ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ನಿನ್ನೆ ರಾತ್ರಿ ಸ್ನೇಹಿತನ ಜೊತೆಗೆ ಪಾರ್ಟಿ ಮುಗಿಸಿ ಬರುವಾಗ ಆಟೋ ಡ್ರೈವರ್ಗಳ ಜೊತೆ ಗಲಾಟೆ ಶುರುವಾಗಿತ್ತು. ಕಾರು ಟಚ್ ಆಗಿದೆ ಅಂತಾ ಯುವತಿ ಸ್ನೇಹಿತ ಹಾಗೂ ಆಟೋ ಚಾಲಕರ ನಡುವೆ ಗಲಾಟೆ ನಡೆದಾಗ ಯುವತಿ 112ಗೆ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಹೊಯ್ಸಳ ವಾಹನ ಹೋಗಿತ್ತು.
ಆ ಬಳಿಕ ಗಲಾಟೆ ನಡುವೆ ಸ್ನೇಹಿತನನ್ನು ಬಿಟ್ಟ ಯುವತಿ ಮನೆಗೆ ಹೋಗಲು ಮುಂದಾಗಿದ್ದಳು. ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಅಡ್ಡಗಟ್ಟಿ ಡ್ರಾಪ್ ಕೇಳಿದ್ದಳು. ಆ ವೇಳೆ ಓರ್ವ ಬೈಕ್ ಸವಾರ ನಿರಾಕರಿಸಿದ್ದ. ಮತ್ತೊಂದು ಬೈಕ್ ಅಡ್ಡ ಹಾಕಿದ ಯುವತಿ ಡ್ರಾಪ್ಗಾಗಿ ಬೈಕ್ ಹತ್ತಿದ್ದಳು. ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶದ ಶೆಡ್ಗೆ ಕರೆದೊಯ್ದ ವ್ಯಕ್ತಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಅತ್ಯಾಚಾರದ ವೇಳೆ ಗಾಬರಿಗೊಂಡ ಯುವತಿ ಅಲರ್ಟ್ ಆ್ಯಪ್ ಓಪನ್ ಮಾಡಿದ್ದಾಳೆ. ಕೂಡಲೇ ಸಂತ್ರಸ್ತೆಯ ತಂದೆ ಹಾಗೂ ಗೆಳತಿಗೆ ಅಲರ್ಟ್ ಕರೆ ಮತ್ತು ಲೋಕೇಷನ್ ಶೇರ್ ಆಗಿದೆ. ಪೊಲೀಸರ ಸಹಾಯದಿಂದ ಸ್ಥಳ ಪತ್ತೆ ಮಾಡಿದ್ದ ಯುವತಿಯ ಗೆಳತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯುವತಿಯ ಸ್ನೇಹಿತರು ಬರ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.
ಶೋಚನೀಯ ಸ್ಥಿತಿಯಲ್ಲಿ ಯುವತಿಯನ್ನು ಕಾರಿನ ಟಾರ್ಪೆಲ್ ಹೊದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಸ್ನೇಹಿತರು. ನಿನ್ನೆ ರಾತ್ರಿ 1.30 ರ ಸಮಯದಲ್ಲಿ ಘಟನೆ ನಡೆದಿದೆ. ಟು ವ್ಹೀಲರ್ನಲ್ಲಿ ಲಿಫ್ಟ್ ತೆಗೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆ ಕೋರಮಂಗಲದಿಂದ ಗೆಟ್ ಟು ಗೆದರ್ ಪಾರ್ಟಿಗೆ ಹೋಗಿದ್ರು ಎನ್ನಲಾಗಿದೆ. ಅಲ್ಲಿಂದ ಬರುವಾಗ ಹೀಗೆ ಅಗಿದೆ. ಆಕೆ ಹೊರ ರಾಜ್ಯದ ಯುವತಿ. ವಿದ್ಯಾಭ್ಯಾಸಕ್ಕೆ ಅಂತಾ ಬೆಂಗಳೂರಿಗೆ ಬಂದಿದ್ರು ಬಿಎನ್ಎಸ್ ಸೆಕ್ಷನ್ 64 ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತ ಹೇಳಿದ್ದಾರೆ.
ಆದರೆ ಆಟೋ ಚಾಲಕರ ಜೊತೆಗೆ ಜಗಳ ಆಡುವಾಗ ಯುವತಿ ಸಹಾಯವಾಣಿಗೆ ಕರೆ ಮಾಡಿದ ಬಳಿಕ ಯುವತಿಯನ್ನು ಮನೆಗೆ ಪೊಲೀಸರು ಸುರಕ್ಷಿತವಾಗಿ ತಲುಪುವಂತೆ ಮಾಡಬಹುದಿತ್ತು. ಕುಡಿದು ಬಂದವರಿಗೆಲ್ಲಾ ಪೊಲೀಸ್ರೇ ಡ್ರಾಪ್ ಕೊಡಲು ಸಾಧ್ಯವಿಲ್ಲ. ಕಡೇ ಪಕ್ಷ ಒಂದು ಕ್ಯಾಬ್ ಬುಕ್ ಮಾಡಿ ಮುಂದೆ ನಿಂತು ಮನೆಗೆ ಕಳುಹಿಸಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ ಎನ್ನಬಹುದು.
ಕೃಷ್ಣಮಣಿ