ಕಾಲೇಜು ವಿದ್ಯಾರ್ಥಿನಿ ಪ್ರಬುದ್ದ (Student prabhuddha murder case) ಬರ್ಬರ ಕೊಲೆ ಪ್ರಕರಣವನ್ನ ಸಿಐಡಿ (CID) ತನಿಖೆಗೆ ವಹಿಸಿ ಸಿಎಂ ಸಿದ್ದರಾಮಯ್ಯ (CM Siddaramaiah)ಆದೇಶ ಹೊರಡಿಸಿದ್ದಾರೆ.

ಮೇ 15 ರಂದು ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ವಿದ್ಯಾರ್ಥಿನಿ ಪ್ರಬುದ್ದ ಮನೆಯಲ್ಲಿ ಈ ಹತ್ಯೆ ನಡೆದಿತ್ತು.

ಈ ಬಗ್ಗೆ ಪ್ರಬುದ್ದ ತಾಯಿ ಸಾಮಾಜಿಕ ಕಾರ್ಯಕರ್ತೆ ಕೆ.ಆರ್. ಸೌಮ್ಯ ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ತೆರಳಿ ಸಿಐಡಿ ಕೇಸ್ ವರ್ಗಾಯಿಸುವಂತೆ ಸಿಎಂಗೆ ಮನವಿ ಮಾಡಿಕೊಂಡಿದ್ದರು.
ಈ ಮನವಿಯನ್ನು ಸಿಎಂ ಸಿದ್ದರಾಮಯ್ಯ ಪುರಸ್ಕರಿಸಿದ್ದು ,ಪ್ರಕರಣದ ತನಿಖೆ ಸಿಐಡಿ ಗೆ ವರ್ಗಾಯಿಸುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ.