• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಂಬೇಡ್ಕರ್‌ ಚಿಂತನೆಯ ನೆಲೆಯಲ್ಲಿ  ಉಪವರ್ಗೀಕರಣ ತೀರ್ಪು

ನಾ ದಿವಾಕರ by ನಾ ದಿವಾಕರ
September 8, 2024
in Top Story, ಅಂಕಣ, ಕರ್ನಾಟಕ, ವಿಶೇಷ
0
ಅಂಬೇಡ್ಕರ್‌ ಚಿಂತನೆಯ ನೆಲೆಯಲ್ಲಿ  ಉಪವರ್ಗೀಕರಣ ತೀರ್ಪು
Share on WhatsAppShare on FacebookShare on Telegram
  • ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಅಂತರ್ಗತವಾಗಿರುವ ಸಾಮಾಜಿಕ ವಾಸ್ತವಗಳನ್ನು ಗಮನಿಸಬೇಕಿದೆ
  • ಬಿ.ಎಸ್.‌ ವಾಘ್‌ಮಾರೆ ಮತ್ತು ಶಿವಮ್‌ ಮೊಘ
  • ( Sub classification verdict through Ambedkarʼs ideals ̲- Prof B̤S̤ Waghmare &  Shivam Mogha
  • The Hindu 5th September 2024)
  • ಕನ್ನಡಕ್ಕೆ : ನಾ ದಿವಾಕರ

 ಆಗಸ್ಟ್‌ 1  2024ರಂದು ಪಂಜಾಬ್‌ ರಾಜ್ಯ vs ದವೀಂದರ್‌ ಸಿಂಗ್‌ ಮತ್ತಿತರರು ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು ಮೀಸಲಾತಿಯ ಉಪವರ್ಗೀಕರಣವನ್ನು ಕುರಿತಂತೆ ಸಾಮಾಜಿಕ ನ್ಯಾಯಶಾಸ್ತ್ರದ ದೃಷ್ಟಿಕೋನವನ್ನು ಪ್ರಮಾಣೀಕರಿಸುತ್ತದೆ. ಭಾರತೀಯ ನ್ಯಾಯಶಾಸ್ತ್ರದಲ್ಲಿ ಇದು ಮಹತ್ತರ ಬೆಳವಣಿಗೆಯಾಗಿದ್ದು , ಸಾಮಾಜಿಕ ನ್ಯಾಯದ ನೆಲೆಯಲ್ಲಿ ಇನ್ನೂ ಮುಖ್ಯವಾಗುತ್ತದೆ.  ನ್ಯಾಯಾಲಯದ ತೀರ್ಪಿನಲ್ಲಿ ಸಾಂವಿಧಾನಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸಾಮಾಜಿಕ ನ್ಯಾಯಶಾಸ್ತ್ರವನ್ನು ವ್ಯಾಖ್ಯಾನಿಸಲಾಗಿದ್ದು ತನ್ಮೂಲಕ ದಲಿತ ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತ ಹಾಗೂ ವಂಚಿತ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ತಲುಪಿಸುವ ಉದ್ದೇಶವನ್ನು ಕಾಣಬಹುದು. ದಲಿತರಲ್ಲೇ ಈ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ವಾಸ್ತವವೂ ಹೌದು. ಉಪ ವರ್ಗೀಕರಣದ ಈ ಚಿಂತನೆಯು ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಭ್ರಾತೃತ್ವ ಮತ್ತು ಸಹಮೈತ್ರಿಯ ತತ್ವಗಳನ್ನೇ ಬಿಂಬಿಸುವಂತಿದ್ದು ಪರಿಶಿಷ್ಟ ಜಾತಿಗಳಲ್ಲಿ ಪರಸ್ಪರ ಸಹಕಾರ ಮತ್ತು ಗೌರವ ಇರಬೇಕು ಎಂಬುದನ್ನು ಒತ್ತಿಹೇಳುವಂತಿದೆ. ಆದರೆ ಈ ತೀರ್ಪಿನ ಸಂದರ್ಭದಲ್ಲಿ ವರ್ಣ ವ್ಯವಸ್ಥೆಯ ಬಗ್ಗೆ ಹಾಗೂ ಕೆನೆಪದರದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅನಪೇಕ್ಷಿತವಾದದ್ದು.

ADVERTISEMENT

ಸಾಮಾಜಿಕ ನ್ಯಾಯ- ಅಂಬೇಡ್ಕರ್ ಸಂಘರ್ಷ

ಡಾ. ಬಿ.ಆರ್.‌ ಅಂಬೇಡ್ಕರ್‌ ತಮ್ಮ ಜೀವನದುದ್ದಕ್ಕೂ ಸಮಾಜದ ದಮನಿತ ಜನರಿಗೆ ಸಾಮಾಜಿಕ ಹಾಗೂ ನಾಗರಿಕ ನ್ಯಾಯವನ್ನು ಸ್ಥಾಪಿಸಲು ಹೋರಾಡಿದ್ದರು. ಅಸ್ಪೃಶ್ಯತೆಯ ಆಚರಣೆಗೊಳಗಾಗಿದ್ದ ಸಮುದಾಯಗಳಿಗೆ ಅಂಬೇಡ್ಕರ್‌ ಪ್ರತ್ಯೇಕವಾದ ಸಾಂಸ್ಕೃತಿಕ ಹಕ್ಕುಗಳನ್ನೂ ಖಚಿತಪಡಿಸಲು ಆಗ್ರಹಿಸಿದ್ದರು. ಆದರೂ ಈ ಪ್ರಯತ್ನಗಳಿಗೆ ಹಿಂದೂ ಮೇಲ್ಜಾತಿಗಳಿಂದ ಸಮರ್ಪಕವಾದ ಪ್ರತಿಕ್ರಿಯೆ ದೊರೆತಿರಲಿಲ್ಲ, ಕೆಲವೊಮ್ಮೆ ಪ್ರತಿರೋಧಗಳೂ ಕಂಡುಬಂದಿದ್ದವು. ಭಾರತದ ಸಾಮಾಜಿಕ ರಚನೆಯ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಅಂಬೇಡ್ಕರ್‌, ಭಾರತದ ಸಾಮಾಜಿಕ ಶ್ರೇಣಿಯಲ್ಲಿ ಹೇಗೆ ಪ್ರತಿಯೊಂದು ಜಾತಿಯೂ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ನಿರೂಪಿಸಿದ್ದರು. ಜಾತಿ ಶ್ರೇಣಿಯ ವ್ಯವಸ್ಥೆಯೊಳಗೆ ಅಂತರ್ಗತವಾಗಿದ್ದ ವಿಭಜನೆಗಳ ಬಗ್ಗೆಯೂ ಸಹ ಗಮನ ಸೆಳೆದಿದ್ದರು. 1944ರ ಆಗಸ್ಟ್‌ 31ರಂದು ಕಾನ್ಪುರದಲ್ಲಿ ನಡೆದ ಪರಿಶಿಷ್ಟ ಜಾತಿಗಳ ಸಮಾವೇಶದಲ್ಲಿ ಮೂರು ಪರಿಶಿಷ್ಟ ಜಾತಿಗಳ ಸಂಘಟನೆಗಳು ಮಂಡಿಸಿದ ಸ್ವಾಗತ ಭಾಷಣಕ್ಕೆ ಅಂಬೇಡ್ಕರ್‌ ನೀಡಿದ ಪ್ರತಿಕ್ರಿಯೆಯನ್ನು ಅಂದಿನ ದಿನಪತ್ರಿಕೆಯೊಂದು ಪ್ರಕಟಿಸಿತ್ತು. ತಮ್ಮ ಪ್ರತಿಕ್ರಿಯೆಯಲ್ಲಿ ಅಂಬೇಡ್ಕರರು “ ಇತರೆ ಜಾತಿಗಳು ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕು ಎಂದು ಕರೆ ನೀಡುವುದಕ್ಕೂ ಮುನ್ನ ಪರಿಶಿಷ್ಟ ಜಾತಿಗಳು ತಮ್ಮೊಳಗಿನ ಅಂತರಿಕ ವಿಭಜನೆಗಳನ್ನು ನಿವಾರಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು,,,,, ” ಎಂದು ಹೇಳಿದ್ದರು.

ಸಾಮಾಜಿಕ ನ್ಯಾಯದ ಬಗ್ಗೆ ಅಂಬೇಡ್ಕರರ ಕೊಡುಗೆಯು ತಾತ್ವಿಕ/ಸೈದ್ಧಾಂತಿಕ ಪ್ರಯತ್ನಗಳನ್ನೂ ದಾಟಿ ವಿಸ್ತರಿಸುತ್ತದೆ.  ಜಾತಿ ಶ್ರೇಣಿಯನ್ನು ಭಂಗಗೊಳಿಸುವ ಅವರ ಪ್ರಾಯೋಗಿಕ ಕ್ರಮಗಳು ಗಮನಾರ್ಹವಾದವು. ಮಹಾಡ್‌ ಸತ್ಯಾಗ್ರಹ, ಕಾಳಾರಾಮ್‌ ದೇವಾಲಯ ಪ್ರವೇಶ ಮುಂತಾದ ಅಂದೋಲನಗಳಿಗೆ ಮುಂದಾಳತ್ವ ವಹಿಸಿದ್ದ ಅಂಬೇಡ್ಕರ್‌ ತನ್ಮೂಲಕ ದಲಿತರು ಎದುರಿಸುತ್ತಿದ್ದ ಆಚರಣಾತ್ಮಕ ತಾರತಮ್ಯಗಳ ಮೇಲೆ ಬೆಳಕು ಚೆಲ್ಲಿದ್ದರು. ಈ ಪ್ರಯತ್ನಗಳ ಹೊರತಾಗಿಯೂ ಬ್ರಾಹ್ಮಣವಾದಿ ಶಕ್ತಿಗಳು ನ್ಯಾಯಯುತವಾದ ಸಮಾಜಕ್ಕಾಗಿ ಅಂಬೇಡ್ಕರ್‌ ಅವರಲ್ಲಿದ್ದ ದಾಹ ಮತ್ತು ಕಾಳಜಿಯನ್ನು ನಗಣ್ಯಗೊಳಿಸಿದ್ದವು. ಈ ಸವಾಲುಗಳ ನಡುವೆಯೂ ಶ್ರೇಣೀಕೃತ ಸಮಾಜದಲ್ಲಿ ನ್ಯಾಯಕ್ಕಾಗಿ ಅವಿರತ ಹೋರಾಡುವ ಅಂಬೇಡ್ಕರ್‌ ಅವರ ಕ್ಷಮತೆ ಅವರ ಸಾಮಾಜಿಕ ಬದ್ಧತೆಯ ಪ್ರತೀಕ. 

ಮರಾಠಾವಾಡದಲ್ಲಿ ದಲಿತರ ಆಹಾರ ಪದ್ಧತಿಯ ಬಗ್ಗೆ ಪುಸ್ತಕವನ್ನು ಪ್ರಕಟಿಸಿರುವ ಶಾಹು ಪಟೋಲೆ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ವಿವಿಧ ಜಾತಿಗಳು ವಿಭಿನ್ನ ಸ್ತರಗಳ ತಾರತಮ್ಯಗಳನ್ನು ಅನುಸರಿಸುತ್ತವೆ ಎಂದು ಹೇಳಿದ್ದಾರೆ. ಗ್ರಾಮದಲ್ಲಿ ತಮ್ಮ ಅನುಭವವನ್ನು ಕುರಿತು ಮಾತನಾಡುವ ಪಟೋಲೆ ಅವರು “ಮಾಂಗ್‌ ಸಮುದಾಯವನ್ನು ಅತ್ಯಂತ ಕೆಳಸ್ತರ ಜಾತಿ ಎಂದು ಪರಿಗಣಿಸಲಾಗಿತ್ತು. ಅವರ ಮೇಲೆ ಮಹರ್‌ ಜಾತಿಗಳಿದ್ದವು. ಚಮ್ಮಾರರು ಮಾಂಗ್‌ ಮತ್ತು ಮಹರ್‌ ಎರಡೂ ಜಾತಿಗಳನ್ನು ಅಸ್ಪೃಶ್ಯರೆಂದೇ ಪರಿಗಣಿಸುತ್ತಾರೆ, ಉಳಿದ ಗ್ರಾಮಗಳಲ್ಲಿ ಈ ಮೂರೂ ಸಮುದಾಯಗಳನ್ನು ಸ್ಪೃಶ್ಯರೆಂದು ಭಾವಿಸುವುದೇ ಇಲ್ಲ ” ಎಂದು ಹೇಳುತ್ತಾರೆ. ಇದು ಶ್ರೇಣೀಕೃತ ಅಸಮಾನತೆ ಇರುವುದನ್ನು ಖಚಿತಪಡಿಸುತ್ತದೆ. ಅಂಬೇಡ್ಕರರು ತಮ್ಮ ಸಮಾಜಶಾಸ್ತ್ರೀಯ ಗ್ರಂಥಗಳಲ್ಲಿ ಇದನ್ನೇ ಪ್ರಧಾನವಾಗಿ ಪ್ರತಿಪಾದಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ಹಾದಿಯಲ್ಲಿ ಬಹಳ ಸೂಕ್ಷ್ಮವಾದ ವಿಧಾನಗಳನ್ನು ಅಳವಡಿಸುವುದು ಅಗತ್ಯ. ಉಪವರ್ಗೀಕರಣದ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಭಾಗಶಃವಾಗಿಯಾದರೂ ಇದನ್ನೇ ಬಿಂಬಿಸುತ್ತದೆ. ಈ ತೀರ್ಪನ್ನು ಅಂಬೇಡ್ಕರರ ಸಾಮಾಜಿಕ ನ್ಯಾಯದ ಚಿಂತನೆಗಳ ನೆಲೆಯಲ್ಲಿ ವ್ಯಾಖ್ಯಾನಿಸಬಹುದು. ಅಸಂಖ್ಯಾತ ಜಾತಿಗಳು ವಿವಿಧ ಸ್ತರಗಳ ತಾರತಮ್ಯ ಹಾಗೂ ಕೊರತೆಗಳನ್ನು ಅನುಭವಿಸುವುದನ್ನು ಈ ವ್ಯಾಖ್ಯಾನಗಳಲ್ಲಿ ಗುರುತಿಸಬಹುದು. ಪರಿಶಿಷ್ಟ ಜಾತಿಗಳಲ್ಲಿ ಅಂತರ್ಗತವಾಗಿರುವ ಈ ವೈವಿಧ್ಯಮಯ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಮುಖ್ಯವಾಗುತ್ತದೆ. ಈ ನೆಲೆಯಲ್ಲೇ  ನ್ಯಾಯಾಲಯದ ತೀರ್ಪು ಸಾಮಾಜಿಕ ನ್ಯಾಯಶಾಸ್ತ್ರದ ಕೇಂದ್ರ ಕಲ್ಪನೆಯನ್ನು ಕೇಂದ್ರದಲ್ಲಿಟ್ಟು ನೋಡುತ್ತದೆ. ಏಕೆಂದರೆ ಇದು ಪ್ರತಿ ಜಾತಿಯ ವಿಭಿನ್ನ ಸಾಮಾಜಿಕ ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಆಂತರಿಕ ಟೀಕೆಗಳು

ಇದನ್ನು ಇನ್ನೂ ವಿವಿಧ ರಾಜ್ಯಗಳಲ್ಲಿ ಜಾರಿಗೆ ತರಬೇಕಾಗಿದ್ದರೂ, ಉಪ-ವರ್ಗೀಕರಣ ನಿರ್ಧಾರವು ಕೆಲವು ದಲಿತ ಸಮುದಾಯಗಳಿಂದ, ವಿಶೇಷವಾಗಿ ದಲಿತರ ಪ್ರಮುಖ ವಲಯಗಳಿಂದ ಟೀಕೆಗೆ ಗುರಿಯಾಗಿದೆ.  ಈ ವರ್ಗಗಳು ತಮ್ಮ ರಾಜಕೀಯ ಪ್ರಭಾವ ಕಡಿಮೆಯಾಗಬಹುದು ಎಂದು ಭಾವಿಸುತ್ತವೆ. ಉಪ-ವರ್ಗೀಕರಣದ ತೀರ್ಪು ದಲಿತ ವಲಯವನ್ನು ವಿಭಜಿಸಬಹುದು ಮತ್ತು ಸಾಮೂಹಿಕ ದಲಿತ ಚಳವಳಿಯನ್ನು ದುರ್ಬಲಗೊಳಿಸಬಹುದು ಎಂಬ ಊಹೆಯಿಂದ ಈ ಭಯ ಸೃಷ್ಟಿಯಾಗುತ್ತದೆ . ದುರದೃಷ್ಟವಶಾತ್ ಈ ಪ್ರತಿಪಾದನೆಯಲ್ಲಿ ದೇಶಾದ್ಯಂತ  ಒಂದೇ ದಲಿತ ಚಳವಳಿ ಇದೆ ಎಂಬ ಭಾವನೆ ಇದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅನೇಕ ದಲಿತ ಚಳುವಳಿಗಳಲ್ಲಿ ಪ್ರತಿಬಿಂಬಿತವಾದಂತೆ ದಲಿತ ರಾಜಕೀಯದ ವಿಭಿನ್ನ ಛಾಯೆಗಳು ಸದಾ ಕಾಲವೂ ಇದ್ದುದನ್ನು  ಅನೇಕ ಸಮಾಜಶಾಸ್ತ್ರೀಯ ಬರಹಗಳು ತೋರಿಸುತ್ತವೆ.

ಆದಾಗ್ಯೂ, ದಲಿತರಲ್ಲಿ ಪ್ರಮುಖ ವಲಯಗಳ ಈ ವಾದವು ದಲಿತ ರಾಜಕೀಯದ ವಿವಿಧ ಛಾಯೆಗಳ ಅಡಿಪಾಯವಾಗಿರುವ ಅಂಬೇಡ್ಕರ್‌ವಾದಿ ಪ್ರಜ್ಞೆಯನ್ನು ಕಡೆಗಣಿಸುತ್ತದೆ. ಈ ಸಂದರ್ಭದಲ್ಲಿ ಮಾದಿಗ ದಂಡೋರ ಚಳವಳಿಯ 30 ವರ್ಷಗಳನ್ನು ತಪ್ಪಾಗಿ ಅಂಬೇಡ್ಕರ್ ಪ್ರಜ್ಞೆಯ ವಲಯದಿಂದ ಪ್ರತ್ಯೇಕವಾಗಿಯೇ ಬಿಂಬಿಸಲಾಗುತ್ತಿದೆ. ಮಹಾರಾಷ್ಟ್ರದ ಮಾಂಗ್ ಜಾತಿಯ ಚಳುವಳಿಗಳು ಮತ್ತು ಕ್ರೋಢೀಕರಣಗಳು  ಲೋಕಶಾಹಿರ್ ಅಣ್ಣಾಭಾವು ಸಾಠೆ ಅವರೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹ ಹೊಂದಿರುವುದನ್ನು ಗುರುತಿಸಬೇಕಿದೆ.  ಇತರ ಜಾತಿಗಳೊಂದಿಗೆ ವ್ಯವಹರಿಸುವಾಗ ಪ್ರತಿಯೊಂದು ಜಾತಿಯ ಸಮಸ್ಯೆಯು ಹೇಗೆ ವಿಭಿನ್ನವಾಗಿರಬಹುದು ಎನ್ನುವುದನ್ನು ಇದು ಸೂಚಿಸುತ್ತದೆ. ಆದರೆ ಅಂಬೇಡ್ಕರರ ಸಾಮಾಜಿಕ ನ್ಯಾಯದ ವಿಶಾಲ ತಳಹದಿಯಲ್ಲಿ ಈ ಎಲ್ಲ ಸಮಸ್ಯೆಗಳೂ ಏಕೀಕೃತವಾಗಿರುವುದನ್ನೂ ಸೂಚಿಸುತ್ತದೆ.

ಉತ್ತರ ಭಾರತದಲ್ಲಿ ಕೆಲವು ನಿರ್ದಿಷ್ಟ ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಒಂದು ತಪ್ಪು ಹೆಜ್ಜೆಯಾಗಿದ್ದು, ಇದು ದಲಿತ ಜಾತಿಗಳ ಸಾಮೂಹಿಕ ಅಸ್ಮಿತೆ ಮತ್ತು ಕ್ರೋಢೀಕರಣದ ಮೇಲೆ ಪರಿಣಾಮ ಬೀರಬಹುದು. ಉತ್ತರ ಭಾರತದಲ್ಲಿ ಉಪ-ವರ್ಗೀಕರಣ ಚರ್ಚೆಯು ಹಲವು ಟೀಕೆಗಳನ್ನು ಎದುರಿಸುತ್ತಿದ್ದರೆ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಅಲ್ಲಿ, ದಲಿತರಲ್ಲಿ ಉಪ ವರ್ಗೀಕರಣದ ಚರ್ಚೆಯನ್ನು ಹೆಚ್ಚುಕಡಿಮೆ ಪರಿಹರಿಸಲಾಗಿದ್ದು, ಬಹುತೇಕ ದಲಿತ ಸಂಘಟನೆಗಳು ಪರಿಶಿಷ್ಟ ಜಾತಿಗಳಲ್ಲಿ ಉಪ-ವರ್ಗೀಕರಣದ ಬೇಡಿಕೆಯನ್ನು ಬೆಂಬಲಿಸುತ್ತವೆ.

ಈ ತೀರ್ಪು ದಲಿತ ಚಳವಳಿಯೊಳಗೆ ಒಡಕುಗಳನ್ನು ಸೃಷ್ಟಿಸಬಹುದು ಎಂಬ ಉತ್ತರ ಭಾರತದ ದಲಿತ ಸಂಘಟನೆಗಳ ಆತಂಕಗಳು,  ದಲಿತರಲ್ಲಿ ಅಸ್ತಿತ್ವದಲ್ಲಿರುವ ಸಾಮಾಜಿಕ ರಚನೆಗಳ ಬಗ್ಗೆ ತಪ್ಪು ತಿಳುವಳಿಕೆ ಇರುವುದನ್ನು ಬಿಂಬಿಸುತ್ತವೆ . ಉಪ-ವರ್ಗೀಕರಣ ಚಳುವಳಿಯನ್ನು ಬೆಂಬಲಿಸುವುದು ಮತ್ತು ಜಾತಿ ಮಟ್ಟದಲ್ಲಿ ಸಾಮಾಜಿಕ ನ್ಯಾಯ ರಾಜಕೀಯವನ್ನು ಹೆಚ್ಚಿಸಲು ಅದರ ಸಂಭಾವ್ಯ ಪ್ರಯೋಜನಗಳನ್ನು ಅಳವಡಿಸಿಕೊಳ್ಳುವುದು ಪ್ರಬುದ್ಧ ವಿಧಾನವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಉಪ-ವರ್ಗೀಕರಣವು ಪರಿಶಿಷ್ಟ ಜಾತಿಗಳ ಸಾಮೂಹಿಕ ಅಸ್ಮಿತೆಯನ್ನು ಬಲಪಡಿಸಬಹುದು, ಅಂಚಿನಲ್ಲಿರುವವರನ್ನು ಒಳ ಸೇರಿಸುವ ಮೂಲಕ ಅಂಬೇಡ್ಕರೀಕರಣ ಪ್ರಕ್ರಿಯೆಯನ್ನು ಮುನ್ನಡೆಸಬಹುದು.  ಇದು ಸಂಖ್ಯಾ ಬಲದ ಆಧಾರದ ಮೇಲೆ ಪ್ರಾತಿನಿಧ್ಯದ ಕಲ್ಪನೆಯನ್ನು ಪ್ರತಿಪಾದಿಸಿದ ಮಾನ್ಯವರ್ ಕಾನ್ಶಿರಾಮ್ ಅವರಂತಹ ನಾಯಕರು ವ್ಯಕ್ತಪಡಿಸಿದ ಸಮಾನ ಪ್ರಾತಿನಿಧ್ಯದ ತತ್ವಗಳೊಂದಿಗೆ ಹೊಂದಿಕೆಯಾಗುತ್ತದೆ.

ಸುದೀರ್ಘ ಹೋರಾಟ – ವಾಸ್ತವಗಳ ಪ್ರತಿಬಿಂಬ

ಪರಿಶಿಷ್ಟ ಜಾತಿಗಳಲ್ಲಿನ ಪ್ರಮುಖ ವಲಯಗಳು  ಉತ್ತರ ಭಾರತದ ವಾಲ್ಮೀಕಿ ಮತ್ತು ಮುಸಹರ್, ದಕ್ಷಿಣದ ಮಾದಿಗ ಮತ್ತು ಅರುಂಧತಿಯಾರ್‌ಗಳಂತಹ ಅಂಚಿನಲ್ಲಿರುವ ಸಮುದಾಯಗಳ ಅವಿರತ ಹೋರಾಟಗಳನ್ನು ಕೀಳಾಗಿ ಕಾಣುವುದನ್ನು ತಪ್ಪಿಸಬೇಕು. ಏಕೆಂದರೆ ನ್ಯಾಯಾಂಗದ ಈ ತೀರ್ಪು ಮೇಲಿನಿಂದ ಹೇರಿಕೆಯಾಗುತ್ತಿರುವುದಲ್ಲ. ಹಲವು ವರ್ಷಗಳ ತಳಮಟ್ಟದ ಕ್ರಿಯಾಶೀಲತೆ ಮತ್ತು ಉಪ-ವರ್ಗೀಕರಣ ಕುರಿತ ಜನಾಗ್ರಹಗಳ ಪ್ರತಿಫಲವಾಗಿದೆ. ಮಾದಿಗ ಮೀಸಲಾತಿ ಹೋರಾಟ ಸಮಿತಿ (MRPS), ಮಹಾರಾಷ್ಟ್ರದ ಮಾಂಗ್ ಸಮುದಾಯದ ಸಮ್ಮೇಳನಗಳು ಮತ್ತು ಉತ್ತರ ಭಾರತದಲ್ಲಿ ವಾಲ್ಮೀಕಿ ಚಳವಳಿಗಳಂತಹ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಇದು ಸಾಕ್ಷಿಯಾಗಿದೆ. ಆದರೆ ಈ ತೀರ್ಪಿನ  ಅನುಷ್ಠಾನದ ಬಗ್ಗೆ ಹೆಚ್ಚಿನ ಕಾಳಜಿ ಇದೆ. 2004 ರ ಚಿನ್ನಯ್ಯ ತೀರ್ಪಿಗೂ ಮುನ್ನ  ಪಂಜಾಬ್ ಮತ್ತು ಹರಿಯಾಣದಲ್ಲಿ ಉಪ-ವರ್ಗೀಕರಣ ಮಾದರಿಯ ಯಶಸ್ಸಿನ ಬಗ್ಗೆ ಇತಿಹಾಸ ದಾಖಲಿಸಿದೆ. ಇಂತಹ ಕ್ರಮಗಳು ಆಚರಣಾತ್ಮಕವಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಕೆಲವು ವಲಯಗಳಿಂದ ಟೀಕೆಗಳ ಹೊರತಾಗಿಯೂ, ಈ ತೀರ್ಪು ಸಮಾನ ಪ್ರಾತಿನಿಧ್ಯ ಮತ್ತು ನ್ಯಾಯಕ್ಕಾಗಿ ನಡೆದಿರುವ ಚಾರಿತ್ರಿಕ ಹೋರಾಟಗಳನ್ನು ಆಧರಿಸಿರುವುದನ್ನು ಗುರುತಿಸಬೇಕಿದೆ.

ನ್ಯಾಯಾಧೀಶರ ಈ ದೃಢೀಕರಣ ಅತ್ಯಗತ್ಯವಾಗಿತ್ತು. ಏಕೆಂದರೆ ಪರಿಶಿಷ್ಟ ಜಾತಿ ವರ್ಗವು ಏಕರೂಪವಾಗಿಲ್ಲ ಬದಲಾಗಿ  ವಿಭಿನ್ನ ಅಗತ್ಯಗಳು ಮತ್ತು ಸವಾಲುಗಳನ್ನು ಹೊಂದಿರುವ ವಿಭಿನ್ನ ಉಪಜಾತಿಗಳನ್ನು ಒಳಗೊಂಡಿದೆ ಎಂದು ಅದು ನಿರೂಪಿಸಿದೆ. ಜಾತಿ ವಿಸ್ತರಣೆಗಳು ಮೂಲ ಜಾತಿ ಅಗತ್ಯತೆಯ ಕಲ್ಪನೆಯನ್ನು ಮೀರಿ ಹೋಗುವುದೇ ಅಲ್ಲದೆ ಅಲ್ಲಿನ  ನಡವಳಿಕೆಗಳು ಇತರ ಜಾತಿಗಳಿಗೆ ಪ್ರತಿಕ್ರಿಯೆಯಾಗಿಯೂ ಕಂಡುಬರುತ್ತವೆ. ಮತ್ತೊಂದೆಡೆ, ಪರಿಶಿಷ್ಟ ಜಾತಿ ಸಮುದಾಯವು ತನ್ನ ಸಂರಚನೆಯ ಒಳಗೇ  ಇರುವ ಹಲವು ಜಾತಿಗಳ ಒಕ್ಕೂಟವನ್ನು ಪ್ರತಿನಿಧಿಸುತ್ತದೆ ಎಂಬ ಸಾಮಾಜಿಕ ಸತ್ಯವನ್ನು ಗುರುತಿಸುವುದು  ಪ್ರತಿ ಗುಂಪಿನ ಸೂಕ್ಷ್ಮ ಅಗತ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಕಾಣುತ್ತದೆ. ಅಂತರ್ಜಾತೀಯ ವಿವಾಹಗಳ ನಿಷೇಧ ಜಾರಿಯಲ್ಲಿರುವುದೇ ಪರಿಶಿಷ್ಟ ಜಾತಿ ಒಂದು ಏಕರೂಪದ ಗುಂಪು ಎಂಬ ಊಹೆಯನ್ನು ಅಲ್ಲಗಳೆಯುತ್ತದೆ.  ಇವು ಕಟು ಸಮಾಜಶಾಸ್ತ್ರೀಯ ವಾಸ್ತವಗಳು. ಇದನ್ನು ಯಾರೂ ಅಲ್ಲಗಳೆಯಕೂಡದು.

ಅಂತಿಮವಾಗಿ, ಈ ತೀರ್ಪನ್ನು ಸ್ವೀಕರಿಸುವ ಬಗ್ಗೆ ಹಲವು ಸವಾಲುಗಳು ಇರುವುದಾದರೂ,  ಮೂಲದಲ್ಲೇ ಸಾಮಾಜಿಕ ನ್ಯಾಯದ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ಎಲ್ಲಾ ದಲಿತ ಜಾತಿಗಳ ಸಮಾನ ಪ್ರಾತಿನಿಧ್ಯವನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಇದರೊಳಗೆ ಗುರುತಿಸುವುದು ಅತ್ಯವಶ್ಯ.  ಅಂಬೇಡ್ಕರ್ ಪ್ರತಿಪಾದಿಸಿದಂತೆ ಭ್ರಾತೃತ್ವದ ಮನೋಭಾವದಿಂದ ಈ ತೀರ್ಪನ್ನು ಸ್ವೀಕರಿಸುವ ಮೂಲಕ  ಮೀಸಲಾತಿ ವ್ಯವಸ್ಥೆಯ ಪ್ರಜಾಪ್ರಭುತ್ವೀಕರಣಕ್ಕೆ ಎಡೆಮಾಡಿಕೊಡುವುದೇ ಅಲ್ಲದೆ,  ಹೆಚ್ಚು ನ್ಯಾಯಯುತವಾದ  ಮತ್ತು ಒಳಗೊಳ್ಳುವಿಕೆಯ ಸಮಾಜವನ್ನು ರೂಪಿಸುವಲ್ಲಿ ಇದು ನಿರ್ಣಾಯಕವಾಗಿದೆ. ದಲಿತ ನಾಗರಿಕ ಅಸ್ಮಿತೆಯನ್ನು ಎತ್ತಿಹಿಡಿಯುವಾಗ ಮತ್ತು ಕೆನೆಪದರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಈ ತೀರ್ಪನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ತಡೆಯುವುದು  ಸಾಮೂಹಿಕ ಅಂಬೇಡ್ಕರ್‌ವಾದಿ ಆಂದೋಲದ ಆದ್ಯತೆಯಾಗಬೇಕಿದೆ.

 ಅಷ್ಟೇ ಅಲ್ಲದೆ , ಆಂದೋಲನವು ಸಾಂಪ್ರದಾಯಿಕ ಮೀಸಲಾತಿ ನೀತಿಗಳನ್ನು ಮೀರಿ ತನ್ನ ಗಮನವನ್ನು ವಿಸ್ತರಿಸಬೇಕಿದೆ. ಮುಂದೆ ಕೈಗೊಳ್ಳಬೇಕಾದ ಪ್ರಮುಖ ಉಪಕ್ರಮಗಳಲ್ಲಿ ಮೀಸಲಾತಿ ನೀತಿಗಳನ್ನು ಖಾಸಗಿ ವಲಯಕ್ಕೆ ವಿಸ್ತರಿಸಲು ಪ್ರತಿಪಾದಿಸುವುದು ಮತ್ತು ಭೂ ಮರುಹಂಚಿಕೆಯನ್ನು ಮುಂದುವರಿಸುವುದು ಮುಖ್ಯ ಕಾರ್ಯಸೂಚಿಯಾಗಿರಬೇಕಿದೆ.  ಪ್ರಾತಿನಿಧ್ಯವನ್ನು ಹೆಚ್ಚಿಸಲು ಮತ್ತು ಎಲ್ಲಾ ದಲಿತ ಸಮುದಾಯಗಳಿಗೆ ಭೌತಿಕ ಪ್ರಯೋಜನಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಕ್ರಮಗಳು ನಿರ್ಣಾಯಕವಾಗಿವೆ.

-೦-೦-೦-

Tags: government schemesindia news liveIndian Constitutionindian youtubermisuse of sc st act in india in hindimisuse of sc st act in indian constitutionnational commissions for sc and stsc st act by khan sirsc st act kya hai in hindisc st candidatessc st obcsc st obc general kya haisupreme court judgement on sc st act in hindisupreme court sc st reservation todaysupreme court verdict on sc st reservation
Previous Post

ಸಿದ್ದು ಡಿಕೆಶಿ ಹಾಡಿ ಹೊಗಳಿದ ಸಚಿವ ಶಿವಲಿಂಗೇಗೌಡ..!

Next Post

ದರ್ಶನ್ ಅರೆಸ್ಟ್ ಸುದ್ದು ಕೇಳಿ ಶಾಕ್ ಆಗಿತ್ತು ಆದಷ್ಟು ಬೇಗ ಹೊರಬರಲಿ ಎಂದ ರಾಧಿಕಾ ಕುಮಾರಸ್ವಾಮಿ !

Related Posts

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು
ಕರ್ನಾಟಕ

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

by ಪ್ರತಿಧ್ವನಿ
April 28, 2026
0

ಬೆಂಗಳೂರು ನಗರದ ಹೃದಯಭಾಗದ ಕಬ್ಬನ್ ಪಾರ್ಕ್ ಸಮೀಪ ಸಂಭವಿಸಿದ ವ್ಯಕ್ತಿಯ ನಿಗೂಢ ಸಾವು ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲ್ಪಟ್ಟಿದ್ದರೂ, ಪೊಲೀಸರ ಆಳವಾದ ತನಿಖೆಯಲ್ಲಿ ಆಘಾತಕಾರಿ ಸತ್ಯಗಳು ಬೆಳಕಿಗೆ...

Read moreDetails
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
Next Post
ದರ್ಶನ್ ಅರೆಸ್ಟ್ ಸುದ್ದು ಕೇಳಿ ಶಾಕ್ ಆಗಿತ್ತು ಆದಷ್ಟು ಬೇಗ ಹೊರಬರಲಿ ಎಂದ ರಾಧಿಕಾ ಕುಮಾರಸ್ವಾಮಿ !

ದರ್ಶನ್ ಅರೆಸ್ಟ್ ಸುದ್ದು ಕೇಳಿ ಶಾಕ್ ಆಗಿತ್ತು ಆದಷ್ಟು ಬೇಗ ಹೊರಬರಲಿ ಎಂದ ರಾಧಿಕಾ ಕುಮಾರಸ್ವಾಮಿ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada