ವಿಜಯಪುರ ಜಿಲ್ಲೆಯ ಮತ್ತೊಂದು ತಾಲ್ಲೂಕಿಗೆ ಹಿಜಾಬ್ ಮತ್ತು ಕೇಸರಿ ಶಾಲ್ ವಿವಾದ ಕಾಲಿಟ್ಟಿದೆ.
ಇಂಡಿ ತಾಲೂಕಿನ ಬಳಿಕ ಬಸವನ ಬಾಗೇವಾಡಿ ತಾಲ್ಲೂಕಿನಲ್ಲೂ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕಾಣಿಸಿಕೊಂಡಿದ್ದು, ಹಿಜಾಬ್ ಧರಿಸದಂತೆ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಬಸವೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿಕೊಂಡು ಬಂದು ಪ್ರತಿಭಟಿಸಿದ್ದಾರೆ.
ಹಿಜಾಬ್ ಧರಿಸಿದವರನ್ನು ಕೂಡಲೇ ಕಾಲೇಜಿನಿಂದ ಹೊರ ಹಾಕುವಂತೆ ಪ್ರತಿಭಟನಾ ನೀರತ ವಿದ್ಯಾರ್ಥಿಗಳು ಪಟ್ಟು ಹಿಡಿದು, ತರಗಿತಿಗಳನ್ನು ಬಹಿಷ್ಕರಿಸಿದ್ದಾರೆ.

ಜೈ ಶ್ರೀರಾಮ ಘೋಷಣೆ
ಅವರು ಹಿಜಾಬ್ ಧರಿಸಿದರೆ ನಾವು ಕೆಸರಿ ಶಾಲ ಧರಿಸುತ್ತೆವೆ ಎಂದು ಜೈ ಶ್ರೀರಾಮ ಘೋಷಣೆ ಕೂಗುತ್ತ ಕಾಲೇಜು ಆವರಣದಲ್ಲೇ ವಿದ್ಯಾರ್ಥಿಳು ಧರಣಿ ಕುಳಿತಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಎಸ್.ಡಿ.ಎಂ.ಸಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳುವ ಭರವಸೆ ನೀಡಿ ಪ್ರಾಂಶುಪಾಲುರು ಕಾಲೇಜಿಗೆ ರಜೆ ಘೋಷಷಿಸಿದ್ದಾರೆ.