ನಾಯಕ ಕೇನ್ ವಿಲಿಯಮ್‌ಸನ್, ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಡೆರಿಲ್ ಮಿಚ್ಚೆಲ್ ದ್ವಿಶತಕದ ಜೊತೆಯಾಟದ ಫಲವಾಗಿ ನ್ಯೂಜಿಲೆಂಡ್ ತಂಡವು ಭಾರತ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ.
ಈಡೆನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಾಯಕ ಶಿಖರ್ ಧವನ್(72 ರನ್, 77 ಎಸೆತ, 13 ಬೌಂಡರಿ), ಶುಭಮಾನ್ ಗಿಲ್ (50 ರನ್, 65 ಎಸೆತ, 1 ಬೌಂಡರಿ, 3 ಸಿಕ್ಸರ್), ಶ್ರೇಯಸ್ ಐಯ್ಯರ್(80 ರನ್, 76 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಪೇರಿಸಿತ್ತು.
ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಡೆರಿಲ್ ಮಿಚ್ಚೆಲ್(145 ರನ್, 104 ಎಸೆತ, 19 ಬೌಂಡರಿ, 5 ಸಿಕ್ಸರ್) ಹಾಗೂ ನಾಯಕ ಕೇನ್ ವಿಲಿಯಮ್‌ಸನ್ (94 ಎಸೆತ, 98 ಎಸೆತ, 7 ಬೌಂಡರಿ, 1 ಸಿಕ್ಸರ್) ಫಲವಾಗಿ 47.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 309 ರನ್ ಪೇರಿಸಿ ಗೆಲುವಿನ ದಡ ಸೇರಿತ್ತು.
Tom Latham and Kane Williamson master a memorable chase against India ⭐
— ICC (@ICC) November 25, 2022
Watch the #NZvIND ODI series LIVE on https://t.co/CPDKNxoJ9v (in select regions) 📺
📝 Scorecard: https://t.co/eVO5qCY6fe pic.twitter.com/GBEpDunT9C