
ಮುಡಾ ಕೇಸಲ್ಲಿ ಸಿಎಂಗೆ ಕ್ಲೀನ್ ಚಿಟ್ ಸಿಕ್ಕಿದೆ. ಇಂದು ಮೈಸೂರು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಸುಮಾರು 11 ಸಾವಿರ ಪುಟಗಳ ವರದಿಯನ್ನ ಸಲ್ಲಿಕೆ ಮಾಡಿದ್ದು, ಒಟ್ಟು 4 ಬ್ಯಾಗ್‌ನಲ್ಲಿ ತಂದಿದ್ದ ವರದಿಯನ್ನ ಎಸ್‌ಪಿ ಉದೇಶ್ ನೇತೃತ್ವದಲ್ಲಿ ಜನಪ್ರತಿನಿಧಿಗಳ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಪೀಠದಲ್ಲಿ ಸಲ್ಲಿಕೆ ಮಾಡಲಾಗಿದೆ. 27 ಸಂಪುಟವುಳ್ಳ ಅಂತಿಮ ವರದಿ ಸಲ್ಲಿಕೆ ಮಾಡಿದ್ದು, ಎರಡು ದೊಡ್ಡ ಬ್ಯಾಗ್, ಎರಡು ಚಿಕ್ಕ ಬ್ಯಾಗ್ ಗಳಲ್ಲಿ ವರದಿ ತಂದು ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ವರದಿಯಲ್ಲಿ 50 ಕ್ಕು ಹೆಚ್ಚು ಮಂದಿ ಹೇಳಿಕೆ ದಾಖಲಿಸಿರುವ ಲೋಕಾಯುಕ್ತ ಪೊಲೀಸರು. ನಾಲ್ವರನ್ನ ಹೊರತುಪಡಿಸಿ ಮುಡಾ ಹಗರಣ ಸಂಬಂಧ ತನಿಖೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಮುಡಾ ಕೇಸ್‌ನಲ್ಲಿ ಸಿಎಂಗೆ ಕ್ಲೀನ್‌ಚಿಟ್ ನೀಡಿರುವ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಆರಂಭದಲ್ಲೇ ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಕೇಸ್ ಅಂತ. ಸಿಎಂ ಇಂತಹದ್ದೇ ಜಾಗ ಕೊಡಿ ಅಂತ ಕೇಳಿಲ್ಲ. ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಮಾಡಿದೆ. ಲೋಕಾಯುಕ್ತರ ಮೇಲೆ ಯಾರು ಪ್ರಭಾವ ಬೀರಿಲ್ಲ ಎಂದಿದ್ದಾರೆ. ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮಾಡಿದಾಗಲೇ ನಾನು ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಅಂತ. ಸಿಎಂ ಬಗ್ಗೆ ದೂರಿದ್ರು. ಅವರಿಗೆ ಸಂಬಂಧ ಇರದೇ ಇದ್ದಿದ್ದರೂ, ಅವರದ್ದು ಎಂದು ಅವರು ಕ್ಲೇಮ್ ಮಾಡಿದ್ದರು. ಇಂತಹದ್ದೇ ಜಾಗ ಕೊಡಿ ಎಂದು ಕೇಳಿಲ್ಲ. ಈ ಕೇಸ್‌ನಲ್ಲಿ ಯಾವುದೇ ಎವಿಡೆನ್ಸ್ ಇಲ್ಲ. ಲೋಕಾಯುಕ್ತ ಅವರು ತನಿಖೆ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ ನಡೆ ಅಂತಾ ಈಗಾಗಲೇ ಹೈಕೋರ್ಟ್ ಕೂಡ ಹೇಳಿದೆ. ಲೋಕಾಯುಕ್ತ ಇಂಡಿಪೆಂಡಂಟ್ ಬಾಡಿ ಎಂದು ಹೈಕೋರ್ಟ್ ಹೇಳಿದೆ ಎಂದಿದ್ದಾರೆ.
ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಯಾವುದೇ ದಾಖಲೆಗಳು ಇಲ್ಲ, ಅದಕ್ಕೆ ಲೋಕಾಯುಕ್ತ ಕ್ಲೀನ್ ಚೀಟ್ ಕೊಟ್ಟಿದೆ. ಸಿಎಂ ಮೇಲೆ ಯಾವ ಕಳಂಕವೂ ಇಲ್ಲ ಎಂದಿದ್ದಾರೆ. ಇದು ನಮಗೆ ಗೊತ್ತಿರುವ ಸತ್ಯ, ತಪ್ಪು ಏನು ಆಗಿಲ್ಲ, ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇದ್ದಾಗ ಮಾಡಿಸಿಲ್ಲ. ಮುಖ್ಯಮಂತ್ರಿಗಳಿಂದ ಯಾವುದೇ ಪತ್ರ ಹೋಗಿಲ್ಲ. ಅವರು ಏನು ಶಿಫಾರಸು ಮಾಡಿಲ್ಲ. ಹಲವಾರು ಜನಕ್ಕೆ ಕೊಟ್ಟಿದ್ದಾರೆ ಅದರಂತೆ ಇವರಿಗೂ ಕೊಟ್ಟಿದ್ದಾರೆ. ಬೇರೆಯವರಿಗೆ ಕೊಟ್ಟು ಇವರಿಗೆ ಕೊಟ್ಟಿಲ್ಲ ಅಂದ್ರೆ ತಪ್ಪಾಗುತ್ತೆ ಅಂತ ಹೇಳಿ ಇವರಿಗೂ ಕೊಟ್ಟಿದ್ದಾರೆ. ಆ ಕಾರಣಕ್ಕೆ ಸೈಟು ಕೊಟ್ಟಿದ್ದಾರೆ.

ಅಷ್ಟಕ್ಕೂ ಈ ತಪ್ಪು ಆಗಿರೋದು ಬಿಜೆಪಿ ಸರ್ಕಾರದಲ್ಲಿ. ಬಿಜೆಪಿಯ ನಾಮ ನಿರ್ದೇಶನ ಮಾಡಿರುವ ಅಧ್ಯಕ್ಷರ ಕಾಲದಲ್ಲಿ. ಕ್ರಮ ಅದರೆ ಅವರ ಮೇಲೆ ಕ್ರಮ ಆಗಬೇಕು. ಕೆಲಮೊಮ್ಮೆ ಈ ತರ ಟೀಕೆ ಟಿಪ್ಪಣಿ ಮಾಡುತ್ತಾರೆ ಎನ್ನುವುದು ದುರಂತ. ಇಲ್ಲಿಂದ ಪಾದಯಾತ್ರೆ ಮಾಡಿದ್ರು. ಅದರ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು. ಜನತಾದಳ – ಬಿಜೆಪಿ ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಒಂದು ಕಡೆ ಸಿಬಿಐ ತನಿಖೆಗೆ ಕೋರ್ಟ್‌ಗೆ ಹಾಕಿದ್ರು. ಅದನ್ನ ಅವಶ್ಯಕತೆ ಇಲ್ಲ ಅಂತ ಹೇಳಿ ಬೇರೆ ಏಜೆನ್ಸಿ ಮಾಡ್ತಾ ಇದೆ ಅಂತ ವಾಪಸ್ ಹಾಕಿದ್ರು. ಮತ್ತೊಂದು ಕಡೆ ಯಾವುದು ಇವರದ್ದು ಪ್ರಭಾವದಿಂದ ಇಲ್ಲ ಅಂತ ಪೊಲೀಸರು ವರದಿ ಕೊಟ್ಟಿದ್ದಾರೆ ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಸಿಎಂ ಯಾವುದೇ ತಪ್ಪು ಮಾಡಿಲ್ಲ ಅಂತ ನನಗೆ ಗೊತ್ತಿತ್ತು. ಎದೆ ತಟ್ಟಿ ಹೇಳ್ತೇನೆ ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರು. ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿರುವುದು ಯಾವುದೇ ತಪ್ಪು ಮಾಡಿಲ್ಲ ಎಂದು. ಯಾವುದೇ ದಾಖಲೆಗಳು ಇಲ್ಲ, ಅದಕ್ಕೆ ಲೋಕಾಯುಕ್ತಾ ಕ್ಲೀನ್ ಚಿಟ್ ಕೊಟ್ಟಿದೆ. ಸಿಎಂ ಮೇಲೆ ಯಾವುದೇ ಕಳಂಕ ಇಲ್ಲ. ಸಿದ್ದರಾಮಯ್ಯ 16 ನೇ ಬಜೆಟ್ ಮಂಡನೆ ಮಾಡುತ್ತಿರುವ ಸಮಯದಲ್ಲಿ ಕ್ಲೀನ್ ಚಿಟ್ ಕೊಟ್ಟಿರುವುದು ನಮಗೆ ಸಂತೋಷ ತಂದಿದೆ ಎಂದಿದ್ದಾರೆ.