ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ನಡೆಯುತ್ತಿದ್ದ ಇತಿಹಾಸ ಪ್ರಸಿದ್ದ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿಯ ಷಷ್ಠಿ ಮಹೋತ್ಸವವನ್ನ ಈ ವರ್ಷ ರದ್ದು ಮಾಡಲಾಗಿದೆ.
ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರೆಯೂ ದೇವಾಲಯದ ಪುನರ್ ನಿರ್ಮಾಣ ಕಾರ್ಯಹಿನ್ನೆಲೆ ರದ್ದು ಮಾಡಲಾಗಿದೆ.
ಸಂಪ್ರದಾಯದಂತೆ ನವೆಂಬರ್ 29ರಂದು ದೇಗುಲದ ಒಳಗೆ ಮಾತ್ರ ಆಚರಣೆ ಮಾಡಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಯಾವುದೇ ಪ್ರವೇಶ ಇರುವುದಿಲ್ಲ ಎಂದು ಹೇಳಲಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಷಷ್ಠಿ ಆಚರಿಸಿರಲಿಲ್ಲ ಈ ವರ್ಷ ರಸ್ತೆ ಅಗಲೀಕರಣ ಮತ್ತು ದೇವಸ್ಥಾನ ಪುನರ್ ನಿರ್ಮಾಣ ಹಿನ್ನೆಲೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.













