ಇತ್ತೀಚಿಗೆ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಉತ್ತರಪ್ರದೇಶದಿಂದ ರಾಜ್ಯಸಭೆ ಸ್ಪರ್ಧಿಸಿರುವ ಹಿರಿಯ ಕಾಂಗ್ರೆಸ್ಸಿಗ ಜಿ-23 ಅವಿಭಾಜ್ಯ ಅಂಗ ಎಂದೇ ಕರೆಲ್ಪಡುವ ಕಪಿಲ್ ಸಿಬಲ್ರನ್ನು ಬಿಜೆಪಿ ಫೈರ್ ಬ್ರಾಂಡ್ ಎಂದೇ ಕರೆಲ್ಪಡುವ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹಾಡಿ ಹೊಗಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸ್ವಾಮಿ ಕಪಿಲ್ ಕಾಂಗ್ರೆಸ್ ತೊರೆದ ವಿಚಾರ ನನ್ನಗೆ ತುಂಬಾ ಸಂತೋಷವಾಗಿದೆ. ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದು ದೊಡ್ಡ ವಿಷಯವೇನಲ್ಲ ಅವರಿಂದ ನನ್ನ ಆತ್ಮೀಯ ಸ್ನೇಹಿತರಾದ ಮುಲಾಯಂ ಹಾಗು ರಾಮಗೋಪಾಲ್ಗೆ ಸಹಾಯವಾಗಲಿದೆ ಇಬ್ಬರು ಅತ್ಯುತ್ತಮ ಹಾಗು ನೈಜ ಮುಖಂಡರು ಎಂದು ಶ್ಲಾಘಿಸಿದ್ದಾರೆ.
ರಾಷ್ಟ್ರದ ಹೆಸರಾಂತ ವಕೀಲರ ಪೈಕಿ ಕಪಿಲ್ ಕೂಡ ಒಬ್ಬರು ಅವರ ಕೋರ್ಟ್ ನೈಪುಣ್ಯತೆ ಒಂದು ಅದ್ಭುತ. ದೇಶದ ಹಲವಾರು ಪ್ರತಿಷ್ಠಿತ ಪ್ರಕರಣಗಳನ್ನು ಸಿಬಲ್ ಪ್ರತಿನಿಧಿಸಿದ್ದಾರೆ.
ಈ ನಡುವೆ ರಾಜಕೀಯ ಪಡಸಾಲೆಯಲ್ಲಿ ಸಿಬಲ್ ಕಾಂಗ್ರೆಸ್ ತೊರೆದಿದ್ದು ದೊಡ್ಡ ಹೊಡೆತವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.