ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯಲ್ಲಿನ ನೋಂದಣಿ ಕಚೇರಿಗಳು ಬೆಳಗ್ಗೆ 8 ರಿಂದಲೇ ಕಾರ್ಯನಿರ್ವಹಿಸಲಿವೆ. ಸಬ್ ರಿಜಿಸ್ಟರ್ ಕಚೇರಿಯ ಸಮಯ ಬದಲಾವಣೆ ಮಾಡಿರುವ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಸದ್ಯ ಸಬ್ ರಿಜಿಸ್ಟರ್ ಕಚೇರಿಗಳು ಮೊದಲು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸುತ್ತಿದ್ದವು. ನಂತರ ಸಮಯದಲ್ಲಿ ಬದಲಾವಣೆ ಮಾಡಿದ್ದು ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 7.30ರವರೆಗೆ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿತ್ತು. ಈಗ ಮತ್ತೆ ಜನಸಂದಣಿ ಪರಿಗಣಿಸಿ ಕಛೇರಿಯ ಸಮಯವನ್ನು ಮತ್ತೆ ಬದಲಾವಣೆ ಮಾಡಿದ್ದು, ಕಚೇರಿಗಳು ಬೆಳಗ್ಗೆ 8 ರಿಂದ ಸಂಜೆ 8 ಗಂಟೆವರೆಗೆ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಯ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಮತ್ತು ಮಾರ್ಚ್ ತಿಂಗಳಲ್ಲಿ ಬರುವ ಎಲ್ಲಾ ಶನಿವಾರದಲ್ಲಿ ಸಬ್ ರಿಜಿಸ್ಟರ್ ಆಫಿಸ್ಗಳು ಕಾರ್ಯನಿರ್ವಹಿಸುವಂತೆ ಆದೇಶಿದೆ.