ಪ್ರಾಯೋಗಿಕ ಪರೀಕ್ಷೆಯಲ್ಲಿ ಶಿಕ್ಷಕರು ಕಡಿಮೆ ಅಂಕ ನೀಡಿದ್ದಾರೆ ಎಂದು ಕುಪಿತಗೊಂಡ ವಿದ್ಯಾರ್ಥಿಗಳ ಗುಂಪೊಂದು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಾರ್ಖಂಡ್ನ ಡುಮ್ಕಾದಲ್ಲಿ ನಡೆದಿದೆ.
ಡುಮ್ಕಾ ನಗರ ಗೋಪಿಕಂದರ್ ಸರ್ಕಾರಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು 9ನೇ ತರಗತಿಯ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ 32 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಅನುತ್ತೀರ್ಣವಾಗಿರುವುದು ಕಂಡು ಬಂದಿದೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿಗಳು ಶಿಕ್ಷಕ ಹಾಗೂ ಗುಮಾಸ್ತನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ಕುರಿತಂತೆ ಯಾವುದೇ FIR ದಾಖಲಾಗಿಲ್ಲ ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ದಾಖಲಿಸುವಂತೆ ಸೂಚಿಸಿದ್ದರು ಸಹ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆ ದೂರನ್ನ ನೀಡಿಲ್ಲ ಎಂದು ಗೋಪಿಕಂದರ್ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಭಕ್ತ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಶಿಕ್ಷಕ ಹಾಗೂ ಗುಮಾಸ್ತನನ್ನು ಸುಮನ್ ಕುಮಾರ್ ಮತ್ತು ಸೋನೆರಾಮ್ ಚೌರೆ ಎಂದು ಗುರುತಿಸಲಾಗಿದೆ. ವಸತಿ ಶಾಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಿದ್ದು ಘಟನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಶಿಕ್ಷಕ ಈ ಹಿಂದೆ ಶಾಲೆಯ ಮುಖ್ಯೋಪಾಧ್ಯಯರಾಗಿದ್ದರು ಆದರೆ, ಕಾರಣಾಂತರಗಳಿಂದ ಅವರನ್ನು ಕೆಳಗಿಳಿಸಲಾಗಿತ್ತು. ಶಿಕ್ಷಕರ ನಡುವಿ ವೈಷಮ್ಯದಿಂದಾಗಿ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಲೆಗೆ ಎರಡು ದಿನ ರಜೆ ಘೋಷಿಸಲಾಗಿದ್ದು ಮಕ್ಕಳನ್ನು ಅವರವರ ಊರುಗಳಿಗೆ ಕಳುಹಿಸಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಇತ್ತ ಘಟನೆ ಕುರಿತು ಮಾತನಾಡಿರುವ ವಿದ್ಯಾರ್ಥಿಗಳು ಶಿಕ್ಷಕರು ನಮ್ಮಗೆ ಪರೀಕ್ಷೆಯಲ್ಲುಇ ಅನುತ್ತೀರ್ಣವಾಗುವಷ್ಟು ಅಂಕಗಳನ್ನು ಕೊಟ್ಟಿದ್ದಾರೆ. ಜೆಎಸಿ ವೆಬ್ ಸೈಟ್ಗೆ ಅಂಕಗಳನ್ನು ಅಪ್ಲೋಡ್ ಮಾಡಿದ್ದು ಗುಮಾಸ್ತ. ಪ್ರಾಯೋಗಿಕ ಪರೀಕ್ಷೆಗಳ ಅಂಕಗಳನ್ನು ಅಪ್ಲೋಡ್ ಮಾಡಿದ ದಿನಾಂಕವನ್ನ ಆಡಳಿತ ಮಂಡಳಿ ತಿಳಿಸುವಲ್ಲಿ ವಿಫಲವಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಇತ್ತ ವಿದ್ಯಾರ್ಥಿಗಳು ಯಾವುದರಲ್ಲಿ ಪ್ರಾಕ್ಟಿಕಲ್ ಅಥಬಾ ಥಿಯೇರಿ ಯಾವುದರಲ್ಲಿ ಅನುತ್ತೀರ್ಣವಾಗಿದ್ದೀವಿ ಎಂಬುದು ನಮ್ಮಗೆ ಇಲ್ಲಿಯವರೆಗೆ ತಿಳಿದಿಲ್ಲ ವದಂತಿಗಳಿಗೆ ಕಿವಿಕೊಟ್ಟು ಹಲ್ಲೆ ನಡೆಸಿದ್ದಾರೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.