ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ MBBS ವಿದ್ಯಾರ್ಥಿನಿ ರಜಿಯಾ ಬಾಗಿ ಯುದ್ದಬಾಧಿತ ಉಕ್ರೇನ್ನಲ್ಲಿ ಸಿಲುಕಿರುವುದರಿಂದ ಅವರ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು CRPF ಯೋಧ ಯಾಸಿನ್ ಬಾಗಿ ಸರ್ಕಾರಕ್ಕೆ ಮನವಿ ಮಾಡಿದ್ದು, ಪುತ್ರಿಯನ್ನ ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾಸಿನ್ ಎರಡು ದಿನಗಳಿಂದ ಪುತ್ರಿ ಸಂಪರ್ಕಕ್ಕೆ ಸಿಕ್ಕಿಲ್ಲವಾದ್ದರಿಂದ ಹೆಚ್ಚು ಭೀತಿಗೊಂಡಿದ್ದಾರೆ.
ಈ ಕುರಿತು ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಯಾಸಿನ್, ಪುತ್ರಿ MBBS ವ್ಯಾಸಂಗ ಮಾಡಲು ಉಕ್ರೇನ್ಗೆ ಹೋಗಿದ್ದಾಳೆ. ಇಷ್ಟರಲ್ಲೇ ಸೆಮಿಸ್ಟರ್ ರಜೆ ಸಮೀಪಿಸುತ್ತಿದ್ದ ಕಾರಣ ಭಾರತಕ್ಕೆ ವಾಪಸ್ ಬರಲು ಟಿಕೆಟ್ ಕಾಯ್ದಿರಿಸಿದ್ದೇವು ಎರಡು ದಿನಗಳ ಹಿಂದೆ ಕರೆ ಮಾಡಿದಾಗ ನಾವು ಬಂಕರ್ನಲ್ಲಿ ಸುರಕ್ಷಿತವಾಗಿದ್ದೇವೆ ನಾವು ನೆಲೆಸಿರುವ ಪ್ರದೇಶದ ಸುತ್ತಮುತ್ತ ಬಾಂಬ್ ದಾಳಿಯಾಗುತ್ತಿದೆ ನಾವು ತೀವ್ರ ತೊಂದರೆಯಲ್ಲಿದ್ದೇವೆ ಇಲ್ಲಿ ಕುಡಿಯಲು ನೀರು ಸಹ ಸಿಗುತ್ತಿಲ್ಲ ಎಂದು ಹೇಳಿದ್ದಳು. ಆ ನಂತರ ಅವಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿರುವ ಯಾಸಿನ್ ತಮ್ಮ ಪುತ್ರಿ ಸೇರಿದಂತೆ ದೇಶದ ಹಾಗೂ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಹಾಗೂ ನಾಗರೀಕರನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಅಧಿಕಾರಿಗಳಿಗೆ ಈಗಾಗಲೇ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೆ, ಆಕೆ ಸುರಕ್ಷಿತವಾಗಿದ್ದಾಳೆ ಅಥವಾ ಅವಳನ್ನು ಕರೆದುಕೊಂಡು ಬರುತ್ತಿದ್ದಾರ ಎಂಬ ಬಗ್ಗೆ ಅಧಿಕಾರಿಗಳು ನಮ್ಮಗೆ ಮಾಹಿತಿ ನೀಡಿಲ್ಲ ಕೂಡಲೇ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.