ಪ್ರಯಾಗರಾಜ್ ನಲ್ಲಿ (Prayagaraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು (ಜ.21) ಇನ್ಫೋಸಿಸ್ (Infosys) ಫೌಂಡೇಷನ್ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ (Sudha murthy) ಆಗಮಿಸಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಪ್ರಯಾಗರಾಜ್ ನಲ್ಲಿ ಸುಧಾಮೂರ್ತಿ ವಾಸ್ತ್ಯವ ಹೂಡಲಿದ್ದಾರೆ.
ಈ ವೇಳೆ ಮಾತಮಾಡಿರುವ ಸುಧಾ ಮೂರ್ತಿ , ಮಹಾಕುಂಭಮೇಳದಲ್ಲಿ (Maha kumbhamela) ಭಾಗವಹಿಸಲು ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.ಇದು ತೀರ್ಥರಾಜ ಕ್ಷೇತ್ರ, ಮಹಾಕುಂಭಮೇಳ 144 ವರ್ಷಗಳಿಗೊಮ್ಮೆ ಬರುತ್ತೆ, ಹೀಗಾಗಿ ಮಹಾಕುಂಭಮೇಳದಲ್ಲಿ ಭಾಗಿಯಾಗಲು ಉತ್ಸುಕಳಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿ (Narayana moorthy), ಸುಧಾ ಮೂರ್ತಿ, ಪುತ್ರಿ ಸೇರಿದಂತೆ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ (Rishi sunak) ಬೆಂಗಳೂರಿನ ಜಯನಗರದ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು.