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಕೆಲವೊಮ್ಮ ಹೀಗಾಗುತ್ತದೆ. ನನ್ನ ಹೆಸರಿಗೂ ಕೆಲವೊಮ್ಮೆ ವಿರೋಧ ಬರುತ್ತದೆ. ಏನು ಮಾಡಲು ಸಾಧ್ಯವಿಲ್ಲ ಎಂದು ನುಣುಚಿಕೊಂಡಿದ್ದಾರೆ.

ಕೃಷ್ಣಮಣಿ

Tags: CMSiddaramaiahDKShivakumarKarnatakaMLC
Previous Post

‘ಸಿಕಾಡಾ’ ಪ್ಯಾನ್‌ ಇಂಡಿಯಾ ಸಿನಿಮಾ ಫಸ್ಟ್‌ಲುಕ್‌ ಬಿಡುಗಡೆ

Next Post

ಅಧಿಕೃತ ಭಾಷೆಗಳಿಗೆ ಲಭ್ಯ ಎಐ ಆಧರಿತ ‘ಭಾಷಿಣಿʼ: ನರೇಂದ್ರ ಮೋದಿ

Related Posts

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ
ದೇಶ

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ

by ನಾ ದಿವಾಕರ
July 8, 2025
0

----ನಾ ದಿವಾಕರ---- ಪ್ರಜಾತಂತ್ರದ ಚೌಕಟ್ಟಿನ ಒಳಗೇ ಆಳ್ವಿಕೆಯನ್ನು ಬಿಗಿಗೊಳಿಸುವ ಒಂದು ಆಡಳಿತದ Template (ತುರ್ತುಪರಿಸ್ಥಿತಿ – ಕಲಿತಿರುವುದೇನು ಕಲಿಯಬೇಕಾದ್ದು ಏನು ? ಮಂದುವರೆದ ಭಾಗ) ವಿಶ್ವದ ಯಾವುದೇ...

Read moreDetails

Priyanka Kharge: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

July 7, 2025

Dinesh Gundu Rao: ಹೃದಾಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

July 7, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

July 7, 2025
ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ

ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ

July 7, 2025
Next Post
ಭಾಷಿಣಿ

ಅಧಿಕೃತ ಭಾಷೆಗಳಿಗೆ ಲಭ್ಯ ಎಐ ಆಧರಿತ 'ಭಾಷಿಣಿʼ: ನರೇಂದ್ರ ಮೋದಿ

Please login to join discussion

Recent News

Top Story

Priyanka Kharge: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

by ಪ್ರತಿಧ್ವನಿ
July 7, 2025
Top Story

Dinesh Gundu Rao: ಹೃದಾಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
July 7, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 
Top Story

ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

by Chetan
July 7, 2025
ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ
Top Story

ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ

by ಪ್ರತಿಧ್ವನಿ
July 7, 2025
Priyanka Kharge: ಪ್ರತಾಪ್ ಸಿಂಹ ಔಟ್ ಡೇಟೆಡ್ ರಾಜಕಾರಣಿ – ನನ್ನ ಬಗ್ಗೆ ಮಾತಾಡಿದ್ರೆ ಮಾರ್ಕೆಟ್ ಕುದುರಲ್ಲ ..! : ಸಿಂಹಗೆ ಖರ್ಗೆ ಕ್ಲಾಸ್
Top Story

Priyanka Kharge: ಪ್ರತಾಪ್ ಸಿಂಹ ಔಟ್ ಡೇಟೆಡ್ ರಾಜಕಾರಣಿ – ನನ್ನ ಬಗ್ಗೆ ಮಾತಾಡಿದ್ರೆ ಮಾರ್ಕೆಟ್ ಕುದುರಲ್ಲ ..! : ಸಿಂಹಗೆ ಖರ್ಗೆ ಕ್ಲಾಸ್

by Chetan
July 7, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ

July 8, 2025

Priyanka Kharge: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

July 7, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!